Asianet Suvarna News Asianet Suvarna News

ಬೆಲೆಯಿಲ್ಲದೆ ಬಾಕಿಯಾಗಿದ್ದ ಪಪ್ಪಾಯಿ ಬೆಳೆ ಮನೆಯಿಂದಲೇ ಸೇಲಾಯ್ತು

ಸೂಕ್ತ ದರ ಸಿಕ್ಕದೆ 1700ಕ್ಕೂ ಅಧಿಕ ಫಸಲಿಗೆ ಸುಮಾರು 10 ಲಕ್ಷ ರು. ನಷ್ಟ ಅನುಭವಿಸುತ್ತಿದ್ದ ಕಾರಸಗೋಡು ಜಿಲ್ಲೆ ಮಂಜೇಶ್ವರ ತಾಲೂಕು ಪೈವಳಿಕೆ ಸಮೀಪದ ಭಟ್ ಅವರ ಸಮಸ್ಯೆ ಕುರಿತು ಕನ್ನಡಪ್ರಭದ ಬುಧವಾರದ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು, ಸುವರ್ಣ ನ್ಯೂಸ್ ವೆಬ್ ತಾಣದಲ್ಲೂ ವರದಿ ಪ್ರಕಟವಾಗಿ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

 

People buy papaya directly from farmer in Kasaragod
Author
Bangalore, First Published Apr 24, 2020, 2:07 PM IST

ಮಂಗಳೂರು(ಏ.24): ತಾವು ಬೆಳೆದ ಪಪ್ಪಾಯಿ ಹಣ್ಣುಗಳಿಗೆ ಸೂಕ್ತ ದರ ಸಿಕ್ಕದೆ ಹಾಗೂ ವರ್ತಕರು ಸಕಾಲಕ್ಕೆ ದುಡ್ಡು ಪಾವತಿಸದ ಸಮಸ್ಯೆಯಿಂದ ಕಂಗಾಲಾಗಿದ್ದ, ಪಪ್ಪಾಯಿ ಬೆಳೆದ ಗಡಿನಾಡ ಕನ್ನಡಿಗ ಅಡ್ಕತಿಮಾರು ಗೋಪಾಲಕೃಷ್ಣ ಭಟ್ ಅವರ ಸಮಸ್ಯೆ ಈಗ ಬಹುತೇಕ ಪರಿಹಾರ ಕಂಡಿದೆ.

ಸೂಕ್ತ ದರ ಸಿಕ್ಕದೆ 1700ಕ್ಕೂ ಅಧಿಕ ಫಸಲಿಗೆ ಸುಮಾರು 10 ಲಕ್ಷ ರು. ನಷ್ಟ ಅನುಭವಿಸುತ್ತಿದ್ದ ಕಾರಸಗೋಡು ಜಿಲ್ಲೆ ಮಂಜೇಶ್ವರ ತಾಲೂಕು ಪೈವಳಿಕೆ ಸಮೀಪದ ಭಟ್ ಅವರ ಸಮಸ್ಯೆ ಕುರಿತು ಕನ್ನಡಪ್ರಭದ ಬುಧವಾರದ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು, ಸುವರ್ಣ ನ್ಯೂಸ್ ವೆಬ್ ತಾಣದಲ್ಲೂ ವರದಿ ಪ್ರಕಟವಾಗಿ
ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಹೊರ ಜಿಲ್ಲೆಗೆ ಹೋದ್ರೆ, ಬಂದ್ರೆ ಹೋಂ ಕ್ವಾರಂಟೈನ್‌ ಕಡ್ಡಾಯ

ಬಳಿಕ ಸುಮಾರು 3-4 ಮಂದಿ ಆಸಕ್ತರು ಭಟ್ ಅವರ ಮನೆಗೇ ಬಂದು ಪಪ್ಪಾಯಿ ಹಣ್ಣುಗಳನ್ನು ಕೆ.ಜಿ.ಗೆ 30ರ ದರದಲ್ಲಿ ಖರೀದಿಸಿದ್ದಾರೆ. ಸುಮಾರು ಮೂರೂವರೆ ಕ್ವಿಂಟಲ್ ನಷ್ಟು ಪಪ್ಪಾಯಿ ಹಣ್ಣುಗಳು ಯೋಗ್ಯ ಬೆಲೆಗೆ ಮನೆಯಿಂದಲೇ ಮಾರಾಟವಾಗಿದೆ. ಇದರೊಂದಿಗೆ ಈ ವರೆಗಿನ ಸ್ಟಾಕ್ ಖಾಲಿಯಾಗಿದೆ.

ಈ ನಡುವೆ ಶೇ.30ರಷ್ಟು ಫಸಲು ಕೊಳೆತು ಹಾಳಾಗಿದ್ದವು. ಮತ್ತು ಸ್ವಲ್ಪ ಫಸಲನ್ನೂ ಅವರು ಉಚಿತವಾಗಿಯೇ ಸ್ಥಳೀಯರಿಗೆ ಹಂಚಿದ್ದರು. ವರದಿ ಪ್ರಕಟವಾದ ಬಳಿಕ ಮಂಗಳೂರು, ಮೂಡುಬಿದಿರೆ ಮತ್ತಿತರ ಭಾಗಗಳಿಂದಲೂ ಸಾಕಷ್ಟು ಮಂದಿ ಆಸಕ್ತರು ಸಗಟು ರೂಪದಲ್ಲೇ ಫಸಲು ಖರೀದಿಗೆ ಮುಂದೆ ಬಂದಿದ್ದಾರೆ.

ವೀಳ್ಯ ನೀಡಿ ಕರೆದೊಯ್ಯಲು 50 ಕಾರುಗಳಲ್ಲಿ ಬಂದ್ರು..!

ಆದರೆ, ಕೇರಳ ಗಡಿ ಬಂದ್ ನಿದ ತನಗೆ ಅವರಿರುವಲ್ಲಿಗೆ ಫಸಲು ಸಪ್ಲೈ ಮಾಡಲು ಆಗುತ್ತಿಲ್ಲ ಎಂದು ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಮುಂದಿನ ಫಸಲು ಕೈಸೇರಿದ ಬಳಿಕವೂ ಗ್ರಾಹಕರು ಮನೆಗೇ ಬಂದು ಖರೀದಿಸುವ ವಿಶ್ವಾಸವನ್ನು ಅವರೀಗ ಹೊಂದಿದ್ದಾರೆ. ವರದಿ ಪ್ರಕಟ ಬಳಿಕ ಶುಕ್ರವಾರ ತನಕ 11 ಕ್ವಿಂಟಲ್ ನಷ್ಟು ಹಣ್ಣುಗಳನ್ನು ಮನೆಯಿಂದಲೇ ಖರೀದಿಸಿದ್ದಾರೆ. ಕೊಯ್ಲು ಎಲ್ಲ ಖಾಲಿ ಆಗಿದ್ದು, ಇನ್ನಷ್ಟು ಬೇಡಿಕೆ ಬರುತ್ತಿದೆ.

Follow Us:
Download App:
  • android
  • ios