"

ಬಾಗಲಕೋಟೆ(ಜೂ.11): ಎರಡು ಮೊಲಗಳನ್ನ ಕೊಂದು, ನವಿಲನ್ನು ಹಿಂಸಿಸಿ ಯುವಕನೊಬ್ಬ ಟಿಕ್‌ಟಾಕ್ ಮಾಡಿದ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ. ಈ ಯುವಕ ಟಿಕ್‌ಟಾಕ್‌ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಂತೋಷ ಪಡುತ್ತಿದ್ದ ಎಂದು ತಿಳಿದು ಬಂದಿದೆ.

ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟು ವಿಚಿತ್ರವಾಗಿ ಆನಂದ ಅನುಭವಿಸಿದ್ದ ಯುವಕನನ್ನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ವಿಠ್ಠಲ ವಾಲಿಕಾರ ಎಂಬಾತನೇ ನವಿಲಿನ ಜೊತೆ ಟಿಕ್‌ಟಾಕ್‌ ವಿಡಿಯೋ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳ ಅತಿಥಿಯಾಗಿದ್ದಾನೆ. 

ಭಕ್ತರಿಗೆ ದರ್ಶನ ಕೊಟ್ಟ ಬನಶಂಕರಿ; ಬಾದಾಮಿಯಲ್ಲಿ ಹೀಗಿದೆ ವ್ಯವಸ್ಥೆ

ಯುವಕನ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಬಂಧಿತ ಅರೋಪಿ ಮಾದಾಪುರ ಗುಡ್ಡದಲ್ಲಿ ಎರಡು  ಮೊಲ ಕೊಂದು, ನವಿಲು ಹಿಡಿದು ಟಿಕ್‌ಟಾಕ್ ಮಾಡಿದ್ದ, ರಾಷ್ಟ್ರ ಪಕ್ಷಿ ನವಿಲಿಗೆ ಹಿಂಸೆ ಹಾಗೂ ಮೊಲ ಬಲಿ ಕಾನೂನಿನನ್ವಯ ಅಪರಾಧವಾಗಿದೆ. ಹೀಗಾಗಿ ಹುನಗುಂದ ಉಪವಲಯ ಅರಣ್ಯಾಧಿಕಾರಿ ವಿಜಯಕುಮಾರ್, ವಲಯ ಅರಣ್ಯಾಧಿಕಾರಿ ವಿರೇಶ್, ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸಲಾಗಿದೆ.