ಚಿತ್ರದುರ್ಗ: ಜಿಲ್ಲಾಸ್ಪತ್ರೆಯಲ್ಲಿ ಕೋತಿಗಳ‌ ಕಿರಿಕ್, ಆತಂಕದಲ್ಲಿ ರೋಗಿಗಳು..!

ಕೋತಿಗಳು ಎಲ್ಲೆಂದರಲ್ಲಿ ಓಡಾಡೋದ್ರಿಂದ ಯಾರಿಗೂ ಸಮಸ್ಯೆ ಇಲ್ಲ. ಮೇಲಾಗಿ ಅವುಗಳು ರೋಗಿಗಳ ಎಲ್ಲಿ ಮೇಲೆ ದಾಳಿ ಮಾಡ್ತಾವೋ ಎನ್ನುವ ಭಯ ಇರೋದ್ರಿಂದ ಕೂಡಲೇ ಶೀಘ್ರ ಕ್ರಮ ಆದ್ರೆ ಒಳ್ಳೆಯದು.
 

Patients in Anxiety For Monkey at District Hospital in Chitradurga grg

ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ನ.29):  ಇಷ್ಟು ದಿನ‌ ಸಿಬ್ಬಂದಿಗಳ‌ ನಿರ್ಲಕ್ಷ್ಯದಿಂದ ಆಸ್ಪತ್ರೆಗಳಲ್ಲಿ ನಾಯಿಗಳು ಓಡಾಡಿದ್ದು ದೊಡ್ಡ ವಿಷಯವಾಗ್ತಿತ್ತು. ಆದ್ರೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಕೋತಿಗಳ ಕಾಟದಿಂದ ರೋಗಿಗಳು ಆತಂಕ ಪಡುವ ಸನ್ನಿವೇಶಗಳು ಎದುರಾಗಿವೆ. ಈ ಕುರಿತು ವರದಿ ಇಲ್ಲಿದೆ....,

ಸರ್ಕಾರಿ ಆಸ್ಪತ್ರೆಗಳು ಅಂದ್ಮೇಲೆ ಅಧಿಕಾರಿಗಳು, ಸಿಬ್ಬಂದಿಗಳ ನಿರ್ಲಕ್ಷ್ಯ ಇರೋದು ಸಹಜ. ಆದ್ರೆ ಚಿತ್ರದುರ್ಗ ಜಿಲ್ಲಾಸ್ಪತ್ರೆ ನಿತ್ಯ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಆಗ್ತಲೇ‌ ಇರುತ್ತದೆ. ಕಳೆದೊಂದು ವಾರದಿಂದ ಕೋತಿಗಳ ಏಕಾಏಕಿ ಆಸ್ಪತ್ರೆಯ ವಾರ್ಡ್ ಒಳಗೆ ನುಗ್ಗಿ ರೋಗಿಗಳಿಗೆ ಸಂಬಂಧಿಸದ ವಸ್ತುಗಳ ಮೇಲೆ ಹಾನಿ ಮಾಡಿ ಹೋಗ್ತಿವೆ. ಈ ದೃಶ್ಯಗಳಲ್ಲಿ ನೋಡಬಹುದು ಕೋತಿಯೊಂದು ಎಷ್ಟು ರಾಜಾರೋಷವಾಗಿ ರೋಗಿಗಳ ಬೆಡ್ ಮೇಲೆ ಓಡಾಡ್ತಿದೆ. ಇದ್ರಿಂದಾಗಿ ರೋಗಿಗಳು ಹಾಗೂ ರೋಗಿ ಸಂಬಂಧಿಕರು ಆತಂಕದಲ್ಲಿ ಆಸ್ಪತ್ರೆಗೆ ಬರುವ ವಾತಾವರಣ ನಿರ್ಮಾಣವಾಗಿದೆ. ನಿತ್ಯ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದ್ದು, ಆಸ್ಪತ್ತೆಯಲ್ಲಿ ಕೋತಿಗಳು ಹೆಚ್ಚು ಹಾವಳಿ ಮಾಡ್ತಿವೆ, ರೋಗಿಗಳ ಮೇಲೆ ಅಟ್ಯಾಕ್ ಮಾಡುವ ಮುನ್ನ ಅವುಗಳ ಹಾವಳಿ ತಪ್ಪಿಸಿ ಎಂಬುದು ರೋಗಿ‌ ಸಂಬಂಧಿಕರ ಆಗ್ರಹ.

