ಹುಬ್ಬಳ್ಳಿ(ಜ.29): ರೋಗಿಯೊಬ್ಬ ಆಸ್ಪತ್ರೆಯ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಕಿಮ್ಸ್‌ ಆಸ್ಪತ್ರೆಯಲ್ಲಿ ಇಂದು(ಬುಧವಾರ) ನಡೆದಿದೆ. ಮಲ್ಲೇಶಪ್ಪ ಕಳಲಿ ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ರೋಗಿಯಾಗಿದ್ದಾನೆ. 

"

ಕಳೆದ ಮೂರು ದಿನಗಳ ಹಿಂದೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಗಡೇಯಕನಹಳ್ಳಿಯ ಮಲ್ಲೇಶಪ್ಪ ಕಳಲಿ ತಂದೆಯ ಜೊತೆ ಜಗಳವಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಅಂದು ಬದುಕುಳಿದಿದ್ದ ಮಲ್ಲೇಶಪ್ಪನಿಗೆ ಕಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಲ್ಲೇಶಪ್ಪ ಕಳಲಿ ಇಂದು ಮತ್ತೆ ತಂದೆಯ ಸಮ್ಮುಖದಲ್ಲೇ ಕಿಮ್ಸ್ ಆಸ್ಪತ್ರೆಯ ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಚಿಕ್ಸಿತ್ಸೆ ಪಡೆಯುತ್ತಿದ್ದ ವಾರ್ಡ್‌ನ ಕಿಟಕಿಯಿಂದ ಹೊರಗೆ ಬಂದು ಸ್ಟೇರ್ ಕೇಸ್‌ನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಮಲ್ಲೇಶಪ್ಪನನ್ನ ಕಿಮ್ಸ್ ಸಿಬ್ಬಂದಿ ರಕ್ಷಣೆ ಮಾಡಿ ಇದೀಗ ಪೊಲೀಸರ ವಶಕ್ಕೆ ನೀಡಿದ್ದಾರೆ.