ಜಿಲ್ಲಾ ಕೇಂದ್ರಕ್ಕೆ ಆಗ್ರಹ: ಜಮಖಂಡಿ ಬಂದ್ ಶಾಂತಿಯುತ

ಜಮಖಂಡಿ ಜಿಲ್ಲಾ ಕೇಂದ್ರವನ್ನಾಗಿಸಬೇಕೆಂದು ಆಗ್ರಹಿಸಿ ಕರೆ ನೀಡಿದ್ದ ಜಮಖಂಡಿ ಬಂದ್ ಶಾಂತಿಯುತವಾಗಿ ನಡೆಯಿತು| ನಗರದ ಹನುಮಾನ ಚೌಕ ನೂರಾರು ಪ್ರತಿಭಟನಾಕಾರರು ಮೆರವಣಿಗೆ ವಿವಿಧ ಬೀದಿಗಳಲ್ಲಿ ಹೊರಟು ಎ.ಜಿ.ದೇಸಾಯಿ ವೃತ್ತದಲ್ಲಿ ಸಮಾವೇಶ ನಡೆಯಿತು| ಪ್ರಭಾರಿ ಎಸಿ ರಬಕವಿ-ಬನಹಟ್ಟಿ ತಹಸೀಲ್ದಾರ್ ಪ್ರಶಾಂತ ಚನಗೊಂಡ ಅವರಿಗೆ ಮನವಿ ಸಲ್ಲಿಸಲಾಯಿತು| ಜಮಖಂಡಿ ಜಿಲ್ಲೆ ರಚನೆಗೆ ಕಳೆದ 1966 ರಿಂದಲೂ ಹೀರಾಟ ನಡೆಸಲಾಗಿತ್ತಾದರೂ ಯಾವ ಸರ್ಕಾರಗಳು ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ| 1997ರಲ್ಲಿ ಉಗ್ರ ಹೋರಾಟ ನಡೆಸಲಾಗಿತ್ತು. ಆದರೆ, ಸರ್ಕಾರ ಪ್ರತ್ಯೇಕ ಜಿಲ್ಲೆ ಮಾಡುವ ಕಡೆಗೆ ಗಮನ ಹರಿಸಿಲ್ಲ| 

Peaceful Band Jamakhandi

ಜಮಖಂಡಿ[ಅ.4]: ಜಮಖಂಡಿ ಜಿಲ್ಲಾ ಕೇಂದ್ರವನ್ನಾಗಿಸಬೇಕೆಂದು ಆಗ್ರಹಿಸಿ ಗುರುವಾರ ಇಲ್ಲಿನ ವಿವಿಧ ಸಂಘಟನೆಗಳು ಕರೆ ನೀಡಿದ್ದ ಜಮಖಂಡಿ ಬಂದ್ ಶಾಂತಿಯುತವಾಗಿ ನಡೆಯಿತು. ನಗರದ ಹನುಮಾನ ಚೌಕ ನೂರಾರು ಪ್ರತಿಭಟನಾಕಾರರು ಮೆರವಣಿಗೆ ವಿವಿಧ ಬೀದಿಗಳಲ್ಲಿ ಹೊರಟು ಎ.ಜಿ.ದೇಸಾಯಿ ವೃತ್ತದಲ್ಲಿ ಸಮಾವೇಶ ಗೊಂಡಿದ್ದು, ಪ್ರಭಾರಿ ಎಸಿ ರಬಕವಿ-ಬನಹಟ್ಟಿ ತಹಸೀಲ್ದಾರ್ ಪ್ರಶಾಂತ ಚನಗೊಂಡ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಓಲಿಮಠದ ಡಾ.ವನ್ನಬಸವ ಸ್ವಾಮೀಜಿ ಮಾತನಾಡಿ, ಜಮಖಂಡಿ ಜಿಲ್ಲೆ ರಚನೆಗೆ ಕಳೆದ 1966 ರಿಂದಲೂ ಹೀರಾಟ ನಡೆಸಲಾಗಿತ್ತಾದರೂ ಯಾವ ಸರ್ಕಾರಗಳು ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. 1997ರಲ್ಲಿ ಉಗ್ರ ಹೋರಾಟ ನಡೆಸಲಾಗಿತ್ತು. ಆದರೆ, ಸರ್ಕಾರ ಪ್ರತ್ಯೇಕ ಜಿಲ್ಲೆ ಮಾಡುವ ಕಡೆಗೆ ಗಮನ ಹರಿಸಿಲ್ಲ. ಜಮಖಂಡಿ ಜಿಲ್ಲೆಯಾಗುವ ಎಲ್ಲ ಮೂಲಭೂತ ಸೌಲಭ್ಯಗಳಿದ್ದು, ಇಂದಿನ ಸರ್ಕಾರ ವಿಜಯನಗರ ಜಿಲ್ಲೆ ಮಾಡಲು ಹೊರಟಿದ್ದು, ಆ ವೇಳೆಗೆ ಜಮಖಂಡಿ ಜಿಲ್ಲೆಯನ್ನಾಗಿ ಘೋಷಿಸಬೇಕು. ಶುಕ್ರವಾರ ಬಾಗಲಕೋಟೆಗೆ ಬರಲಿರುವ ಸಿಎಂ ಯಡಿಯೂರಪ್ಪ ಅವರಿಗೆ ನಮ್ಮಲ್ಲಿನ ಮುಖಂಡರು ಪ್ರತ್ಯೇಕ ಜಿಲ್ಲೆ ರಚನೆಗೆ ಮನವಿ ಸಲ್ಲಿಸಲಿದ್ದು, ಈ ಮನವಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನೇತೃತ್ವ ವಹಿಸಿದ್ದ ಕೊಣ್ಣೂರು ಡಾ.ವಿಶ್ವಪ್ರಭು ಶ್ರೀ, ಮುತ್ತಿನಕಂತಿಮಠದ ಶಿವಲಿಂಗ ಶ್ರೀ, ಹುಲ್ಯಾಳ ಹರ್ಷಾನಂದ ಶ್ರೀ, ರುದ್ರಾವದೂತ ಮಠದ ಕೃಷ್ಣಾನಂದ ಶ್ರೀಗಳು,ಆಲಗೂರು ಧರಿದೇವರು, ಡಾ.ತಾತಾಸಾಹೇಬ ಬಾಂಗಿ ಇನ್ನಿತರರು ಮಾತನಾಡಿದರು. ನಾಗಪ್ಪ ಸನದಿ, ಬಸವರಾಜ ನ್ಯಾಮಗೌಡ, ಜಿಪಂ ಸದಸ್ಯ ಬಸವ ರಾಜ ಬಿರಾದಾರ,ಸಂಗಮೇಶ ಕಾಡಗಿ,ನಜೀರ ಕಂಗನೊಳ್ಳಿ, ಅಯೂಬ ಗದಗ,ಉಮೇಶ ಆಲ ಮೇಲಕರ, ಗಣೇಶ ಶಿರಗಣ್ಣವರ, ರವಿ ಯಡಹಳ್ಳಿ,ಬಸವರಾಜ ಹರಕಂಗಿ, ರಾಜೇಸಾಬ ಕಡಕೊೀಳ, ಕುಮಾರ ಆಲಗೂರ, ನಜೀಬ ಆಲಗೂರ ಇನ್ನಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ವಿರಳ: 

ಜಮಖಂಡಿ ಬಂದ್ ಕರೆಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಗುರುವಾರ ಜಮಖಂಡಿ ಮಾರುಕಟ್ಟೆ(ಸಂತೆ) ಇರುವುದರಿಂದ ಗ್ರಾಮೀಣ ಭಾಗದ ವ್ಯಾಪಾರಸ್ಥರು ನಿತ್ಯದಂತೆ ವ್ಯಾಪಾರ ಮಾಡಿದರು. ಉರಿಬಿಸಿಲಲ್ಲಿ ಪ್ರತಿಭಟಣೆಯಲ್ಲಿ ಸಾಮಾನ್ಯ ಜನರು ಭಾಗವಹಿಸದಿರುವುದು ಎದ್ದು ಕಾಣುತ್ತಿತ್ತು. ಸಾವಳಗಿ ತಾಲೂಕು ಹೋರಾಟ ಸಮಿತಿ ಅವರು ಹಾಜರಿರಲಿಲ್ಲ.