CHITRADURGA: ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಕೋಟೆ ನಾಡಿನಲ್ಲಿ ಪ್ರತಿಭಟನೆ!

ಕಳೆದೊಂದು ವಾರದಿಂದಲೂ ಕೋತಿಗಳು ವಾರ್ಡ್ ಗಳಿಗೆ ನುಗ್ತಿರೋದಲ್ಲದೇ, ವಾರ್ಡ್ ನ ಕಿಟಕಿ, ಬಾಗಿಲುಗಳನ್ನು ಮುರಿದು ಹಾಕ್ತಿರೋದು ಬೇಸರದ ಸಂಗತಿ. ಇನ್ನೂ ವಿಚಾರವಾಗಿ‌ ಜಿಲ್ಲಾ ಸರ್ಜನ್ ಅವರನ್ನೇ ಬಿಚಾರಿಸಿದ್ರೆ, ಕೋತಿಗಳು ವಾರ್ಡ್ ಒಳಗೆ ಬರ್ತಿರೋದು ನಮ್ಮ ಗಮನಕ್ಕೆ ಬಂದಿದೆ. ನಾನು ಅಧಿಕಾರಕ್ಕೆ‌ ಬಂದ ಮೇಲೆ ಪ್ರತೀ ವಾರ್ಡ್ ಗೂ ಭೇಟಿ ನೀಡಿ ಪರಿಶೀಲನೆ ನಡೆಸಲಾಗ್ತಿದೆ. ಕಿಟಕಿ ಬಳಿ ನಿರ್ಮಿಸಿರೋ ಮೆಷ್ ಹಾಳಾಗಿರೋದ್ರಿಂದ ಆ ಮೂಲಕ ಕೋತಿಗಳು ಆಗಮಿಸ್ತಿವೆ.‌ ಶೀಘ್ರವೇ ದುರಸ್ಥಿ ಸರಿಪಡಿಸುವ ಕೆಲಸ ಮಾಡಲಾಗುವುದು. ಆಸ್ಪತ್ರೆ ಬಳಿಯೇ ಹೆಮ್ಮರ ಇರೋದ್ರಿಂದ ಕೋತಿಗಳ ವಾಸ ಸ್ಥಳವಾಗಿದೆ. ಅರಣ್ಯ ಇಲಾಖೆ‌ಗೆ ಪತ್ರ ಬರೆದು ಸೂಕ್ತ ಕ್ರಮ ಕೈಕೊಳ್ತೀವಿ ಎಂದು ಜಿಲ್ಲಾ ಸರ್ಜನ್ ಜಿಲ್ಲಾಸ್ಪತ್ರೆ ಡಾ.ರವೀಂದ್ರ ಭರವಸೆ ನೀಡಿದರು.

ಕೋತಿಗಳು ಎಲ್ಲೆಂದರಲ್ಲಿ ಓಡಾಡೋದ್ರಿಂದ ಯಾರಿಗೂ ಸಮಸ್ಯೆ ಇಲ್ಲ. ಮೇಲಾಗಿ ಅವುಗಳು ರೋಗಿಗಳ ಎಲ್ಲಿ ಮೇಲೆ ದಾಳಿ ಮಾಡ್ತಾವೋ ಎನ್ನುವ ಭಯ ಇರೋದ್ರಿಂದ ಕೂಡಲೇ ಶೀಘ್ರ ಕ್ರಮ ಆದ್ರೆ ಒಳ್ಳೆಯದು.

Latest Videos
Follow Us:
Download App:
  • android
  • ios