Asianet Suvarna News Asianet Suvarna News

ನಮ್ಮೂರಲ್ಲಿ ಕೋವಿಡ್‌ ಸೆಂಟರ್‌ ಬೇಡ ಎಂದು ಆಕ್ರೋಶ : ವೈದ್ಯರ ಮೇಲೆ ಹಲ್ಲೆ

  • ಗ್ರಾಮದಲ್ಲಿ ಕೋವಿಡ್ ಕೇರ್ ಸೆಂಟರ್‌ಗೆ  ನಿರ್ಮಾಣಕ್ಕೆ ವಿರೋಧ  
  • ಗ್ರಾಮಸ್ಥರಿಂದ ಕೋವಿಡ್ ಕೇರ್‌ ಸೆಂಟರ್‌ ವೈದ್ಯರ ಮೇಲೆ ಹಲ್ಲೆ
  • ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನಲ್ಲಿ ಘಟನೆ 
People oppose For Covid Care centre  in Kalaburagi sedam snr
Author
Bengaluru, First Published May 10, 2021, 8:18 AM IST

 ಸೇಡಂ (ಮೇ.10):  ‘ನಮ್ಮೂರಲ್ಲಿ ಕೊರೋನಾ ಆಸ್ಪತ್ರೆ ಬೇಡ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ನೂತನ ಖಾಸಗಿ ಕೋವಿಡ್‌ ಕೇರ್‌ ಆಸ್ಪತ್ರೆಯೊಂದರ ಮೇಲೆ ದಾಳಿ ವೈದ್ಯರಿಗೆ ಹಲ್ಲೆ ಮಾಡಿರುವ ಘಟನೆ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಗಡಿ ಗ್ರಾಮ ಗುಂಡೇಪಲ್ಲಿಯಲ್ಲಿ ಕಳೆದ ಶನಿವಾರ ರಾತ್ರಿ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಇಡೀ ಸೆಂಟರ್‌ನ ಪೀಠೋಪಕರಣಗಳೆಲ್ಲ ಧ್ವಂಸವಾಗಿದ್ದು, ಇಬ್ಬರು ವೈದ್ಯರಿಗೆ ಗಾಯಗಳಾಗಿವೆ.

ಇತ್ತೀಚೆಗೆ ಹೈದ್ರಾಬಾದನ ವಿ.ಜಿ.ಆಸ್ಪತ್ರೆಯ ನೇತೃತ್ವದಲ್ಲಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅಭಿಮಾನಿ ಬಳಗದ ವತಿಯಿಂದ ಕೋವಿಡ್‌ ಕೇರ್‌ ಆಸ್ಪತ್ರೆ ಪ್ರಾರಂಭಿಸಲಾಗಿತ್ತು. ಆದರೆ ಶನಿವಾರ ರಾತ್ರಿ ಹಠಾತ್ತನೇ ಬಂದ ನೂರಾರು ಪುರುಷರು ಮತ್ತು ಮಹಿಳೆಯರು ಸೇರಿ ಕೋವಿಡ್‌ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದಾರೆ. ಇಲ್ಲಿ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಬೇಡಿ ಎಂದು ದಾಂಧಲೆ ಮಾಡಿದ್ದಾರೆ. ಅಲ್ಲದೆ ಕಲ್ಲು, ಕಟ್ಟಿಗೆಗಳಿಂದ ದಾಳಿ ಮಾಡಿ ವೈದ್ಯರನ್ನು ಅಟ್ಟಾಡಿಸಿದ್ದಾರೆ ಎನ್ನಲಾಗಿದೆ.

ಕೊರೋನಾ ವಿರುದ್ಧ ಹೋರಾಟ: ಬೋಯಿಂಗ್‌ ಇಂಡಿಯಾದಿಂದ ಬೆಂಗ್ಳೂರು, ಕಲಬುರಗಿಯಲ್ಲಿ ಆಸ್ಪತ್ರೆ ...

ಈ ವೇಳೆ ವೈದ್ಯರಾದ ಡಾ.ಪ್ರಭಾಂಜನ್‌, ಡಾ.ಸುರೇಶಬಾಬು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಮುಧೋಳ ಪಿಐ ಆನಂದರಾವ್‌, ತಹಸೀಲ್ದಾರ್‌ ಬಸವರಾಜ ಬೆಣ್ಣೆಶಿರೂರ ಭೇಡಿ ನೀಡಿ ಶಾಂತಿ ಸಭೆ ನಡೆಸಿದ್ದು, ಮುಧೋಳ ಠಾಣೆಯಲ್ಲಿ 15 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios