ಧಾರವಾಡ (ಜ.24): ಬೈಪಾಸ್‌ ರಸ್ತೆ ಇಟಿಗಟ್ಟಿಬಳಿ ನಡೆದ ಭೀಕರ ಅಪಘಾತಕ್ಕೆ ಶನಿವಾರ ಒಂಭತ್ತು ದಿನವಾದ ಹಿನ್ನೆಲೆಯಲ್ಲಿ ಕೆಲಗೇರಿ ಹಾಗೂ ಸುತ್ತಲಿನ ಬಡಾವಣೆಗಳ ಗ್ರಾಮಸ್ಥರು ಮೃತರಾದ 11 ಜನರ ಸಾಮೂಹಿಕ ಪುಣ್ಯತಿಥಿ ಆಚರಿಸಿ ಗಮನ ಸೆಳೆದರು.

ದುರ್ಘಟನೆಯಲ್ಲಿ ದಾವಣಗೆರೆ ಮೂಲದ ಒಂಭತ್ತು ಮಹಿಳೆಯರು ಹಾಗೂ ಮಿನಿ ಬಸ್‌ ಚಾಲಕ ಮತ್ತು ಕ್ಲೀನರ್‌ ಸೇರಿ 11 ಜನರು ಸ್ಥಳದಲ್ಲಿಯೇ ಮೃತರಾಗಿದ್ದು, ನಾಲ್ವರಿಗೆ ತೀವ್ರ ಗಾಯಗಳಾಗಿದ್ದವು. 

ಧಾರವಾಡ ಬಳಿ ಭೀಕರ ಆಕ್ಸಿಡೆಂಟ್‌: ಅಪಘಾತ ಕುರಿತು ವರದಿ ಕೇಳಿದ ಸುಪ್ರೀಂಕೋರ್ಟ್ ...

ಹೋರಾಟದ ಅಂಗವಾಗಿ ಶನಿವಾರ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಕೆಲಗೇರಿ ಬೈಪಾಸ್‌ ರಸ್ತೆಯ ಬದಿ ಮೃತರ ಭಾವಚಿತ್ರದೊಂದಿಗೆ ಒಂದು ನಿಮಿಷ ಮೌನಾಚರಣೆ ಮಾಡಿ, ನೈವೈದ್ಯ ಮಾಡಿ ಪುಣ್ಯತಿಥಿ ಸಂದರ್ಭದಲ್ಲಿ ನಡೆಯುವ ಎಲ್ಲ ರೀತಿಯ ಪೂಜೆಗಳನ್ನು ಮಾಡಲಾಯಿತು.