ಪಡಿತರ ವಿತರಣೆಯಲ್ಲಿ ಬದಲಾವಣೆ : ಅಕ್ಕಿ ಬದಲು ಪೌಷ್ಟಿಕ ಧಾನ್ಯ
ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಅಕ್ಕಿಯ ಬದಲಾಗಿ ಪ್ರತೀ ವ್ಯಕ್ತಿಗೂ ಮೂರು ಕೆಜಿ ರಾಗಿ ನೀಡಲಾಗುತ್ತದೆ. ಎರಡು ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ. ಮೂರು ಕೆಜಿ ಅಕ್ಕಿ ಬದಲಿಗೆ ರಾಗಿ ನೀಡಲಾಗುತ್ತದೆ.
ಗುಂಡ್ಲುಪೇಟೆ (ಏ.19): ಪಡಿತರ ವಿತರಣೆಯಲ್ಲಿ ಬದಲಾವಣೆಯಾಗಿದೆ, ಏಪ್ರಿಲ್ ತಿಂಗಳ ಪಡಿತರ ವಿತರಣೆಯಲ್ಲಿ ಅಕ್ಕಿಗಿಂತ ಮಿಗಿಲಾಗಿ ಪೌಷ್ಟಿಕಾಂಶ ಆಹಾರವಾಗಿ ರಾಗಿ ವಿತರಣೆ ರಾಜ್ಯ ಸರ್ಕಾರ ಮುಂದಾಗಿದೆ.
ಪಡಿತರ ಚೀಟಿಯಲ್ಲಿರುವ ಪ್ರತಿ ಯುನಿಟ್‌ಗೆ 5 ಕೆಜಿ ಅಕ್ಕಿಯ ಬದಲಾಗಿ 2 ಕೆಜಿ ಅಕ್ಕಿ ಸಿಗಲಿದೆ. 2 ಕೆಜಿ ಅಕ್ಕಿಯ ಜೊತೆಗೆ 3 ಕೆಜಿ ರಾಗಿ ಸಿಗಲಿದೆ. ಪ್ರತಿ ಚೀಟಿಗೆ 2 ಕೆಜಿ ಗೋಧಿ ದೊರೆಯಲಿದೆ.
ಅಂತ್ಯೋದಯ ಪಡಿತರ ಚೀಟಿದಾರರಿಗೆ 35 ಕೆಜಿ ಅಕ್ಕಿ ಬದಲಿಗೆ 15 ಕೆಜಿ ಅಕ್ಕಿಯ ಜೊತೆಗೆ 20 ಕೆಜಿ ರಾಗಿ ಸಿಗಲಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯ ಶಿರಸ್ತೇದಾರ್ ವಿಶ್ವನಾಥ ಪ್ರತಿಕ್ರಿಯಿಸಿದ್ದಾರೆ.
ಇನ್ಮುಂದೆ ನ್ಯಾಯಬೆಲೆ ಅಂಗಡಿಯಲ್ಲಿ ಸೋನಾ ಮಸೂರಿ ಅಕ್ಕಿ ಲಭ್ಯ..!
ಈ ಬಗ್ಗೆ ಮಾತನಾಡಿ, ಪಡಿತದಾರದಾರರಿಗೆ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.
ದಕ್ಷಿಣ ರಾಜ್ಯದಲ್ಲಿ ಅಕ್ಕಿಯ ಜೊತೆಗೆ ರಾಗಿ ವಿತರಣೆ ಮಾಡಲಿದ್ದು, ಉತ್ತರ ಕರ್ನಾಟಕದಲ್ಲಿ ಅಕ್ಕಿಯ ಜೊತೆಗೆ ಜೋಳ ನೀಡಲಿದೆ ಎಂದರು. ಆದರೆ, ಅಕ್ಕಿ, ರಾಗಿ, ಗೋಧಿ ಉಚಿತವಾಗಿ ಸಿಗಲಿದೆ ಎಂದರು.