P-218 ಕೊರೊನಾ ಪಾಸಿಟಿವ್ ವ್ಯಕ್ತಿಯಿಂದ ಹೆಚ್ಚಾಯ್ತು ಕೊರೊನಾ ಆತಂಕ| ಈ ವ್ಯಕ್ತಿಯಲ್ಲಿ 22 ದಿನಗಳ ನಂತರ ಕಾಣಿಸಿಕೊಂಡ ಕೊರೋನಾ ಪಾಸಿಟಿವ್| ಮಾ. 21ರಂದು ಇಂಡೋನೇಶಿಯಾದಿಂದ ಬೆಂಗಳೂರಿಗೆ ಮರಳಿದ್ದ ವ್ಯಕ್ತಿ| ಈತನ ಟ್ರಾವೆಲ್ ಹಿಸ್ಟರಿಯಿಂದ ರಾಜ್ಯ ಮಾತ್ರವಲ್ಲ ದೇಶಾದ್ಯಂತ ಆತಂಕ|
ಕೊರೋನಾ ರೋಗಿ ಸಂಖ್ಯೆ 218 ಮಾರ್ಚ್ 21 ರಂದು ಇಂಡೋನೇಶಿಯಾದಿಂದ ಬೆಂಗಳೂರಿಗೆ ಆಗಮಿಸಿದ್ದ, ಬಳಿಕ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳ ಸೂಚನೆ ಮೇರೆಗೆ 14 ಹೋಂ ಕ್ವಾರಂಟೈನ್‌ನಲ್ಲಿಟ್ಟಿದ್ದರು. ಬಳಿಕ ಈ ವ್ಯಕ್ತಿಯಲ್ಲಿ ಯಾವುದೇ ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಆದರೆ, ಈ ವ್ಯಕ್ತಿಗೆ 22 ದಿನಗಳ ನಂತರ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ಇದರಿಂದ ವೈದ್ಯರಿಗೂ ಆತಂಕಕ್ಕೋಳಗಾಗಿದ್ದಾರೆ.
ವಿಜಯಪುರ ಕೊರೋನಾ ಪ್ರಕರಣ: ವೈರಸ್ ಮೂಲ ಇನ್ನೂ ನಿಗೂಢ, ಸೃಷ್ಟಿಸಿದೆ ತಲ್ಲಣ!
ಸಾಮಾನ್ಯವಾಗಿ ವಿದೇಶದಿಂದ ಮರಳಿದವರಿಗೆ ರಾಜ್ಯ ಸರ್ಕಾರ 14 ದಿನಗಳಷ್ಟೇ ಹೋಂ ಕ್ವಾರಂಟೈನ್ ಮಾಡಲಾಗುತ್ತದೆ. ಆದರೆ, ಕೊರೋನಾ ರೋಗಿ ಸಂಖ್ಯೆ 218 ಗೆ 22 ದಿನಗಳ ನಂತರ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ಇಡೀ ದೇಶವೇ ಆತಂಕದಲ್ಲಿದೆ. ಏಕೆಂದರೆ ಸಾಮಾನ್ಯವಾಗಿ ವಿದೇಶದಿಂದ ಬಂದವರಿಗೆ 14 ದಿನಗಳಷ್ಟೇ ಹೋಂ ಕ್ವಾರಂಟೈನ್ ಮಾಡಲಾಗುತ್ತದೆ. ಅದರಲ್ಲಿ ಯಾರಲ್ಲಿ ಕೊರೋನಾ ಪಾಸಿಟಿವ್ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ ಅಂತವರನ್ನ ಬಿಡುಗಡೆ ಮಾಡಲಾಗುತ್ತದೆ. ಹೀಗೆ 14 ದಿನ ಪೂರೈಸಿದ ವ್ಯಕ್ತಿಗಳನ್ನ ಬಿಡುಗಡೆ ಮಾಡಲಾಗಿದೆ. ಆದರೆ, 14 ದಿನಗಳ ಬಳಿಕ ಕೊರೋನಾ ಪೊಸಿಟಿವ್ ಕಾಣಿಸಿಕೊಂಡರೆ ಏನು ಮಾಡೋದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳನ್ನ ನಿದ್ದೆಗಡೆಸುತ್ತಿದೆ.
ಇಂತಹ ಪ್ರಕರಣಗಳು ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದೆಲ್ಲೆಡೆ ಸಾಕಷ್ಟಿರುವ ಸಾಧ್ಯತೆ ಇದೆ. ಇದರಿಂದ ದೇಶಾದ್ಯಂತ ಭಯದ ವಾತಾವರಣ ನಿರ್ಮಾಣವಾಗಿದೆ. ಮಾರ್ಚ್ 18 ರಿಂದ 23ರ ಆಸುಪಾಸಿನಲ್ಲಿ ಲಕ್ಷಾಂತರ ಜನರು ವಿದೇಶದಿಂದ ಭಾರತ ಪ್ರವೇಶಿಸಿದ್ದಾರೆ. ಕೊರೋನಾ ಪೀಡಿತ ದೇಶಗಳಲ್ಲಿ ಸಿಲುಕಿದ ಭಾರತೀಯರನ್ನ ಕೇಂದ್ರ ಸರ್ಕಾರವೇ ಕರೆತಂದಿದೆ. ಆದರೆ ಇವರೆಲ್ಲರಿಗೂ 14 ದಿನ ಮಾತ್ರ ಕ್ವಾರಂಟೈನ್ ಸೀಮಿತಿಗೊಳಿಸಲಾಗಿತ್ತು. ಇದೀಗ P-218ರ ಪ್ರಕರಣದಿಂದ ಆತಂಕ ಹೆಚ್ಚಾಗುವಂತೆ ಮಾಡಿದೆ.
