ಮತದಾನ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿ: ಸಿಇಒ
:‘ಮತದಾನ’ ಅತ್ಯಂತ ಪವಿತ್ರವಾದದ್ದು. ಜಿಲ್ಲೆಯ ಮತದಾರರು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮತದಾನದ ಮಹತ್ವದ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವ ಸಂಬಂಧ ಸ್ವೀಪ್ ಚಟುವಟಿಕೆಗಳನ್ನು ತೀವ್ರಗೊಳಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅಧಿಕಾರಿಗಳಿಗೆ ತಿಳಿಸಿದರು.
ತುಮಕೂರು :‘ಮತದಾನ’ ಅತ್ಯಂತ ಪವಿತ್ರವಾದದ್ದು. ಜಿಲ್ಲೆಯ ಮತದಾರರು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮತದಾನದ ಮಹತ್ವದ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವ ಸಂಬಂಧ ಸ್ವೀಪ್ ಚಟುವಟಿಕೆಗಳನ್ನು ತೀವ್ರಗೊಳಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯತ್ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಶುಕ್ರವಾರ ವಿಧಾನಸಭೆ ಚುನಾವಣೆ-2023 ಕುರಿತಂತೆ ಸ್ವೀಪ್ ಮೂಲಕ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಕುರಿತು ಚರ್ಚಿಸಲು ಕರೆಯಲಾದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು
ಮತದಾನ ಕಾಟಾಚಾರಕ್ಕೆ ಮತ್ತು ಯಾರ ಒತ್ತಡಕ್ಕೂ ನಡೆಯಬಾರದು. ಹಬ್ಬದ ರೀತಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ವಿಶೇಷತೆಯನ್ನು ಬಿಂಬಿಸುವ ಥೀಮ್‌ಗಳನ್ನು(ವಿಷಯ) ಬಳಸಿ ಮತಗಟ್ಟೆಗಳನ್ನು ಸಜ್ಜುಗೊಳಿಸಬೇಕು. ಕಲ್ಲೂರು ಮತ್ತು ವೈ.ಎನ್.ಹೊಸಕೋಟೆಯ ಸೀರೆ ನೇಯ್ಗೆ, ಜಾನಪದ ಕಲೆ, ಸೋಮನ ಕುಣಿತ, ಜಿಲ್ಲೆಯ ವಿಶೇಷ ಬೆಳೆಗಳಾದ ತೆಂಗು ಅಡಿಕೆ, ಪಾವಗಡದ ಗೋಗ್ರೀನ್ ಎನರ್ಜಿ ಸೋಲಾರ್ ಪಾರ್ಕ್, ಸಖಿ ಪಿಂಕ್ ಮತಗಟ್ಟೆ, ಅಂಗವಿಕಲ ಸ್ನೇಹಿ ಮತಗಟ್ಟೆಗಳನ್ನು ಸ್ಥಾಪಿಸುವ ಕುರಿತು ಈಗಾಗಲೇ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಮೇ ಭಾರತ್ ಹೂ ಮತದಾನ ಜಾಗೃತಿ ಗಾಯನವನ್ನು ಸಾಕಷ್ಟುಪ್ರಚುರಪಡಿಸಬೇಕು. ವಿವಿಧ ಇಲಾಖೆಗಳ ಸಭೆ-ಸಮಾರಂಭ, ಕಾರ್ಯಕ್ರಮಗಳಲ್ಲಿ ಸ್ವೀಪ್ ಚಟುವಟಿಕೆಗಳನ್ನು ಹೆಚ್ಚಿಸಬೇಕು. ಬಿಎಲ್‌ಓಗಳು ತಮ್ಮ ಮತಗಟ್ಟೆವ್ಯಾಪ್ತಿಯ ಪ್ರತಿ ಕುಟುಂಬದ ಒಬ್ಬ ಸದಸ್ಯರನ್ನೊಳಗೊಂಡಂತೆ ವಾಟ್ಸ್‌ಪ್ ಗ್ರೂಪ್‌ಗಳನ್ನು ರಚಿಸಿ ಮತದಾನ ಪಾವಿತ್ರ್ಯತೆ ಹಾಗೂ ಮತದಾರರ ಚೀಟಿ, ಮತಕೇಂದ್ರ ಕುರಿತು ಆಗಿಂದ್ದಾಗೆ ಮಾಹಿತಿಯನ್ನು ನೀಡಬೇಕು ಎಂದು ಸೂಚಿಸಿದರು.
