ಪಾವಗಡ (ಆ.13): 6 ಮಂದಿ ಪೌರಕಾರ್ಮಿಕರು ಸೇರಿ ಬುಧವಾರ ಒಂದೇ ದಿನ ತಾಲೂಕಿನಾದ್ಯಂತ 23 ಮಂದಿಗೆ ಸೋಂಕು ದೃಢವಾಗಿರುವುದಾಗಿ ಜಿಲ್ಲಾ ಆರೋಗ್ಯ ಕೇಂದ್ರದಿಂದ ಮಾಹಿತಿ ಲಭ್ಯವಾಗಿದೆ.

ಇದರ ಬೆನ್ನಲ್ಲೆ ಪಿಎಸ್‌ಐಯೊಬ್ಬರಿಗೆ ಸೋಂಕು ದೃಢವಾಗಿದ್ದು ಪಾವಗಡ ಪೊಲೀಸ್‌ ಠಾಣೆ ಸೀಲ್‌ಡೌನ್‌ ಮಾಡಲಾಗಿದೆ. 6ಮಂದಿ ಪೌರಕಾರ್ಮಿಕರಿಗೆ ಕೊರೋನಾ ಸೋಂಕು ಪಾಸಿಟಿವ್‌ ದೃಢವಾದ ಕಾರಣ ತಾಲೂಕು ಆಡಳಿತದಿಂದ ಪಟ್ಟಣದ ಪುರಸಭೆ ಕಂಪ್ಲೀಟ್‌ ಸೀಲ್‌ಡೌನ್‌ ಮಾಡಲಾಗಿದೆ.

ಸಚಿವ ಶ್ರೀರಾಮುಲು ತಾಯಿ, ಸೋದರನಿಗೂ ಕೊರೋನಾ ಪಾಸಿಟಿವ್‌..

ಅ.12ರಂದು ಪತ್ತೆಯಾದ 23 ಮಂದಿ ಸೇರಿದಂತೆ ಇದುವರೆವಿಗೂ ತಾಲೂಕಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 231ಕ್ಕೆ ಏರಿಕೆಯಾಗಿದೆ. ಈ ಎಲ್ಲಾ ಸೋಂಕಿತರನ್ನು ಪಟ್ಟಣದ ಕೊವಿಡ್‌ ಕೇರ್‌ ಸೆಂಟರ್‌ಗೆ ದಾಖಲಿಸಲಾಗಿದೆ. ಕಳೆದ 1 ತಿಂಗಳಿಂದಲೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ.