Asianet Suvarna News Asianet Suvarna News

ಬಸ್ ಕಿಟಕಿಯಲ್ಲಿ ಕೈ ಚಾಚಿ ಕೂರುವ ಮುನ್ನ ಹುಷಾರ್: ನಿಮಗೂ ಹೀಗೆ ಆದೀತು..!

*  ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದ ಘಟನೆ
*  ಅಂಕೋಲಾದಿಂದ ಶಿರಸಿಗೆ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ನಡೆದ ದುರ್ಘಟನೆ
*  ನಿದ್ರೆ ಮಂಪರಿನಲ್ಲಿ ಕಿಟಕಿಯಿಂದ ಕೈ ಹೊರ ಚಾಚಿದ್ದ ನದೀಮ್‌ 
 

Person Hand Cut While Bus Travelling at Sirsi in Uttara Kannada grg
Author
Bengaluru, First Published Sep 26, 2021, 2:16 PM IST
  • Facebook
  • Twitter
  • Whatsapp

ಹಾವೇರಿ(ಸೆ.26): ಬಸ್ ಕಿಟಕಿಯಲ್ಲಿ ಕೈ ಹೊರ ಚಾಚಿ ಕುಳಿತವನ ಕೈ ಕಟ್ ಆದ ಘಟನೆ ಉತ್ತರ ಕನ್ನಡ(Uttara Kannada) ಜಿಲ್ಲೆಯ  ಶಿರಸಿಯಲ್ಲಿ ಇಂದು(ಭಾನುವಾರ) ನಡೆದಿದೆ. ಹಾವೇರಿ(Haveri) ಜಿಲ್ಲೆಯ ಹಿರೇಕೇರೂರು ಪಟ್ಟಣದ ನದೀಮ್ ತಾವರಗಿ ಎಂಬ ವ್ಯಕ್ತಿಯ ಕೈ ಕಟ್ ಆಗಿದೆ. 

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಿಂದ ಶಿರಸಿಗೆ ಬಸ್‌ನಲ್ಲಿ(Bus) ಪ್ರಯಾಣಿಸುತ್ತಿದ್ದ ವೇಳೆ ನದೀಮ್ ತಾವರಗಿ ಕುಳಿತ ಸೀಟಿನಲ್ಲಿ ನಿದ್ರೆಗೆ ಜಾರಿದ್ದರು. ನಿದ್ರೆ ಮಂಪರಿನಲ್ಲಿ ಕಿಟಕಿಯಿಂದ ನದೀಮ್‌ ಕೈ ಹೊರ ಚಾಚಿದ್ದರು. ಈ ಸಂದರ್ಭದಲ್ಲಿ ಎದುರಿನಿಂದ ವೇಗವಾಗಿ ಚಲಿಸುತ್ತಿದ್ದ ಲಾರಿ ಕೈಗೆ ತಾಗಿದೆ. ಲಾರಿ ವೇಗಕ್ಕೆ ಕೈ ಕತ್ತರಿಸಿ ರೋಡಿನಲ್ಲಿ ಬಿದ್ದಿದೆ ಎಂದು ತಿಳಿದು ಬಂದಿದೆ. 

ವಿಜಯಪುರ: ಅಪಘಾತ, ಮೂವರು ಜನ, ಎಂಟು ಎಮ್ಮೆ ಸಾವು

ಈ ವೇಳೆ ಹೆಚ್ಚಿನ ಚಿಕಿತ್ಸೆಗಾಗಿ ನದೀಮ್ ತಾವರಗಿ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.  ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನದೀಮ್ ಇದೀಗ ಒಂದು ಕೈ ಕಳೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
 

Follow Us:
Download App:
  • android
  • ios