Asianet Suvarna News Asianet Suvarna News

ಮ್ಯಾಟ್ರಿಮೋನಿಯಲ್ಲಿ ಪರಿಚಯ: ಮದುವೆಯ ಆಸೆ ತೋರಿಸಿ ಯುವತಿಗೆ 11 ಪಂಗನಾಮ!

ಆನ್ಲೈನ್ ವಂಚನೆ: ಮದುವೆ ಆಗುವುದಾಗಿ ನಂಬಿಸಿ 11 ಲಕ್ಷ ಪಂಗನಾಮ|ಹುಬ್ಬಳ್ಳಿಯಲ್ಲಿ ನಡೆದ ಘಟನೆ| ಹಣ ಕಳೆದುಕೊಂಡ ಹೊರ ರಾಜ್ಯದ ಯುವತಿ| ಈ ಸಂಬಂಧ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಮೋಸ ಹೋದ ಯುವತಿ| 

Person Cheat to Girl in Hubballi
Author
Bengaluru, First Published Mar 28, 2020, 7:26 AM IST

ಹುಬ್ಬಳ್ಳಿ(ಮಾ.28): ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಬ್ಯಾಂಕ್ ಉದ್ಯೂಗಿಯಾದ ಯುವತಿಗೆ ಬರೋಬ್ಬರಿ 11.78 ಲಕ್ಷ ರು. ವಂಚಿಸಿ ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.

ಹೊರ ರಾಜ್ಯದ ಯುವತಿ ಹಣ ಕಳೆದುಕೊಂಡಿದ್ದಾಳೆ. ಮ್ಯಾರೇಜ್ ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಪರಿಚಯವಾದ ಯುವಕ ತಾನು ದುಬೈನಲ್ಲಿ ಕೆಲಸ ಮಾಡುತ್ತಿರುವುದಾಗಿ (ಎನ್ ಆರ್ ಐ) ಎಂದು ನಂಬಿಸಿದ್ದ. ಯುವತಿ ಆತನ ಸ್ನೇಹ ಬೆಳೆಸಿಕೊಂಡುಬ ಹಲವು ಬಾರಿ ದೂರವಾಣಿಯಲ್ಲಿ ಮಾತನಾಡಿದ್ದಾಳೆ.

ಸಾವಿಗೆ ಕಾಲು ನೋವು ಕಾರಣ ಎಂದು ಬರೆದಿಟ್ಟು ಶಿಕ್ಷಕಿ ಆತ್ಮಹತ್ಯೆ

ಈಕೆಯನ್ನು ಮದುವೆ ಆಗುವುದಾಗಿ ಹೇಳಿದ ಆತ ದುಬೈನಿಂದ ಕೆಲಸದ ನಿಮಿತ್ತ ಬೇರೆ ದೇಶಕ್ಕೆ ಹೋಗುತ್ತಿದ್ದು ಆಭರಣ ಸೇರಿ ಬೆಲೆ ಬಾಳುವ ವಸ್ತುಗಳನ್ನು ನಿನಗೆ ಕಳುಹಿಸುವುದಾಗಿ ನಂಬಿಸಿದ್ದಾನೆ. ಇದನ್ನು ನಂಬಿದ ಯುವತಿಗೆ ಕೆಲ ದಿನಗಳ ನಂತರ ಏರ್ ಪೋರ್ಟ್ ಕಸ್ಟಮ್ ಆಫೀಸರ್ ಎಂದು ಕರೆ ಬಂದಿದೆ. ಕರೆ ಮಾಡಿದ ಮಹಿಳೆ ಬೆಲೆಬಾಳುವ ವಸ್ತುಗಳು ದುಬೈನಿಂದ ಬಂದಿದ್ದು, 17,600 ರು. ಶುಲ್ಕ ಭರಿಸಬೇಕೆಂದು ತಿಳಿಸಿದ್ದಾರೆ.

ಯುವತಿ, ಕಸ್ಟಮ್ ಆಫೀಸರ್ ನೀಡಿದ್ದ ಬ್ಯಾಂಕ್ ಖಾತೆಗೆ ಆನ್ ಲೈನ್ ಮೂಲಕ ಹಣ ವರ್ಗಾಯಿದ್ದಾರೆ. ನಂತರ ಹೀಗೆ ವಿವಿಧ ಶುಲ್ಕ ಎಂದು 11.78  ಲಕ್ಷ ರು. ಭರಿಸಿಕೊಂಡು ಬಳಿಕ ಸಂಪರ್ಕದಿಂದ ದೂರವಾಗಿದ್ದಾರೆ. ಇತ್ತ ಪಾರ್ಸೆಲ್ ಇಲ್ಲ, ಅತ್ತ ಪರಿಚಯವಾದ ವ್ಯಕ್ತಿಯೂ ಪತ್ತೆಯಿಲ್ಲ. ನೊಂದ ಯುವತಿ ಇಲ್ಲಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪಾಸ್‌ವರ್ಡ್‌ ಕದ್ದು 3.66 ಕೋಟಿ ಬಿಟ್‌ ಕಾಯಿನ್‌ ದೋಚಿದ ಕಳ್ಳರು!

ಕೊರೊನಾ ವೈರಸ್ ಭೀತಿಯಲ್ಲಿ ಕಳೆದ ಭಾನುವಾರದಿಂದ ಹು-ಧಾ ಕಮೀಷನರ್ ವ್ಯಾಪ್ತಿಯಲ್ಲಿ ಯಾವುದೇ ಗಂಭೀರ ಪ್ರಕರಣ ದಾಖಲಾಗಿಲ್ಲ. ಆದರೆ, ಸೈಬರ್ ಠಾಣೆಯಲ್ಲಿ ಈ ಅವಧಿಯಲ್ಲಿ 3 ಪ್ರಕರಣಗಳು ದಾಖಲಾಗಿವೆ.
 

Follow Us:
Download App:
  • android
  • ios