ಮುಂಡಗೋಡ: ಬೌದ್ಧ ಸನ್ಯಾಸಿ ದೇಹತ್ಯಾಗ ಮಾಡಿ 10 ದಿನವಾದರೂ ನಿತ್ಯಪೂಜೆ..!

*  ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ನಡೆದ ಘಟನೆ
*  ಬೌದ್ಧ ಮಠದ ಹಿರಿಯ ಸನ್ಯಾಸಿ ಯಾಶಿ ಪೋನತ್ಸೊ ನಿಧನ
*  ಪ್ರಾಣ ಹೋಗಿದೆ ಆತ್ಮ ಇಲ್ಲಿಯೇ ಇದೆ ಎಂಬ ಬೌದ್ಧ ಸನ್ಯಾಸಿಗಳ ನಂಬಿಕೆ

Perform Pooja to Tibetan Monk 10 days After He Dead at Mundgod in Uttara Kannada grg

ಮುಂಡಗೋಡ(ಸೆ.20):  ಟಿಬೇಟಿಯನ್‌ ಹಿರಿಯ ಸನ್ಯಾಸಿಯೊಬ್ಬರು ನಿಧನರಾಗಿ 10 ದಿನ ಕಳೆದರೂ ಮೃತದೇಹವನ್ನು ಇಟ್ಟುಕೊಂಡು ಪೂಜಿಸಲಾಗುತ್ತಿದೆ.

ಇಲ್ಲಿಯ ಟಿಬೇಟಿಯನ್‌ ಕಾಲನಿ ಲಾಮಾ ಕ್ಯಾಂಪ್‌ ನಂ.1 ಗಂದೆನ್‌ ಬೌದ್ಧ ಮಠದ ಹಿರಿಯ ಸನ್ಯಾಸಿ ಯಾಶಿ ಪೋನತ್ಸೊ(90) 10 ದಿನದ ಹಿಂದೆ ನಿಧನರಾಗಿದ್ದರು. ಅವರು ಧ್ಯಾನದಲ್ಲಿದ್ದಾಗಲೇ ಚಿರನಿದ್ರೆಗೆ ಜಾರಿ 10 ದಿನವೇ ಕಳೆದಿದೆ.

Perform Pooja to Tibetan Monk 10 days After He Dead at Mundgod in Uttara Kannada grg

50 ದಲಿತರು ಬೌದ್ಧ ಧರ್ಮಕ್ಕೆ ಮತಾಂತರ..!

ಆದರೆ ಅವರ ದೇಹದಿಂದ ಯಾವುದೇ ದುರ್ವಾಸನೆ ಬಂದಿಲ್ಲ. ಅಲ್ಲದೇ ಯಾವುದೇ ರೀತಿ ನೀರು ಸೋರಿಕೆಯಾಗುವುದಾಗಲಿ ದೇಹದಲ್ಲಿ ಬಾವು ಕಾಣಿಸಿಕೊಂಡಿಲ್ಲ. ಹೀಗಾಗಿ ಪ್ರಾಣ ಹೋಗಿದೆ, ಆದರೆ ಆತ್ಮ ಇಲ್ಲಿಯೇ ಇದೆ ಎಂಬ ನಂಬಿಕೆಯಿಂದ ಇಲ್ಲಿಯ ಕಿರಿಯ ಟಿಬೇಟಿಯನ್‌ ಸನ್ಯಾಸಿಗಳು ಶವವನ್ನು ಪೆಟ್ಟಿಗೆಯೊಂದರಲ್ಲಿ ಇಟ್ಟು ದೀಪ ಹಚ್ಚಿ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆ ಕೂಡ ಹಿರಿಯ ಸನ್ಯಾಸಿಯೊಬ್ಬರು ನಿಧನರಾದಾಗ ಕೂಡ ಇದೇ ರೀತಿ ಹಲವು ದಿನಗಳ ಕಾಲ ಇಟ್ಟು ಪೂಜೆ ಸಲ್ಲಿಸಲಾಗಿತ್ತು.
 

Latest Videos
Follow Us:
Download App:
  • android
  • ios