Asianet Suvarna News Asianet Suvarna News

Bengaluru| ರಾತ್ರಿ 11ರವರೆಗೆ ಮೆಟ್ರೋ ಓಡಿಸಿ, ಪ್ರಯಾಣಿಕರ ಆಗ್ರಹ

*  ರಾತ್ರಿ 9.30ಕ್ಕೆ ಕೊನೆಯ ರೈಲು
*  ನೈಟ್‌ ಕರ್ಫ್ಯೂ ರದ್ದಾದ ಬಳಿಕವೂ ಸೇವೆ ನೀಡದ ನಮ್ಮ ಮೆಟ್ರೋ
*  ಶೀಘ್ರ ತೀರ್ಮಾನ: ಅಂಜಂ ಫರ್ವೇಜ್‌
 

Passengers Demand for Metro Service Until 11 pm in Bengaluru grg
Author
Bengaluru, First Published Nov 11, 2021, 7:24 AM IST
  • Facebook
  • Twitter
  • Whatsapp

ಬೆಂಗಳೂರು(ನ.11): ಕೋವಿಡ್‌-19(Covid19) ಪ್ರಕರಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ಬೆಂಗಳೂರು(Bengaluru) ನಗರದಲ್ಲಿ ಜಾರಿಯಲ್ಲಿದ್ದ ರಾತ್ರಿ ಕರ್ಫ್ಯೂವನ್ನು(Night Curfew) ಸರ್ಕಾರ ರದ್ದು ಮಾಡಿದ್ದರೂ ‘ನಮ್ಮ ಮೆಟ್ರೋ’(Namma Metro) ತನ್ನ ಸೇವೆಯ ಅವಧಿಯನ್ನು ರಾತ್ರಿ 11ರವರೆಗೆ ಇನ್ನೂ ವಿಸ್ತರಿಸದೇ ಇರುವುದಕ್ಕೆ ಮೆಟ್ರೋ ಪ್ರಯಾಣಿಕರ(Passengers) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ಕೆಎಸ್‌ಆರ್‌ಟಿಸಿ(KSRTC), ರೈಲು(Train) ಸಂಚಾರ, ರಾತ್ರಿ ಪಾಳಿಯ ಕೆಲಸಗಳು ನಡೆಯುತ್ತಿವೆ. ಬೇರೆ ಬೇರೆ ಊರಿನಿಂದ ಬಂದು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸಂಚಾರ ಅವಧಿಯನ್ನು ರಾತ್ರಿ 11ರವರೆಗೆ ವಿಸ್ತರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸದ್ಯ ದಿನದ ಕೊನೆಯ ಮೆಟ್ರೋ ರೈಲು ತನ್ನ ಮೊದಲ ನಿಲ್ದಾಣದಿಂದ ರಾತ್ರಿ 9.30ಕ್ಕೆ ಹೊರಡುತ್ತಿದೆ. ಇದರಿಂದ ಸೆಕೆಂಡ್‌ ಶಿಫ್ಟ್‌ನಲ್ಲಿ ಕೆಲಸ ಮಾಡುವವರಿಗೆ ಮೆಟ್ರೋ ಬಳಸಲು ಸಾಧ್ಯವಾಗುತ್ತಿಲ್ಲ. ಕರ್ಫ್ಯೂ ತೆರವುಗೊಳಿಸುವ ಮೂಲಕ ಬೆಂಗಳೂರಿನಲ್ಲಿ ತಡ ರಾತ್ರಿಯ ಚಟುವಟಿಕೆಗೆ ಅವಕಾಶ ಸಿಕ್ಕಿರುವಾಗ ಮೆಟ್ರೋ ತನ್ನ ಸೇವೆಯನ್ನು 10ಕ್ಕೆ ಮುಕ್ತಾಯಗೊಳಿಸುತ್ತಿರುವುದು ಸರಿಯಲ್ಲ ಎಂದು ಹಲಸೂರಿನ ನಿವಾಸಿ, ಸಾಫ್ಟ್‌ವೇರ್‌ ಎಂಜಿನಿಯರ್‌(Software Engineer) ವಿಶ್ವಾಸ್‌ ಎಂ.ರಾವ್‌ ಅಭಿಪ್ರಾಯ ಪಡುತ್ತಾರೆ.

2011ರಲ್ಲಿ ಹಳಿಗೆ ಇಳಿದ ನಮ್ಮ ಮೆಟ್ರೋಗೆ ದಶಕದ ಸಂಭ್ರಮ

ಮೆಟ್ರೋ ತನ್ನ ಸೇವೆಯನ್ನು ರಾತ್ರಿ 11ರ ತನಕ ವಿಸ್ತರಿಸಬೇಕು. ಬೆಂಗಳೂರಿನಂತಹ ಕಾಸ್ಮೋಪಾಲಿಟನ್‌ ನಗರದಲ್ಲಿ(Cosmopolitan city) ಭವಿಷ್ಯದ ಸಂಚಾರ ವ್ಯವಸ್ಥೆ ಎಂದೇ ಪರಿಗಣಿಸಲಾಗುವ ಮೆಟ್ರೋ ಹತ್ತು ಗಂಟೆಗೆ ಸೇವೆ ಕೊನೆಗೊಳಿಸುತ್ತದೆ. ಇದರಿಂದ ರಾತ್ರಿ ಓಡಾಟ ನಡೆಸಲು ತೊಂದರೆ ಆಗುತ್ತದೆ ಎಂದು ಯಲಚೇನಹಳ್ಳಿಯ ನಿವಾಸಿ ಸುದರ್ಶನ್‌ ಹೇಳುತ್ತಾರೆ.

