ಸಮಾಜದ ಎಲ್ಲ ಧರ್ಮದ ಜಾತಿ, ಧರ್ಮ ಪಂಥದವರನ್ನು ಪ್ರೀತಿ, ವಿಶ್ವಾಸದಿಂದ ಕಂಡು ಗೌರವಿಸಬೇಕು. ಪರಪಂರೆಯನ್ನು ಮೈಗೂಡಿಸಿಕೊಂಡು ತಾರತಮ್ಯವಿಲ್ಲದ ಹೊಸ ಸಮಾಜ ರೂಪಿಸಬೇಕು. ಒಗ್ಗಟ್ಟಿನಲ್ಲಿ ಪ್ರಗತಿಯ ಬಲವಿದೆ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಕರೆಯಿತ್ತರು.

 ಮಧುಗಿರಿ : ಸಮಾಜದ ಎಲ್ಲ ಧರ್ಮದ ಜಾತಿ, ಧರ್ಮ ಪಂಥದವರನ್ನು ಪ್ರೀತಿ, ವಿಶ್ವಾಸದಿಂದ ಕಂಡು ಗೌರವಿಸಬೇಕು. ಪರಪಂರೆಯನ್ನು ಮೈಗೂಡಿಸಿಕೊಂಡು ತಾರತಮ್ಯವಿಲ್ಲದ ಹೊಸ ಸಮಾಜ ರೂಪಿಸಬೇಕು. ಒಗ್ಗಟ್ಟಿನಲ್ಲಿ ಪ್ರಗತಿಯ ಬಲವಿದೆ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಕರೆಯಿತ್ತರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಲೂಕಿನ ಮಿಡಿಗೇಶಿ ಹೋಬಳಿ ಹೊಸಕೆರೆಯಲ್ಲಿ ಶ್ರೀಮಹೇಶ್ವರಿ ಅಮ್ಮನವರ ದೇವಸ್ಥಾನ ಟ್ರಸ್ಟ್‌ ವತಿಯಿಂದ ಶ್ರೀಮಹೇಶ್ವರಿ ಅಮ್ಮನವರ ನೂತನ ದೇಗುಲ ಪ್ರಾರಂಭೋತ್ಸವ ಮತ್ತು ಶಿಲಾಬಿಂಬ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಎಲ್ಲರೂ ಸಮರ್ಥರು, ಸಾಧನೆಯ ಹಾದಿಯಲ್ಲಿ ಸಾಗಬೇಕು. ಕೆಲವರು ಧರ್ಮದ ಹೆಸರಲ್ಲಿ ರಾಜಕೀಯ ಸಲ್ಲದು, ಯಾವ ಧರ್ಮವೂ ಯಾವುದೇ ರಾಜಕಾರಣಿಗಳ ಸ್ವತ್ತಲ್ಲ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂವಿಧಾತ್ಮಕವಾಗಿ ಎಲ್ಲ ಜನರಿಗೂ ಹಕ್ಕು ಮತ್ತು ಕರ್ತವ್ಯಗಳಿವೆ. ಆದರೆ ಸ್ವಾರ್ಥಕ್ಕಾಗಿ ಧರ್ಮದ ಹೆಸರಿನಲ್ಲಿ, ಒಂದೇ ಸಮುದಾಯ್ಕಕೆ ಧರ್ಮವನ್ನು ಸೀಮಿತಗೊಳಿಸುವುದು ಬೇಡ, ರಾಷ್ಟ್ರಕವಿ ಕುವೆಂಪುರವರು ಮನುಜ ಮತ ವಿಶ್ಪಪಥ ಎಂದು ವಿಶ್ವ ಕುಟುಂಬದ ಪರಿಕಲ್ಪನೆ ನೀಡುವ ಯಾವುದೇ ಸಮುದಾಯಗಳ ಪರವಾಗಿ ಇರಲಿಲ್ಲ. ಎಲ್ಲ ಧರ್ಮಗಳನ್ನು ಸರಿ ಸಮಾನಾಗಿ ಕಂಡು ಅವರು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಬಣ್ಮಿಸುವ ಮೂಲಕ ಜನರ ಒಳಿತಿಗೆ ಶ್ರಮಿಸಿದ್ದರು.

ಇದಕ್ಕೂ ಮೊದಲು ಅವರಗಲ್ಲು ಗ್ರಾಮದಲ್ಲಿ ನೂತನವಾಗಿ ಕಟ್ಟಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಸಮುದಾಯ ಭವನ, ಹೊಸಕೆರೆ ಗ್ರಾಪಂ ಆವರಣದಲ್ಲಿ ಭಾರತ್‌ ನಿರ್ಮಾಣ ಸೇವಾ ಕೇಂದ್ರದ ನೂತನ ಕಟ್ಟಡಗಳನ್ನು ಉದ್ಘಾಟಿಸಿದರು.

ವಿಧಾನಸಭೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಶಶಿಧರ್‌, ಉಪವಿಭಾಗಾಧಿಕಾರಿ ಶಿವಪ್ಪ, ತಹಸೀಲ್ದಾರ್‌ ಸಿಗ್ಬತ್‌ವುಲ್ಲಾ, ತಾಪಂ ಇಒ ಲಕ್ಷ್ಮಣ್‌, ಜಿ.ಜೆ. ರಾಜಣ್ಣ, ಎಂ.ಎಸ್‌. ಮಲ್ಲಿಕಾರ್ಜುನಯ್ಯ, ತುಂಗೋಟಿ ರಾಮಣ್ಣ, ಗೋಪಾಲಯ್ಯ, ಅಯೂಬ್‌, ಗ್ರಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಚಿರಂಜೀವಿ, ಸದಸ್ಯರಾದ ಉಮಾ, ದಿವ್ಯಾ, ರಂಗಪ್ಪ, ರಂಗನಾಥ್‌, ಹೊಂಬಾಳೇಗೌಡ, ಮಾಜಿ ಅಧ್ಯಕ್ಷ ದೇವರಾಜು, ಎಚ್‌.ವಿ. ಲೋಕೇಶ್‌, ಗೋವಿಂದರಾಜು, ವಕೀಲರಾದ ಎಚ್‌.ವಿ. ಮಂಜುನಾಥ್‌ ಹಾಗೂ ನಾಗರಿಕರು ಇದ್ದರು.