Asianet Suvarna News Asianet Suvarna News

ಕುಷ್ಟಗಿ: ತಳ್ಳುವ ಗಾಡಿಯಲ್ಲಿ ತಾಯಿ ಚಿಕಿತ್ಸೆಗೆ ಕರೆತಂದ ಮಗ

ಹೆತ್ತ ತಾಯಿಯನ್ನು ಮೂರು ಕಿಮೀ ದೂರದಿಂದ ತಳ್ಳುಗಾಡಿಯಲ್ಲಿ ಆಸ್ಪ​ತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ ಮಗ| ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನಡೆದ ಘಟನೆ| ಚುಂಜ​ಲ​ಕೊ​ಪ್ಪದ ಗ್ರಾಮಕ್ಕೆ ಬಸ್‌ ಸೌಕರ್ಯವಿಲ್ಲ| ಬಹುತೇಕರು ಮೂರು ಕಿಮೀ ದೂರ ಇರುವ ಚಳಗೇರಾ ಆಸ್ಪತ್ರೆಗೆ ಕಾಲ್ನಡಿಯೇ ಬರ​ಬೇ​ಕಿದೆ|

Person Faces Problems for Treatment of Mother in Kushtagi in Koppal District
Author
Bengaluru, First Published Sep 4, 2020, 1:20 PM IST

ಕುಷ್ಟಗಿ(ಸೆ.04): ಚುಂಜ​ಲ​ಕೊ​ಪ್ಪದ ಹನುಮಂತಪ್ಪ ದಾಸರ ಗುರು​ವಾ​ರ ಹೆತ್ತ ತಾಯಿಯನ್ನು ಮೂರು ಕಿಮೀ ದೂರದಿಂದ ತಳ್ಳುಗಾಡಿಯಲ್ಲಿ ಆಸ್ಪ​ತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದಾರೆ. ಬಸ್‌, ಖಾಸ​ಗಿ ವಾಹನ ಸೌಕ​ರ್ಯ​ವಿ​ಲ್ಲ​ದ ಕಾರಣ ತಳ್ಳು​ ಗಾಡಿ​ಯಲ್ಲಿ ತಾಯಿಯನ್ನು ಕರೆ ತಂದು ಚಿಕಿತ್ಸೆ ಕೊಡಿಸಿ ಗಮನ ಸೆಳೆ​ದಿ​ದ್ದಾ​ರೆ.

ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಾಯಿ ಹನಮವ್ವ ಅವ​ರ​ನ್ನು ಸುಮಾರು ಮೂರು ಕಿಮೀ ದೂರದ ಚಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀರು ತರುವ ತಳ್ಳುಗಾಡಿಯಲ್ಲಿ ಕರೆತರಬೇಕಾದ ಅನಿವಾರ್ಯತೆ ಉಂಟಾಗಿದೆ. ಯುವಕ ಹನಮಂತಪ್ಪ ದಾಸರ ಕುರಿ ಕಾಯುವ ಕಾಯಕ ಮಾಡುತ್ತಾರೆ.

ಕೋವಿಡ್‌ಗೆ ಪೊಲೀಸ್‌ ಬಲಿ, ವೈದ್ಯರ ಮೇಲೆ ಹಲ್ಲೆ, ಗಲಾಟೆ

ಈ ಗ್ರಾಮಕ್ಕೆ ಬಸ್‌ ಸೌಕರ್ಯವಿಲ್ಲ. ಖಾಸಗಿ ವಾಹನಗಳ ಓಡಾಟವೂ ಅಷ್ಟಕ್ಕಷ್ಟೇ. ಹೀಗಾಗಿ, ಬಹುತೇಕರು ಮೂರು ಕಿಮೀ ದೂರ ಇರುವ ಚಳಗೇರಾ ಆಸ್ಪತ್ರೆಗೆ ಕಾಲ್ನಡಿಯೇ ಬರ​ಬೇ​ಕಿದೆ. ನಿತ್ಯ ಒಂದಲ್ಲ ಒಂದು ಸಂಕಷ್ಟ ಎದುರಿಸುತ್ತ ಇಲ್ಲಿನ ಜನ ಕಾಲ ಕಳೆಯುವ ಪರಿಸ್ಥಿತಿ ಮಾತ್ರ ನಿಂತಿಲ್ಲ. ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಈ ಬಗ್ಗೆ ಕಾಳಜಿ ವಹಿಸಬೇಕು ಎಂದು ಇಲ್ಲಿನ ಸಾರ್ವಜನಿಕರು ಒತ್ತಾಯಿಸಿದ್ದಾರೆ.
 

Follow Us:
Download App:
  • android
  • ios