Asianet Suvarna News Asianet Suvarna News

ಬೆಳಗಾವಿ: SSLCಯಲ್ಲಿ ಶೇ.48 ಅಂಕ ಪಡೆದ ವಿದ್ಯಾರ್ಥಿಗೆ ಗುಲಾಲು ಎರಚಿ ಸನ್ಮಾನ..!

ಶೇ.48.64 ರಷ್ಟು ಅಂಕಗಳಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸಾದ ವಿದ್ಯಾರ್ಥಿಗೆ ಗುಲಾಲು ಎರಚಿ, ಶಾಲು ಹೊದಿಸಿ ಸನ್ಮಾನ|  ಬೆಳಗಾವಿ ನಗರದ ಬಾಂಧೂರ ಗಲ್ಲಿಯಲ್ಲಿ ನಡೆದ ಘಟನೆ|  ವಿದ್ಯಾರ್ಥಿ ಪರ ಘೋಷಣೆ ಕೂಗಿದ ಯುವಕರು|  

People Congratulations to Student Pass the SSLC Exam
Author
Bengaluru, First Published Aug 12, 2020, 10:08 AM IST

ಬೆಳಗಾವಿ(ಆ.12):  ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಶೇ.48.64ರಷ್ಟು ಅಂಕಗಳಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸಾದ ವಿದ್ಯಾರ್ಥಿಗೆ ಗುಲಾಲು ಎರಚಿ, ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದ ಘಟನೆ ಬೆಳಗಾವಿ ನಗರದ ಬಾಂಧೂರ ಗಲ್ಲಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಈ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ಸಮರ್ಥ ಗೋವಿಲಕರ ಎಂಬಾತನೇ ಈ ಸಂಭ್ರಮಕ್ಕೆ ಕಾರಣವಾದ ವಿದ್ಯಾರ್ಥಿ. ಸಂಭ್ರಮ ಇಷ್ಟಕ್ಕೆ ಸೀಮಿತವಾಗಿರಲಿಲ್ಲ. ಈ ವಿದ್ಯಾರ್ಥಿಯ ಭಾವಚಿತ್ರದ ಬ್ಯಾನರ್‌ ಹಾಕಿ ಅಭಿನಂದಿಸಿದ್ದಾರೆ. 

ಯಾದಗಿರಿಯಿಂದ ಗುಳೆ ಬಂದು ಬೆಂಗ್ಳೂರಿನಲ್ಲಿ ಮಿಂಚಿದ ವಿದ್ಯಾರ್ಥಿ ಮನೆಗೆ ಸಚಿವ ಸುರೇಶ್ ಕುಮಾರ್

ಬ್ಯಾನರ್‌ನಲ್ಲಿ ವಿದ್ಯಾರ್ಥಿ ಪಡೆದ ಶೇಕಡಾ ಅಂಕದಲ್ಲಿನ 48ನ್ನು ಚಿಕ್ಕದ್ದಾಗಿ, 64ನ್ನು ದೊಡ್ಡದಾಗಿ ಬಿಂಬಿಸಲಾಗಿದೆ. ವಿದ್ಯಾರ್ಥಿ ಪರವಾದ ಘೋಷಣೆಗಳನ್ನು ಕೂಗಿದ್ದಾರೆ. ಮರಗಾಯಿ ಗ್ರೂಪ್‌ ನೇತೃತ್ವದಲ್ಲಿ ಸುಮಾರು 30 ಯುವಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ.
 

Follow Us:
Download App:
  • android
  • ios