ಏಕಪಕ್ಷೀಯ: 

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಕಂಡಿದ್ದು, ಬಿಜೆಪಿಯಮುಖಂಡರು ಯಾರು ಇರಲಿಲ್ಲ. ಕಾಂಗ್ರೆಸ್ ಶಾಸಕ ಆನಂದ ನ್ಯಾಮಗೌಡ ಗೈರ ಹಾಜರಾತಿ ಎದ್ದು ಕಾಣುತ್ತಿತ್ತು. ಕಾರ್ಯಕರ್ತರು ಬೆರಳೆಣೆಕೆಯಷ್ಟು ಮಾತ್ರ ಇದ್ದುದರಿಂದ ಏಕಪಕ್ಷೀಯವಾಗಿ ಕಂಡು ಬಂದಿತು. ನಮಗೂ ಜಿಲ್ಲೆ ಬೇಕು ಆದರೆ ಪ್ರತಿ ಭಟನೆ ಮಾಡುವವರು ಏಕಪಕ್ಷೀಯವಾಗಿ ಮಾಡುತ್ತಿದ್ದಾರೆ. ಅದಕ್ಕೆ ಹಾಜರಿರಲಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಬಿಜೆಪಿ ಮುಖಂಡರ ತಿಳಿಸಿದರು.

ಶಾಲಾ ಮಕ್ಕಳು ಭಾಗಿ: 

ಜನಸಾಮಾನ್ಯ ಜನರು ಅಲ್ಪಪ್ರಮಾಣದಲ್ಲಿ ಭಾಗವಹಿಸಿದರಿಂದ ಇಲ್ಲಿನ ಶಾಸಕರ ಒಡೆತನಕ್ಕೆ ಸೇರಿದ ರಾಯಲ್ ಪ್ಯಾಲೇಸ್ ಶಾಲೆಯ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

ಸಂಚಾರ ಸ್ಥಗಿತ: 

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದರಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ಬಂದಿತ್ತು. ಅಂಗಡಿ ಮುಗ್ಗಟ್ಟುಗಳು ಬಂದ್ ಮಾಡಲಾಗಿತ್ತು. ಕೆಲವು ಶಾಲಾ-ಕಾಲೇಜುಗಳು ಪ್ರಾರಂಭಗೊಂಡಿದ್ದು, ವಕೀಲರ ಸಂಘ ಬೆಂಬಲ ನೀಡಿತ್ತು. ಸಾರಿಗೆ ಸ್ಥಗಿತಗೊಂಡಿದ್ದರ ಪ್ರಯಾಣಿಕರು ಅಲ್ಲಲ್ಲಿ ಪರದಾಡಿದ್ದು ಕಂಡು ಬಂದಿತು. ಆದರೆ, ಖಾಸಗಿ ಬಸ್ ಹಾಗೂ ಟಂಟಂ ಸೇವೆ ಆರಂಭ ಇದ್ದಿದ್ದರಿಂದ ಬಂದ್‌ನ ಬಿಸಿ ಅಷ್ಟೊಂದು ಜನತೆಗೆ ತಟ್ಟಲ್ಲಿಲ. ಒಟ್ಟಾರೆಯಾಗಿ ಜಮಖಂಡಿ ಜಿಲ್ಲೆಗಾಗಿ ನಡೆದ ಬಂದ್‌ಗೆ ನಿರಸ ಪ್ರಕ್ರಿಯೆ ವ್ಯಕ್ತವಾಯಿತು.

Latest Videos
Follow Us:
Download App:
  • android
  • ios