ಬಳ್ಳಾರಿ(ಆ.15): ರಸ್ತೆ‌ ವಿಸ್ತರಣೆ ಸಲುವಾಗಿ ಸರ್ಕಾರಿ ಶಾಲೆಯ ಕಾಂಪೌಂಡ್‌ ಕೆಡವುತ್ತಿದ್ದ ಸಂದರ್ಭದಲ್ಲಿ ಗೋಡೆ ಕುಸಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶನಿವಾರ ನಗರದ ತಾಳೂರು ರಸ್ತೆಯ ಬಳಿ ನಡೆದಿದೆ. ಮೃತಪಟ್ಟರನ್ನ ಮಹಾನಂದಿಕೊಟ್ಟಂ ನಿವಾಸಿ ಗೋವಿಂದಪ್ಪ (50) ಎಂದು ಗುರುತಿಸಲಾಗಿದೆ.

ಸುಮಾರು 10 ಅಡಿ ಎತ್ತರದ ಕಾಂಪೌಂಡ್ ಗೋಡೆಯ ಒಂದು ತುದಿಯನ್ನು ಬಲ್ಡೋಜರ್‌ ವಾಹನದಿಂದ ಕೆಡವುತ್ತಿದ್ದಾಗ ಗೋಡೆಯ ಇನ್ನೊಂದು ತುದಿಯಲ್ಲಿ ಎಂದಿನಂತೆ ಗೋವಿಂದಪ್ಪ ಕುಳಿತಿದ್ದಾಗ ಗೋಡೆ ಏಕಾಏಕಿ ಉರುಳಿಬಿದ್ದಿದೆ. ಅವರೊಂದಿಗೇ ಕುಳಿತಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಸ್ಟಾರ್ಟ್‌ ಆಗದ ಪೊಲೀಸ್‌ ವಾಹನ: ತಳ್ಳಿ ಚಾಲು ಮಾಡಿದ ಆರಕ್ಷಕರು..!

ಘಟನೆ ಬಳಿಕ ಬಲ್ಡೋಜರ್‌ ವಾಹನದ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.