ಚಿಕ್ಕಮಗಳೂರು: ವೃದ್ಧೆಯನ್ನು 3 ಕಿ.ಮೀ. ಹೊತ್ತು ಆಸ್ಪತ್ರೆಗೆ ಸೇರಿಸಿದ ಜನತೆ, ಗ್ರಾಮಸ್ಥರ ಗೋಳು ಕೇಳೋರೇ ಇಲ್ಲ..!

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ನೆಲ್ಲಿಬೀಡು ಗ್ರಾಮದ 70 ವರ್ಷದ ವೃದ್ಧೆ ಲಕ್ಷ್ಮಿ ಎಂಬುವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲು ಮಾರ್ಗವಿಲ್ಲದೆ ಹಳ್ಳಿಗರು ಆಕೆಯನ್ನು 3 ಕಿ.ಮೀ ಹೊತ್ತುಕೊಂಡು ಬಂದು ಮುಖ್ಯ ರಸ್ತೆಯಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. 

people who carried the old woman to the hospital at Kalasa in Chikkamagaluru grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಸೆ.26):  ಅನಾರೋಗ್ಯಕ್ಕೆ ಒಳಗಾದ ವೃದ್ಧೆಯನ್ನ 3 ಕಿ.ಮೀ. ಹೊತ್ತುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದ ಘಟನೆ ಜಿಲ್ಲೆಯ ಕಳಸ ತಾಲೂಕಿನ ನೆಲ್ಲಿಬೀಡು ಗ್ರಾಮದಲ್ಲಿ ನಡೆದಿದೆ. ರಸ್ತೆ ಇಲ್ಲದ ಹಿನ್ನೆಲೆಯಲ್ಲಿ ತೂಗುಸೇತುವೆ ಮೇಲೆ ವೃದ್ಧೆಯನ್ನು‌ ಹಳ್ಳಿಗರು ಎತ್ತಿಕೊಂಡು ಸಾಗಿಸಿದ್ದಾರೆ.

ರಸ್ತೆ ಸಂಪರ್ಕವಿಲ್ಲದೆ ಗ್ರಾಮಸ್ಥರಿಗೆ ಸಂಕಷ್ಟ 

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ನೆಲ್ಲಿಬೀಡು ಗ್ರಾಮದಲ್ಲಿ ರಸ್ತೆ ಇಲ್ಲದೆ ರೋಗಗ್ರಸ್ತೇ ವೃದ್ಧಿಯನ್ನು 3 ಕಿ.ಮೀ ಹೊತ್ತುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಡೆದಿದೆ. ನೆಲ್ಲಿಬೀಡು ಗ್ರಾಮದ 70 ವರ್ಷದ ವೃದ್ಧೆ ಲಕ್ಷ್ಮಿ ಎಂಬುವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲು ಮಾರ್ಗವಿಲ್ಲದೆ ಹಳ್ಳಿಗರು ಆಕೆಯನ್ನು 3 ಕಿ.ಮೀ ಹೊತ್ತುಕೊಂಡು ಬಂದು ಮುಖ್ಯ ರಸ್ತೆಯಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳಸ ತಾಲೂಕಿನ ನೆಲ್ಲಿಬೀಡು, ಅಜ್ಜಿಗದ್ದೆ, ಆರೋಳ್ಳಿ  ಕಟ್ಟೆಮನೆ, ಕೋಣೆಮನೆ, ಚಿಕ್ಕನಾಡಮನೆ, ಚೌಡಿಬೀಳಲು, ದೀಟೆ, ಕಬ್ಬಂಚಿ, ಕರ್ಕೆತೋಟ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ರಸ್ತೆ ಇಲ್ಲದೆ ಭದ್ರಾ ನದಿಗೆ ನಿರ್ಮಿಸಿರುವ ತೂಗು ಸೇತುವೆ ಮೇಲೆ ಬದುಕು ಕಟ್ಟಿಕೊಂಡಿದ್ದಾರೆ.

Chikkamagaluru: ಮಗುವಿನ ಜನನದ ಬಗ್ಗೆ ಅನುಮಾನ: 5 ವರ್ಷದ ಮಗುವನ್ನೇ ಕೊಂದ ಪಾಪಿ ಅಪ್ಪ!

ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ

ಬೇಸಿಗೆಗಾಲದಲ್ಲಿ ಭದ್ರಾ ನದಿಯ ನೀರು ಕಡಿಮೆ ಇದ್ದು ನದಿ ಒಳಗಡೆಯೇ ವಾಹನಗಳು ಓಡಾಡುತ್ತವೆ. ಆದರೆ, ಮಳೆಗಾಲದಲ್ಲಿ ಭದ್ರೆಯ ನೀರು ಹೆಚ್ಚಾಗಿರುವುದರಿಂದ ತೂಗು ಸೇತುವೆ ಮೇಲೆಯೇ ಸಾಗಬೇಕು. ಮುಖ್ಯ ರಸ್ತೆಯಿಂದ ಆರು ಕಿ.ಮೀ. ದೂರದ ಹಳ್ಳಿಗಳ ಜನ ಕೂಡ ನಡೆದೇ ಸಾಗಬೇಕು. ಪ್ರತಿಯೊಂದಕ್ಕೂ ಆರು ಕಿ.ಮೀ. ನಡೆಯದ ಹೊರತು ಬದುಕಿಲ್ಲ. ಭದ್ರಾ ನದಿಗೆ ತೂಗುಸೇತುವೆ ಬದಲು ಸೇತುವೆ ನಿರ್ಮಿಸಿ ಕೊಡಿ ಎಂದು ಐದಾರು ದಶಕಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ, ಚುನಾವಣೆ ಸಂದರ್ಭದಲ್ಲಿ ಮಾತ್ರ ಸ್ಥಳಕ್ಕೆ ಹೋಗಿ ಬರುವ ಅಧಿಕಾರಿಗಳು, ಜನನಾಯಕರು ಮತ್ತೆ ಅತ್ತ ತಲೆ ಹಾಕುವುದಿಲ್ಲ ಎಂದು ಹಳ್ಳಿಗರು ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Latest Videos
Follow Us:
Download App:
  • android
  • ios