'ಮುಸ್ಲಿಂರ ರಕ್ತ ಒಂದೇ ಅಲ್ವಾ, ತೊಂದರೆ ಆಗುತ್ತೆ ಅಂತ ಗಲಾಟೆ ಶುರು ಮಾಡಿದ್ದಾರೆ'
ಪೌರತ್ವ ಕಾಯ್ದೆ ವಿರೋಧಕ್ಕೆ ಹಲವು ಕಾರಣಗಳಿವೆ| ಈ ಕಾಯ್ದೆಯನ್ನ ಅಸ್ಸಾಂ ಭಾಗದ ಗುಡ್ಡಗಾಡು ಪ್ರದೇಶದ ಜನರು ವಿರೋಧ ಮಾಡುತ್ತಿದ್ದಾರೆ| ಬಾಂಗ್ಲಾದಿಂದ ಹಿಂದೂಗಳು ಬಂದ್ರೆ ತಮ್ಮ ಸಂಖ್ಯೆ ಕಡಿಮೆ ಆಗುತ್ತೆ ಎಂಬ ಭಯವಿದೆ|
ರಾಯಚೂರು(ಡಿ.15): ಪೌರತ್ವ ಕಾಯ್ದೆ ವಿರೋಧಕ್ಕೆ ಹಲವಾರು ಕಾರಣಗಳಿವೆ. ಈ ಕಾಯ್ದೆಯನ್ನ ಅಸ್ಸಾಂ ಭಾಗದ ಗುಡ್ಡಗಾಡು ಪ್ರದೇಶದ ಜನರು ವಿರೋಧ ಮಾಡುತ್ತಿದ್ದಾರೆ. ಬಾಂಗ್ಲಾದಿಂದ ಹಿಂದೂಗಳು ಬಂದ್ರೆ ತಮ್ಮ ಸಂಖ್ಯೆ ಕಡಿಮೆ ಆಗುತ್ತೆ ಎಂಬ ಭಯವಿದೆ ಎಂದು ಉಡುಪಿಯ ಪೇಜಾವರ ಶ್ರೀಗಳು ಹೇಳಿದ್ದಾರೆ.
ಭಾನುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಸ್ಸಾಂನ ಮುಸ್ಲಿಂರಿಗೆ ತೊಂದರೆ ಆಗುವ ಭಯ ಕಾಡುತ್ತಿದೆ. ಈ ಕಾಯ್ದೆಯಿಂದ ಭಾರತದ ಮುಸ್ಲಿಂರಿಗೆ ಯಾವುದೇ ರೀತಿಯಲ್ಲೂ ಹಾನಿ ಆಗೋದಿಲ್ಲ ಎಂದು ಹೇಳಿದ್ದಾರೆ.
'ಮುಸ್ಲಿಮರಿಗೆ ಮುಸ್ಲಿಂ ರಾಷ್ಟ್ರಗಳಿವೆ, ಹಿಂದೂಗಳೆಲ್ಲಿ ಹೋಗಬೇಕು'..?
ಮುಸ್ಲಿಂರು ವಿರೋಧಕ್ಕೆ ಬೇರೆ ದೇಶದ ಮುಸ್ಲಿಂರ ಮೇಲೆ ಅಭಿಮಾನವಿದೆ. ಮುಸ್ಲಿಂರ ರಕ್ತ ಒಂದೇ ಅಲ್ವಾ, ಅವರಿಗೆ ತೊಂದರೆ ಆಗುತ್ತೆ ಎಂದು ಗಲಾಟೆ ಶುರು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಅಸ್ಸಾಂನಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆ ಹಿಂಸಾಚಾರವಾಗಿ ಪರಿವರ್ತನೆಯಾಗುತ್ತದೆ. ಅಸ್ಸಾಂ ವಿದ್ಯಾರ್ಥಿಗಳು ಕಾಯ್ದೆ ವಿರೋಧಿಸಿ ಬೀದಿಗಿಳಿದ ಬಳಿಕ ಪ್ರತಿಭಟನೆಯ ಸ್ವರೂಪವೇ ಬದಲಾಗಿದೆ. ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿ-ಪಾಸ್ತಿಯನ್ನು ಹಾಳುಗೆಡವುತ್ತಿದ್ದಾರೆ. ಗುವಾಹಟಿ, ದೀಬ್ರುಘರ್‌ನಲ್ಲಿ ಇನ್ನೂ ಪ್ರತಿಭಟನೆ ನಡೆಯುತ್ತಿದೆ.