ಹುಸ್ಕೂರು ಸಮೀಪದ ಆವಲಹಳ್ಳಿ ಬಳಿ ಪ್ಯಾಸೆಂಜರ್‌ ರೈಲೊಂದು ಕಂಟೈನರ್‌ಗೆ ಗುದ್ದಿದೆ ರೈಲು ಗುದ್ದಿದ ರಭಸಕ್ಕೆ ಕಂಟೈನರ್‌ ಸಂಪೂರ್ಣ ಪುಡಿ, ಪುಡಿ

ಆನೇಕಲ್ (ಸೆ.21): ತಾಲೂಕಿನ ಹುಸ್ಕೂರು ಸಮೀಪದ ಆವಲಹಳ್ಳಿ ಬಳಿ ಪ್ಯಾಸೆಂಜರ್‌ ರೈಲೊಂದು ಕಂಟೈನರ್‌ಗೆ ಗುದ್ದಿದ ಘಟನೆ ನಡೆದಿದೆ. ರೈಲು ಗುದ್ದಿದ ರಭಸಕ್ಕೆ ಕಂಟೈನರ್‌ ಸಂಪೂರ್ಣ ಪುಡಿ, ಪುಡಿಯಾಗಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮೈಸೂರಿನಿಂದ ತಮಿಳುನಾಡಿನ ಮೈಲಾರಪುರಿಗೆ ಹೋಗುತ್ತಿದ್ದ ಈ ಎಕ್ಸ್‌ಪ್ರೆಸ್‌ ರೈಲು ಕಂಟೈನರ್‌ಗೆ ಗುದ್ದಿದೆ ಎಂದು ತಿಳಿದುಬಂದಿದೆ.

ಮರಕ್ಕೆ ಗುದ್ದಿದ ಕಾರು, ಕಲಬುರಗಿ ವಿವಿ ಕುಲಸಚಿವ ಲಿಂಗರಾಜ್ ಶಾಸ್ತ್ರಿ ದುರ್ಮರಣ

ಆವಲಹಳ್ಳಿ ಬಳಿ ಎರಡು ಹಳಿಗಳು ನಿರ್ಮಾಣವಾಗುತ್ತಿತ್ತು. ಒಂದು ಹಳಿ ಮೇಲೆ ರೈಲು ಸಂಚರಿಸುತಿತ್ತು. ಸಂಜೆ ಅದೇ ಹಳಿ ಮೇಲೆ ಕಂಟೈನರ್‌ ದಾಟಲು ಯತ್ನಿಸಿದ್ದಾಗ ಹಳಿ ಮೇಲೆ ಕಂಟೈನರ್‌ ನಿಂತು ಚಕ್ರವೊಂದು ಸಿಲುಕಿತ್ತು. ರೈಲು ಬರುತ್ತಿದ್ದನ್ನು ಕಂಡು ಜೀವ ಉಳಿಸಿಕೊಳ್ಳಲು ಚಾಲಕ ಕಂಟೈನರ್‌ ಬಿಟ್ಟು ಓಡಿ ಹೋಗಿದ್ದು, ಬಳಿಕ ರೈಲು ಗುದ್ದಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದ ವೇಳೆ ರೈಲಿನ ಇಂಜಿನ್‌ ಸಹ ಅಲ್ಪಪ್ರಮಾಣದಲ್ಲಿ ಜಖಂ ಆಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದೆ.