ಗೋಹತ್ಯೆ ನಿಷೇಧ ಪ್ರಬಲ ಕಾಯ್ದೆಗೆ ಪೇಜಾವರ ಶ್ರೀಗಳಿಂದ ಸಿಎಂಗೆ ಪತ್ರ
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಬೇಕು ಎಂದು ಪೇಜಾವರ ಶ್ರೀಗಳು ಮುಖ್ಯಮಂತ್ರಿ ಯಡಿಯೂರಪ್ಪ ಪತ್ರ ಬರೆದಿದ್ದಾರೆ.
ಉಡುಪಿ (ಸೆ.17): ರಾಜ್ಯದಲ್ಲಿ ಪ್ರಬಲವಾದ ಗೋವಂಶ ಹತ್ಯೆ ನಿಷೇಧ ಕಾಯ್ದೆಯನ್ನು ಈ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿ ಜಾರಿಗೊಳಿಸಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಈಗ ಜಾರಿಯಲ್ಲಿರುವ 1964 ಗೋಹತ್ಯೆ ನಿಷೇಧ ಕಾಯ್ದೆಯು ಅತ್ಯಂತ ದುರ್ಬಲವಾಗಿದೆ. ಆದ್ದರಿಂದ ಬಹಳಷ್ಟುಗೋವುಗಳು ದಿನನಿತ್ಯ ಹತ್ಯೆಯಾಗುತ್ತಿವೆ ಮತ್ತು ಸಾಗಾಟದಲ್ಲಿ ಹಿಂಸೆ ಅನುಭವಿಸುತ್ತಿವೆ. ಇದರಿಂದ ಕೃಷ್ಣನ ಭಕ್ತರಾದ ತಮಗೆ ಅತ್ಯಂತ ದುಃಖವಾಗುತ್ತಿದೆ ಎಂದು ತಿಳಿಸಿದ್ದಾರೆ.
ಉಡುಪಿ: ಸಂಪ್ರದಾಯಕ್ಕೆ ಸೀಮಿತವಾಗಿ ನಡೆದ ಕೃಷ್ಣ ಜನ್ಮಾಷ್ಟಮಿ
ಗೋವುಗಳ ಸುರಕ್ಷತೆಗಾಗಿ ಮತ್ತು ಗೋವಂಶ ಹತ್ಯೆ ನಿಷೇಧಕ್ಕಾಗಿ ಅತ್ಯಂತ ಪ್ರಬಲವಾದ ಕಾಯ್ದೆಯನ್ನು ಜಾರಿಗೊಳಿಸುವಂತೆ ಶ್ರೀಗಳು ಬುಧವಾರ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.