ಚಡಚಣ[ಅ.4]: ಮದ್ಯ ಕುಡಿಯಲು 500 ರೂ. ಕೊಡದ್ದಕ್ಕೆ ಮಗನೊಬ್ಬ ತನ್ನ ಸ್ವಂತ ತಂದೆಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಭೀಮಾತೀರದ ಟಾಕಳಿ ಗ್ರಾಮದ ತೋಟದ ಮನೆಯಲ್ಲಿ ಬುಧವಾರ ರಾತ್ರಿ ಸಂಭ​ವಿ​ಸಿದೆ. 

ಕೊಲೆ​ಗೀ​ಡಾದ ವ್ಯಕ್ತಿಯನ್ನು ಅಣ್ಣಪ್ಪ ತೊರವಿ (55) ಎಂದು ಗುರುತಿಸಲಾಗಿದೆ . ಮದ್ಯ ವ್ಯಸನಿಯಾಗಿದ್ದ ಸಂಜೀವ ತೊರವಿ (27) ತಂದೆಯನ್ನೇ ಕೊಲೆ ಮಾಡಿದ ಆರೋಪಿ.ಯಾಗಿದ್ದಾನೆ. ಬುಧವಾರ ಬೆಳಗ್ಗೆ ತಂದೆ ಅಣ್ಣಪ್ಪ ತೊರವಿ ಅವರಿಂದ 1 ಸಾವಿರ ಹಣ ಪಡೆದು ದಿನ ಪೂರ್ತಿ ಕುಡಿದು ಮನೆಗೆ ಬಂದಿದ್ದಾನೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪತ್ನಿಗೆ ಮನಬಂದಂತೆ ಹೊಡೆಯತೊಡಗಿದ್ದಾನೆ. ಅದನ್ನು ನೋಡಿದ ತಂದೆ ಹೊಡೆ​ಯು​ವು​ದನ್ನು ಬಿಡಿ​ಸಿ​ದ್ದಾನೆ. ನಂತರ ಮತ್ತೆ ಮದ್ಯ ಕುಡಿ​ಯಲು 500 ಕೊಡುವಂತೆ ತಂದೆ ಬಳಿ ಕೇಳಿದ್ದಾನೆ. ನನ್ನ ಹತ್ತಿರ ಹಣ ಇಲ್ಲ. ಬೇಕಾದರೆ ನನ್ನ ಜೀವ ತಗೋ ಎಂದು ತಲೆ ಬಾಗಿಸಿ ನಿಂತಾಗ ಕೊಡಲಿ ತೆಗೆದುಕೊಂಡು ಕೊಚ್ಚಿ ತಂದೆ​ಯ ರುಂಡವನ್ನೇ ಕಡಿದಿದ್ದಾನೆ. 

ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಚಡಚಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.