ಬೇಸಿಗೆ ಬಿಸಿಲಿನ ಪ್ರಖರತೆಗೆ ಬೆಂದು ಹೋದ ಜನತೆಗೆ ಜೆಸ್ಕಾಂ ಕೂಡ ವಿದ್ಯುತ್‌ ಕಣ್ಣುಮುಚ್ಚಾಲೆಯಾಟದ ಜೊತೆಗೆ ಜನತೆಗೆ ಜೆಸ್ಕಾಂ ಬರೆ ಎಳೆದಂತಾಗಿದೆ. ವಿದ್ಯುತ್‌ ಮೇಲೆಯೇ ಅವಲಂಬಿತ ವ್ಯವಹಾರ, ಹಿಟ್ಟಿನ ಗಿರಣಿ, ಜೆರಾಕ್ಸ್‌, ಕಂಪ್ಯೂಟರ್‌ ಸೆಂಟರ್‌ಗಳು ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ. 

ಮುದಗಲ್‌(ಜೂ.07): ಐತಿಹಾಸಿಕ ಮುದಗಲ್‌ ಪಟ್ಟಣದಲ್ಲಿ ಜೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷವೊ? ಸರ್ಕಾರದ ಉಚಿತ ವಿದ್ಯುತ್‌ ಕೊಡುಗೆಯೋ? ಎನ್ನುವಂತಹ ಚರ್ಚೆಯ ವಾತಾವರಣಕ್ಕೆ ಜೆಸ್ಕಾಂ ಇಲಾಖೆ ಸಾಕ್ಷಿಯಾದಂತಾಗಿದೆ. ಪಟ್ಟಣದಲ್ಲಿ ಅರ್ಧ ಗಂಟೆಗೊಮ್ಮೆ ದಿನಕ್ಕೆ ಹತ್ತಾರು ಬಾರಿ ವಿದ್ಯುತ್‌ ನಿಲುಗಡೆ ಮಾಡುತ್ತಿರುವುದು ನಾಗರಿಕರನ್ನು ಸಂಕಷ್ಟಕ್ಕೀಡು ಮಾಡಿದೆ. ಬಿಸಿಲಿನ ಪ್ರಖರತೆಗೆ ಮತ್ತಷ್ಟು ಜೆಸ್ಕಾಂ ಇಲಾಖೆ ಬರೆ ಎನ್ನುವಂತಾಗಿದೆ.

ಬೇಸಿಗೆ ಬಿಸಿಲಿನ ಪ್ರಖರತೆಗೆ ಬೆಂದು ಹೋದ ಜನತೆಗೆ ಜೆಸ್ಕಾಂ ಕೂಡ ವಿದ್ಯುತ್‌ ಕಣ್ಣುಮುಚ್ಚಾಲೆಯಾಟದ ಜೊತೆಗೆ ಜನತೆಗೆ ಜೆಸ್ಕಾಂ ಬರೆ ಎಳೆದಂತಾಗಿದೆ. ವಿದ್ಯುತ್‌ ಮೇಲೆಯೇ ಅವಲಂಬಿತ ವ್ಯವಹಾರ, ಹಿಟ್ಟಿನ ಗಿರಣಿ, ಜೆರಾಕ್ಸ್‌, ಕಂಪ್ಯೂಟರ್‌ ಸೆಂಟರ್‌ಗಳು ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ. ಜೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಇವೆಲ್ಲದರ ವ್ಯವಹಾರಕ್ಕೆ ತೊಂದರೆಯಾಗುವುದು ಒಂದೆಡೆಯಾದರೆ ಕಚೇರಿ, ಬ್ಯಾಂಕ್‌ಗಳಿಗೆ ಆಗಮಿಸಿದ ಗ್ರಾಹಕರು ಕೂಡ ವಿದ್ಯುತ್‌ ಇಲ್ಲದೆ ಅಲೆದಾಡುವಂತಾಗಿದೆ.

ಪ್ರತ್ಯೇಕ ಬೈಕ್‌ ಅಪಘಾತ ಪ್ರಕರಣದಲ್ಲಿ ನಾಲ್ವರ ಸಾವು: ದೇಹದ ಮೇಲೆಯೇ ಹರಿದ ಲಾರಿ

ಪಟ್ಟಣದಲ್ಲಿಯೇ 110/33/11 ಕೆವಿ ವಿದ್ಯುತ್‌ ಉಪಕೇಂದ್ರ ಲಿಂಗಸುಗೂರು ರಸ್ತೆಗೆ ಹೊಂದಿಕೊಂಡು ಜೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಂಪ್‌ ಕಟ್ಟಾಗಿರುವುದು, ವಿದ್ಯುತ್‌ ಕೇಬಲ್‌ ತುಂಡಾ​ಗಿ​ರು​ವುದು, ವಿದ್ಯುತ್‌ ಪರಿವರ್ತಕ ರಿಪೇರಿ, ತಾಂತ್ರಿಕ ತೊಂದರೆ, ನಿರ್ವಹಣಾ ನೆಪದಲ್ಲಿಯೇ ನಾಗರಿಕರ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎನ್ನುವದರಲ್ಲಿ ಎರಡು ಮಾತಿಲ್ಲ. ಇದೇ ರೀತಿಯಾಗಿ ಮುಂದುವರೆದಲ್ಲಿ ಸಾರ್ವಜನಿಕರು ರೊಚ್ಚಿಗೆದ್ದು ಸ್ಥಳೀಯ ಶಾಖಾ ಕಚೇರಿಗೆ ಮುತ್ತಿಗೆ ಹಾಕಿದರೂ ಆಶ್ಚರ್ಯಪಡುವಂತಿಲ್ಲ.

ಜೆಸ್ಕಾಂ ಇಲಾಖೆ ದಿನಂಪ್ರತಿ ಪದೇ ಪದೇ ಮುದಗಲ್‌ ಪಟ್ಟಣದಲ್ಲಿ ಅನಧೀಕೃತವಾಗಿ ವಿದ್ಯುತ್‌ ನಿಲುಗಡೆ ಮಾಡುತ್ತಿರುವದು ನಾಗರಿಕರಿಗೆ ಬೇಸರ ತಂದಿದೆ. ಇದೇ ರೀತಿ ಮುಂದುವರೆದರೆ ಜೆಸ್ಕಾಂ ಅಧಿಕಾರಿಗಳ ಕಾರ್ಯ ವೈಖರಿ ವಿರುದ್ದ ಸ್ಥಳೀಯ ಶಾಖಾ ಕಚೇರಿಯ ಮುಂದೆ ಹೋರಾಟ ಮಾಡುವದು ಅನಿವಾರ‍್ಯವಾಗುತ್ತದೆ. ಜೆಸ್ಕಾಂ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಅಂತ ಕರವೇ ಮುದಗಲ್‌ ಘಟಕದ ಅಧ್ಯಕ್ಷ ಎಸ್‌.ಎ. ನಯೀಮ್‌ ತಿಳಿಸಿದ್ದಾರೆ.