ಲಾಕ್‌ಡೌನ್ ನಡುವೆಯೂ ಕಾವೇರಿ ನದಿ ಸ್ವಚ್ಛತೆ
ಕೊರೋನಾ ಲಾಕ್‌ಡೌನ್ ನಡುವೆ ಕಾವೇರಿ ನದಿ ಸ್ವಚ್ಛತಾ ಅಭಿಯಾನದ ಪ್ರಮುಖರು ಎರಡು ಬಾರಿ ಸ್ವಚ್ಛತಾ ಕಾರ್ಯ ಕೈಗೊಂಡು ನದಿಯಲ್ಲಿ ಎಸೆಯಲಾಗಿದ್ದ ಬಟ್ಟೆಬರೆ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ತೆರವುಗೊಳಿಸುವಲ್ಲಿ ತೊಡಗಿಸಿಕೊಂಡರು.
ಕುಶಾಲನಗರ(ಏ.19): ಕೊರೋನಾ ಲಾಕ್‌ಡೌನ್ ನಡುವೆ ಕಾವೇರಿ ನದಿ ಸ್ವಚ್ಛತಾ ಅಭಿಯಾನದ ಪ್ರಮುಖರು ಎರಡು ಬಾರಿ ಸ್ವಚ್ಛತಾ ಕಾರ್ಯ ಕೈಗೊಂಡು ನದಿಯಲ್ಲಿ ಎಸೆಯಲಾಗಿದ್ದ ಬಟ್ಟೆಬರೆ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ತೆರವುಗೊಳಿಸುವಲ್ಲಿ ತೊಡಗಿಸಿಕೊಂಡರು.
ಕುಶಾಲನಗರ ಕೊಪ್ಪ ಕಾವೇರಿ ನದಿ ಸೇತುವೆ ಕೆಳಭಾಗ ಮತ್ತು ಅಯ್ಯಪ್ಪಸ್ವಾಮಿ ದೇವಾಲಯ ಬಳಿ ನದಿ ಸ್ವಚ್ಛತಾ ಕಾರ್ಯಕ್ರಮ ಎರಡು ದಿನಗಳ ಕಾಲ ನಡೆಯಿತು. ಪ್ಲಾಸ್ಟಿಕ್, ಬಟ್ಟೆಗಳನ್ನು ತೆಗೆದು ನದಿ ಸ್ವಚ್ಛಗೊಳಿಸಿದರು.
ನೋಂದಾಯಿತ ಕಟ್ಟಡ ಕಾರ್ಮಿಕರ ಖಾತೆಗೆ 2000 ರು.
ಸ್ವಚ್ಚತಾ ಅಭಿಯಾನದ ಪ್ರಮುಖರಾದ ಎಂ.ಎನ್. ಚಂದ್ರಮೋಹನ್, ತೋರೇರ ಉದಯ ಕುಮಾರ್, ಕೊಡಗನ ಹರ್ಷ, ಕುಲ್ಲಚ್ಚನ ಹೇಮಂತ್, ಕಡವಡಿರ ವಿವೇಕ್ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.