ಲಾಕ್‌ಡೌನ್‌ನಲ್ಲಿ ಗರಿಗೆದರಿದ ಕರಕುಶಲ ಉದ್ಯಮ

ಹಳೆಯಂಗಡಿ ಸಮೀಪದ ಪಕ್ಷಿಕೆರೆಯ ಪೇಪರ್‌ ಸೀಡ್‌ ಸಂಸ್ಥೆಯ ನಿತಿನ್‌ ವಾಸ್‌ ಅವರು ಲಾಕ್‌ಡೌನ್‌ ಸಮಯದಲ್ಲಿ ಪಕ್ಷಿಕೆರೆ ಸಮೀಪದ ಆದಿವಾಸಿ ಕುಟುಂಬದೊಂದಿಗೆ ಸೇರಿ ತುಳುನಾಡಿನ ಗೆರಸೆ, ಗೆರಟೆಯ ಸೌಟು, ಒಣಗಿದ ಹೂಗಳ ಅಗರಬತ್ತಿ ಹೀಗೆ ಎಲ್ಲ ಸ್ಥಳೀಯ ಉತ್ಪನ್ನಗಳನ್ನು ತಯಾರಿಸಿ ಇ-ಕಾಮರ್ಸ್‌ ಮೂಲಕ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ಸ್ಥಳೀಯರಿಗೆ ಉದ್ಯೋಗದ ಜತೆಗೆ, ಪ್ರಧಾನಿ ಮೋದಿ ಅವರ ಸ್ವದೇಶಿ ವಸ್ತುಗಳಿಗೆ ಆದ್ಯತೆ ಕರೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

People preparing Organic crafts in Mangalore

ಮೂಲ್ಕಿ(ಮೇ 22): ಹಳೆಯಂಗಡಿ ಸಮೀಪದ ಪಕ್ಷಿಕೆರೆಯ ಪೇಪರ್‌ ಸೀಡ್‌ ಸಂಸ್ಥೆಯ ನಿತಿನ್‌ ವಾಸ್‌ ಅವರು ಲಾಕ್‌ಡೌನ್‌ ಸಮಯದಲ್ಲಿ ಪಕ್ಷಿಕೆರೆ ಸಮೀಪದ ಆದಿವಾಸಿ ಕುಟುಂಬದೊಂದಿಗೆ ಸೇರಿ ತುಳುನಾಡಿನ ಗೆರಸೆ, ಗೆರಟೆಯ ಸೌಟು, ಒಣಗಿದ ಹೂಗಳ ಅಗರಬತ್ತಿ ಹೀಗೆ ಎಲ್ಲ ಸ್ಥಳೀಯ ಉತ್ಪನ್ನಗಳನ್ನು ತಯಾರಿಸಿ ಇ-ಕಾಮರ್ಸ್‌ ಮೂಲಕ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ಸ್ಥಳೀಯರಿಗೆ ಉದ್ಯೋಗದ ಜತೆಗೆ, ಪ್ರಧಾನಿ ಮೋದಿ ಅವರ ಸ್ವದೇಶಿ ವಸ್ತುಗಳಿಗೆ ಆದ್ಯತೆ ಕರೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್‌ ಕಾಲದಲ್ಲಿ ಹೆಚ್ಚಿನವರು ಉದ್ಯೋಗವಿಲ್ಲದೆ ಪರದಾಡುತ್ತಿರುವುದನ್ನು ಮನಗಂಡ ನಿತಿನ್‌, ಕೆಮ್ರಾಲ್‌ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಆದಿವಾಸಿ, ಬುಡಕಟ್ಟು ಸಮುದಾಯವರು ಮತ್ತು ಇತರ ಸಮುದಾಯದವರನ್ನು ಸೇರಿಸಿ ಆದಿವಾಸಿ ,ಬುಡಕಟ್ಟು ಕುಟುಂಬದ ಕುಲ ಕಸುಬಾಗಿರುವ ತುಳುನಾಡಿನ ತಡ್ಪೆ (ಮೋರಾ), ಗೆರಟೆಯ ಸೌಟು, ಒಣಗಿದ ಹೂಗಳ ಅಗರಬತ್ತಿ, ಹಲ್ಲುಜ್ಜುವ ಬ್ರಶ್‌ ಸೇರಿದಂತೆ ವಿವಿಧ ಸ್ಥಳೀಯ ಉತ್ಪನ್ನಗಳ ತರಬೇತಿ ನೀಡಿ, ನಂತರ ಅವರು ತಯಾರಿಸಿದ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ. ಲಾಕ್‌ಡೌನ್‌ನಿಂದ ವ್ಯವಹಾರ ಸ್ಥಗಿತಗೊಂಡಿರುವುದರಿಂದ ಫೇಸ್‌ಬುಕ್‌, ವಾಟ್ಸಾಪ್‌, ಇ-ಕಾಮರ್ಸ್‌ ವೇದಿಕೆಯಲ್ಲಿ ಪ್ರದರ್ಶನ ಮಾಡಿ ರಾಜ್ಯ, ಹೊರ ರಾಜ್ಯಗಳಿಂದ ಬೇಡಿಕೆ ಬರುವಂತೆ ಪ್ರಯತ್ನಿಸುತ್ತಿದ್ದಾರೆ.

