ಕೂಡ್ಲಿಗಿ: ಚಿರತೆ ನೋಡಿ ಯುವಕ ಸಾವು

ಚಿರತೆಯಿಂದ ತಪ್ಪಿಸಿಕೊಳ್ಳಲು ಓಡಿ ಹೋಗುತ್ತಿದ್ದಾಗ ಹೃದಯಾಘಾತದಿಂದ ಯುವಕ ಸಾವು| ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನಂ. 10 ಮಲ್ಲಾಪುರ ಗ್ರಾಮದ ನಿಡುಗುರ್ತಿ ಅರಣ್ಯ ಪ್ರದೇಶದಲ್ಲಿ ನಡೆದ ಘಟನೆ| ಕೂಡ್ಲಿಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 

Person Dies After Saw Leopard in Kudligi in Ballari District grg

ಕೂಡ್ಲಿಗಿ(ಜ.14): ದನ ಮೇಯಿಸಲು ಹೋಗಿದ್ದ ಇಬ್ಬರು ವ್ಯಕ್ತಿಗಳಿಗೆ ಕಾಡಿನಲ್ಲಿ ಚಿರತೆ ಕಂಡಿದ್ದು, ಅದರಿಂದ ತಪ್ಪಿಸಿಕೊಳ್ಳಲು ಓಡಿ ಹೋಗುತ್ತಿದ್ದಾಗ ಒಬ್ಬ ಯುವಕ ಬಿದ್ದು ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ಕೂಡ್ಲಿಗಿ ಪೊಲೀಸ್‌ ಠಾಣೆ ವ್ಯಾಪ್ತಿಯ ಸಂಡೂರು ತಾಲೂಕಿನ ನಂ. 10 ಮಲ್ಲಾಪುರ ಗ್ರಾಮದ ನಿಡುಗುರ್ತಿ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಸಂಡೂರು ತಾಲೂಕು ನಂ. 10 ಮಲ್ಲಾಪುರ ಗ್ರಾಮದ ಮೈಲಪ್ಪ(35) ಎಂಬವರೇ ಮೃತಪಟ್ಟ ವ್ಯಕ್ತಿ. ಜತೆಗಿದ್ದ ವೀರೇಶ ಅದೃಷ್ಟವಶಾತ್‌ ಪಾರಾಗಿದ್ದಾರೆ. ಇಬ್ಬರೂ ಚಿರತೆ ನೋಡಿ ಓಡಿ ಹೋಗುತ್ತಿರುವಾಗ ಈ ದುರ್ಘಟನೆ ನಡೆದಿದೆ. ಮೈಲಪ್ಪ ಚಿರತೆ ನೋಡಿ ಓಡಿ ಹೋಗುತ್ತಿರುವಾಗ ಒಮ್ಮೇಲೆ ನೆಲಕ್ಕೆ ಬಿದ್ದಿದ್ದಾರೆ. 

ಬಳ್ಳಾರಿ ಜಿಲ್ಲೆ ವಿಭಜನೆಗೆ ಕಾಂಗ್ರೆಸ್‌ ವಿರೋಧ

ಮೈಲಪ್ಪ ಮೇಲಕ್ಕೆ ಏಳದಿದ್ದಾಗ ಜತೆಯಿದ್ದ ವೀರೇಶ ಮೊಬೈಲ್‌ ಮೂಲಕ ಸಂಬಂಧಿಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅರಣ್ಯಕ್ಕೆ ಬಂದು ನೋಡಿದಾಗ ಮೈಲಪ್ಪ ಮೃತಪಟ್ಟಿದ್ದ. ಶವವನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಬಗ್ಗೆ ಮೃತರ ಪತ್ನಿ ಹೊನ್ನೂರಮ್ಮ ನೀಡಿದ ದೂರಿನ ಮೇರೆಗೆ ಕೂಡ್ಲಿಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Latest Videos
Follow Us:
Download App:
  • android
  • ios