ಬೆಳಗಾವಿ(ಮೇ.04): ಲಾಕ್‌ಡೌನ್‌ ಸಂದರ್ಭದಲ್ಲಿ ತಲವಾರ್‌ನಿಂದ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. 

ತಾಲೂಕಿನ ಪಂತ ಬಾಳೇಕುಂದ್ರಿ ಗ್ರಾಮದ ಪ್ರೇಮ್‌ ಅಶೋಕ ಕೋಲಕಾರ್‌(26) ತನ್ನ ಹುಟ್ಟುಹಬ್ಬದ ಅಂಗವಾಗಿ ಕೇಕ್‌ ಕತ್ತರಿಸಲು ತಲವಾರ್‌ ಬಳಸಿದ್ದ ಹಾಗೂ ಕೇಕ್‌ ಮೇಲೆ ಫ್ಯೂಚರ್‌ ಎಂಎಲ್‌ಎ ಪ್ರೇಮ್‌ ಎಂದು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹರಿಬಿಟ್ಟಿದ್ದ ಎನ್ನಲಾಗಿದೆ. 

ಮಗಳನ್ನು ಮುದ್ದು ಮಾಡದ ಸ್ಥಿತಿ ಯಾರಿಗೂ ಬರಬಾರದು; ಬೆಳಗಾವಿಯ ಸ್ಟಾಫ್‌ ನರ್ಸ್‌ ಭಾವುಕ ಕಥನ!

ಈ ಸಂಬಂಧ ಮಾರಿಹಾಳ ಠಾಣೆಯ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.