ನೇಣುಬಿಗಿದು SSLC ವಿದ್ಯಾರ್ಥಿ ಆತ್ಮಹತ್ಯೆ

ಲಾಕ್‌ಡೌನ್‌ನಿಂದಾಗಿ ವಸ್ತುಗಳ ಪೂರೈಕೆ ಕಷ್ಟಸಾಧ್ಯವಾಗಿದ್ದು, ತಡ್ಪೆ(ಮೋರಾ)ಗೆ ಮುಂಬೈ ಸೇರಿದಂತೆ ಹೆಚ್ಚಿನ ಕಡೆಗಳಿಂದ ಬೇಡಿಕೆ ಬಂದಿದೆ ಎಂದು ಅವರು ತಿಳಿಸಿದ್ದಾರೆ. ಇತ್ತೀಚೆಗೆ ತಡ್ಪೆ, ಗೆರಟೆ ಸೌಟ್‌ ಮುಂತಾದ ವಸ್ತುಗಳನ್ನು ತಯಾರಿಸುವ ಮಂದಿ ಕಡಿಮೆಯಾಗಿದ್ದು, ಆ ನಿಟ್ಟಿನಲ್ಲಿ ಯುವ ಪೀಳಿಗೆಗೆ ತರಬೇತಿ ನೀಡುವ ಕಾರ್ಯ ನಡೆಯುತ್ತಿದೆ.

ದುಬೈ ಮೂಲದ ಸೋಂಕು ಪ್ರಬಲ: ಮಂಗಳೂರಲ್ಲಿ ಹೆಚ್ಚಿದ ಪ್ರಕರಣ

ನಿತಿನ್‌, ಕೆಲವು ವರ್ಷಗಳ ಹಿಂದೆಯೇ ಪರಿಸರ ಸ್ನೇಹಿ ಗ್ರೀಟಿಂಗ್‌ ಕಾರ್ಡ್‌ ತಯಾರಿಸಿ ಜನ ಮನ್ನಣೆ ಪಡೆದಿದ್ದಾರೆ. ಹೂವಿನ ಬೀಜಗಳನ್ನು ಸೇರಿಸಿ ಪರಿಸರ ಸ್ನೇಹಿ ಗ್ರೀಟಿಂಗ್‌ ಕಾರ್ಡ್‌ ತಯಾರಿಸಿದ್ದು, ಕಾರ್ಡ್‌ ಉಪಯೋಗಿಸಿದ ಬಳಿಕ ಅದನ್ನು ಹೂ ಕುಂಡದಲ್ಲಿ ಹಾಕಿದಲ್ಲಿ ಅದರಲ್ಲಿರುವ ಗಿಡಗಳ ಬೀಜದ ಮೂಲಕ ಗಿಡಗಳು ಚಿಗುರುತ್ತದೆ.

-ಪ್ರಕಾಶ್‌ ಎಂ.ಸುವರ್ಣ

Latest Videos
Follow Us:
Download App:
  • android
  • ios