ಶಿಕ್ಷಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳ ಮೂಲಕ ರಾರಯಲಿ, ಜಾಥಾ, ಪ್ರಭಾತ್ ಬೇರಿ, ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು ಮತ್ತು ವೈದ್ಯರುಗಳ ಮೂಲಕ ಪ್ರಚಾರ ಮತ್ತು ಜಾಗೃತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಂಗವಿಕಲರ ಕಲ್ಯಾಣ ಇಲಾಖೆ ಮೂಲಕ ರಂಗೋಲಿ ಸ್ಪರ್ಧೆ, ತೃತೀಯ ಲಿಂಗಿಗಳಿಗೆ, ದಮನಿತ ಮಹಿಳೆಯರಿಗೆ ಹಿರಿಯ ನಾಗರಿಕರಿಗೆ ಜಾಗೃತಿ, ಸಮಾಜ ಕಲ್ಯಾಣ ಇಲಾಖೆಯ ಮೂಲಕ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ, ಗುಡ್ಡಗಾಡು ಮತ್ತು ಅಲೆಮಾರಿ ಜನಾಂಗದವರನ್ನು ಮತದಾರರ ಪಟ್ಟಿಗೆ ಸೇರ್ಪಡೆ, ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ತಿಳುವಳಿಕೆ, ಕಾರ್ಮಿಕರಲ್ಲಿ ಜಾಗೃತಿ, ಕ್ರೀಡಾಕೂಟ, ವಾಹನಗಳ ಮೂಲಕ ಪ್ರಚಾರ, ಪೋಸ್ಟರ್, ಎಲ್‌ಇಡಿ ಸ್ಕೀನ್‌ಗಳ ಮೂಲಕ ಜಾಗೃತಿ, ಎನ್‌ಸಿಸಿ ವಿದ್ಯಾರ್ಥಿಗಳ ಮೂಲಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸ್ವೀಪ್ ನೋಡಲ್ ಅಧಿಕಾರಿ ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
‘ಶೇ.100ರಷ್ಟುಮತದಾನ ಆಗಲು ಜಾಗೃತಿ ಮೂಡಿಸಿ’
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. 82ರಷ್ಟುಮತದಾನವಾಗಿದೆ. ಈ ಬಾರಿ ಶೇ100ರಷ್ಟುಮತದಾನ ಆಗುವ ನಿಟ್ಟಿನಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಬೇಕಿದೆ. ಕೆಎಪಿ ಸರ್ವೆ(ನಾಲೆಜ್ಡ್ ಆಟಿಟ್ಯೂಡ್ ಅಂಡ್ ಪ್ರಾಕ್ಟೀಸ್) ಮೂಲಕ ಕಡಿಮೆ ಮತದಾನ ಆಗುವಂತಹ ಮತಗಟ್ಟೆಗಳನ್ನು ಗುರುತಿಸಿ ಮತದಾನದ ಮಹತ್ವದ ಬಗ್ಗೆ ಆ ಮತಗಟ್ಟೆಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 310 ಮತಗಟ್ಟೆಗಳನ್ನು ಜಿಲ್ಲೆಯಲ್ಲಿ ಗುರುತಿಸಲಾಗಿದೆ. ಈ ಪೈಕಿ ಪಾಲಿಕೆ ವ್ಯಾಪ್ತಿಯಲ್ಲಿ 221 ಮತಗಟ್ಟೆಗಳಲ್ಲಿ ಕಡಿಮೆ ಮತದಾನವಾಗಿದ್ದು, ಪ್ರಮಾಣ ಹೆಚ್ಚಿಸಲು ಕ್ರಮಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಸಿಇಒ ಸೂಚಿಸಿದರು.