ಇನ್ನು ಕೆಲವರು ಮೆಟ್ರೋ ತನ್ನ ಕಾರ್ಯಾಚರಣೆಯನ್ನು ಬೆಳಗ್ಗೆ 6ರ ಬದಲು 5ರಿಂದ ಆರಂಭಿಸಬೇಕು. ಬೆಳ್ಳಂಬೆಳಗೆ ನಗರ ಪ್ರವೇಶಿಸುವ ಜನರಿಗೆ ಮೆಟ್ರೋ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸೀಮಿತ ಪ್ರಮಾಣದಲ್ಲಾದರೂ ಬೆಳಗ್ಗೆ 5ರಿಂದ ಮೆಟ್ರೋ ತನ್ನ ಚಟುವಟಿಕೆ ಆರಂಭಿಸಬೇಕು ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ.

ಶೀಘ್ರ ತೀರ್ಮಾನ: ಅಂಜಂ ಫರ್ವೇಜ್‌

ಮೆಟ್ರೋ ಸೇವೆ ಅವಧಿಯ ವಿಸ್ತರಣೆಯ ಬಗ್ಗೆ ಆದಷ್ಟು ಬೇಗ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ. ಸೋಮವಾರ 2.68 ಲಕ್ಷ ಮಂದಿ ಮೆಟ್ರೊ ಸೇವೆ ಬಳಸಿದ್ದು, ಕೋವಿಡ್‌ ನಂತರ ಒಂದೇ ದಿನ ಅತಿ ಹೆಚ್ಚು ಪ್ರಯಾಣಿಕರು ಮೆಟ್ರೋ ಸೇವೆ ಬಳಸಿಕೊಂಡಿದ್ದಾರೆ. ಸದ್ಯ 2.50 ಲಕ್ಷಕ್ಕಿಂತ ಹೆಚ್ಚು ಪ್ರಯಾಣಿಕರು ಮೆಟ್ರೋ ಬಳಸುತ್ತಿದ್ದಾರೆ. ಈ ತಿಂಗಳಾಂತ್ಯಕ್ಕೆ 3 ಲಕ್ಷ ಪ್ರಯಾಣಿಕರನ್ನು ಹೊಂದುವ ಗುರಿ ಇದೆ. ಈ ನಿಟ್ಟಿನಲ್ಲಿ ಸೇವೆಯ ಅವಧಿಯ ವಿಸ್ತರಣೆ ಬಗ್ಗೆ ಶೀಘ್ರ ತೀರ್ಮಾನ ತೆಗೆದುಕೊಳ್ಳುವುದಾಗಿ ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೇಜ್‌ ಹೇಳಿದ್ದಾರೆ.

ಬೆಂಗಳೂರಿನ ಮೆಟ್ರೋ ಸ್ಟೇಷನ್ ಗೆ ಶಂಕರ್ ನಾಗ್ ಹೆಸರು ?

ಬೆಂಗಳೂರು ಮೆಟ್ರೋ 3ನೇ ಹಂತಕ್ಕೆ ತಯಾರಿ ಆರಂಭ

ಬೆಂಗಳೂರು(Bengaluru) ಮೆಟ್ರೋ(Metro) ನಿಗಮವು ಎರಡನೇ ಹಂತದ ಯೋಜನೆಗಳು ಇನ್ನೂ ನಡೆದಿರುವಾಗಲೇ ಮೂರನೇ ಹಂತದ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಸುಮಾರು 42 ಕಿಲೋ ಮೀಟರ್‌ ಉದ್ದದ ಮೂರನೇ ಹಂತಕ್ಕೆ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಲು ನಿಗಮ ಅನುಮತಿ ನೀಡಿದೆ.

ಮೂರನೇ ಹಂತದ ಯೋಜನೆಯಲ್ಲಿ ಮೆಟ್ರೋ ಮಾರ್ಗ ಎಲ್ಲೆಲ್ಲಿ ಹೋಗುತ್ತದೆ ಎಂಬ ವಿವರವನ್ನು ಒಳಗೊಂಡ ವರದಿಯನ್ನು ಮೆಟ್ರೋ ನಿಗಮ(Metro Corporation) ಸಿದ್ಧಪಡಿಸಿದೆ. ಈ ವರದಿಯ ಆಧಾರದಲ್ಲಿ ರೈಲ್‌ ಇಂಡಿಯಾ ಟೆಕ್ನಿಕಲ್‌ ಆ್ಯಂಡ್‌ ಇಕಾನಾಮಿಕ್‌ ಸರ್ವಿಸ್‌ (ರೈಟ್ಸ್‌)ಗೆ ಡಿಪಿಆರ್‌ ಸಿದ್ಧಪಡಿಸುವಂತೆ ಕೋರಿದೆ. ಮುಂದಿನ ವರ್ಷದ ಜೂನ್‌ ಒಳಗೆ ಡಿಪಿಆರ್‌ ಸಿದ್ಧಗೊಳ್ಳುವ ನಿರೀಕ್ಷೆಯಿದೆ. ಇದರ ಜೊತೆಗೆ ಟ್ರಾಫಿಕ್‌ ಸರ್ವೇ(Traffic Survey) ಕೂಡ ನಡೆಯಲಿದೆ.
 

Follow Us:
Download App:
  • android
  • ios