ಗದಗ(ಸೆ.04): ರಾಜ್ಯ, ದೇಶದೆಲ್ಲೆಡೆ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಮಾರಾಟ, ಸೇವನೆ ವ್ಯಾಪಕ ಚರ್ಚೆಯಾಗುತ್ತಿರುವ ಮಧ್ಯೆಯೇ ಗದಗ ಜಿಲ್ಲೆಯಲ್ಲೂ ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಟಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯ ನರಸಾಪೂರ ನೇಕಾರ ಕಾಲೋನಿಯಲ್ಲಿ ರಾಜಾರೋಷವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆಟೋ ಚಾಲಕ ಮಂಜುನಾಥ ಕಾಳೆ ಎಂಬಾತನನ್ನು ಬಂಧಿಸಿರುವ ಬೆಟಗೇರಿ ಪೊಲೀಸರು ಆತನಿಂದ 1358 ಗ್ರಾಂ ನಿಷೇಧಿತ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಕೊರೋನಾ ಭಯ: ಆಸ್ಪತ್ರೆ ಮೇಲಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆಗೆ ಶರಣು

ಇದು ಬೆಳಕಿಗೆ ಬಂದ ಒಂದು ಪ್ರಕರಣ ಮಾತ್ರ. ಆದರೆ ಜಿಲ್ಲೆಯ ಹಲವು ಪ್ರದೇಶದಲ್ಲಿ ಗಾಂಜಾ ಬೆಳೆಯುವುದರ ಜೊತೆ ಮಾರಾಟ ಜಾಲವೂ ಪ್ರಬಲವಾಗಿದ್ದು, ಪೊಲೀಸರು ಇನ್ನಷ್ಟುದಾಳಿ ನಡೆಸಿ ಇದನ್ನು ಪತ್ತೆಹಚ್ಚಬೇಕಾಗಿದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ. ಈ ಕುರಿತು ಬೆಟಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.