ಚಾಮರಾಜನಗರ: ಹೂಳಲು ಜಾಗವಿಲ್ಲದೆ ಕೆಸರಿನ ಗುಂಡಿಯಲ್ಲೇ ಅಂತ್ಯಕ್ರಿಯೆ

ಹರದನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಜಾಗವಿದ್ದರೂ ಅಧಿಕಾರಿಗಳು ಸರಿಯಾದ ಕಡೆ ಸ್ಮಶಾನ ಸ್ಥಳ ಗುರುತು ಮಾಡದ ಹಿನ್ನೆಲೆಯಲ್ಲಿ ಸ್ವಂತ ಜಮೀನು ಇಲ್ಲದವರು ಯಾರಾದರೂ ಮೃತಪಟ್ಟರೇ ಹೂಳಲು ಸ್ಥಳವಿಲ್ಲದಂತಾಗಿದೆ.

People Faces Problems for Funeral Procession without Cemetery in Chamarajanagara grg

ಚಾಮರಾಜನಗರ(ಆ.09): ಹರದನಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗವಿಲ್ಲದೇ ಗುಂಡಿ ತೆಗೆದರೇ ಒಸರುತ್ತಿದ್ದ ನೀರಿನ ನಡುವೆಯೇ ಅಂತ್ಯಕ್ರಿಯೆ ನಡೆಸಿರುವ ಘಟನೆ ನಡೆದಿದೆ. ಹರದನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಜಾಗವಿದ್ದರೂ ಅಧಿಕಾರಿಗಳು ಸರಿಯಾದ ಕಡೆ ಸ್ಮಶಾನ ಸ್ಥಳ ಗುರುತು ಮಾಡದ ಹಿನ್ನೆಲೆಯಲ್ಲಿ ಸ್ವಂತ ಜಮೀನು ಇಲ್ಲದವರು ಯಾರಾದರೂ ಮೃತಪಟ್ಟರೇ ಹೂಳಲು ಸ್ಥಳವಿಲ್ಲದಂತಾಗಿದೆ.

ಗ್ರಾಮದಲ್ಲಿ ಸಿದ್ದಶೆಟ್ಟಿ(76) ಅವರು ಸೋಮವಾರ ವಯೋಸಹಜವಾಗಿ ನಿಧನರಾಗಿದ್ದರು. ಮೃತರಿಗೆ ಸ್ವಂತ ಜಮೀನು ಇಲ್ಲದ ಕಾರಣ ಅಂತಿಮ ಸಂಸ್ಕಾರಕ್ಕೆ ಜಾಗವಿಲ್ಲದೆ ಗ್ರಾಮಸ್ಥರು ಪರದಾಡಿದ್ದಾರೆ. ಸರ್ಕಾರಿ ಭೂಮಿಯೊಂದರ ಕೆಸರು ತುಂಬಿದ ಜಾಗದಲ್ಲೇ ಸಮಾಧಿ ತೆಗೆದು ಅಂತ್ಯ ಸಂಸ್ಕಾರ ಮಾಡಲಾಗಿದೆ.

ಸ್ಪಂದನಾ ವಿಜಯ್‌ ಬೆನ್ನಲ್ಲೇ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಕುಸಿದು ಬಿದ್ದು ಸಾವು

ಸಮಾಧಿ ಗುಂಡಿ ತೆಗೆಯುವಾಗ ಹೊರ ಬರುತ್ತಿದ್ದ ನೀರನ್ನು ಹೊರಹಾಕಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ಕುರಿತು ಗ್ರಾಮದ ಗಿರೀಶ್‌ ಮಾತನಾಡಿ, ಈ ಬಗ್ಗೆ ಜಿಲ್ಲಾಡಳಿತಕ್ಕೆ ಸಾಕಷ್ಟುಸಲ ಮನವಿ ಮಾಡಿದರೂ
ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ಸರ್ಕಾರಿ ಜಾಗವಿದ್ದರೂ ಅಧಿಕಾರಿಗಳು ಸ್ಮಶಾನ ಗುರುತು ಮಾಡಿಲ್ಲ, ಇನ್ನಾದರೂ ಸರ್ಕಾರಿ ಜಾಗವನ್ನು ಸ್ಮಶಾನ ಮಾಡುವಂತೆ ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios