ಬಾಗಲಕೋಟೆ (ಮಾ.15): ಮಾಜಿ ಸಚಿವರ ಸಿ.ಡಿ.ಪ್ರಕರಣದ ಸಂತ್ರಸ್ತ ಯುವತಿ ತನಗೆ ರಕ್ಷಣೆ ಇಲ್ಲ ಎಂದು ವಿಡಿಯೋ ಹೇಳಿಕೆ ನೀಡಿದ ಬೆನ್ನಲ್ಲೇ ಆಕೆಯ ತಂದೆಯ ಊರಾದ ಗುಡೂರ ಗ್ರಾಮದಲ್ಲಿ ಗ್ರಾಮಸ್ಥರಿಂದ ಬೆಂಬಲ ವ್ಯಕ್ತವಾಗಿದೆ.

"

ಯುವತಿ ಮತ್ತು ಆಕೆಯ ಕುಟುಂಬಸ್ಥರು ಯಾವುದೇ ಕಾರಣಕ್ಕೂ ಜೀವಕ್ಕೆ ಏನೂ ಅಪಾಯ ಮಾಡಿಕೊಳ್ಳಬಾರದು. ಗುಡೂರ ಗ್ರಾಮಸ್ಥರು ನಿಮ್ಮ ಜತೆಗಿದ್ದೇವೆ. ಜೀವಕ್ಕೆ ತೊಂದರೆ ಮಾಡಿಕೊಂಡರೆ ಪ್ರಕರಣದಲ್ಲಿ ನ್ಯಾಯ ಸಿಗುವುದಿಲ್ಲ. ಏನಾದರೂ ಸಮಸ್ಯೆಯಾದರೆ ಗ್ರಾಮಸ್ಥರನ್ನು ಸಂಪರ್ಕಿಸಿ ಎಂದು ಸಾಮಾಜಿಕ ಕಾರ್ಯಕರ್ತೆ ಸಹನಾ ಅಂಗಡಿ ಹೇಳಿದ್ದಾರೆ.

ಸೀಡಿ ಯುವತಿ ಕಡೆಗೂ ಪತ್ತೆ: ಪ್ರಿಯತಮ ಕೊಟ್ಟ ಮಾಹಿತಿ ಆಧರಿಸಿ ಆಪರೇಷನ್‌!

ಗುಡೂರ ಗ್ರಾಮದಲ್ಲಿ ಸದ್ಯ ಯುವತಿಯ ಎಂಬತ್ತು ವರ್ಷದ ಅಜ್ಜಿ ಮಾತ್ರ ಇದ್ದಾರೆ. ಸಿ.ಡಿ.ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಒಮ್ಮೆ ಆಕೆಯ ಮನೆಗೆ ಹೋಗಿ ವಿಚಾರಣೆ ನಡೆಸಿದ್ದಾರೆ.