ಕೂಸು ಸಮೇತ ಹೆತ್ತವರು ಐಸೋಲೇಷನ್ ವಾರ್ಡ್‌ಗೆ..!
ಬೆಂಗಳೂರಿನ ಬಂದ ದಂಪತಿ, ಹಸುಗೂಸನ್ನು ಸ್ವಗ್ರಾಮದಲ್ಲೇ ಬಿಟ್ಟುಕೊಳ್ಳದ ಹಿನ್ನೆಲೆಯಲ್ಲಿ ಮೂವರನ್ನೂ ದಾವಣಗೆರೆ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‌ಗೆ ದಾಖಲಿಸಿದ್ದು, ಈ ಮೂವರ ಜೊತೆಗೆ ಬಂದಿದ್ದ ನಾಲ್ವರ ಸ್ಯಾಂಪಲ್‌ನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳಿಸಲಾಗಿದೆ.
ದಾವಣಗೆರೆ(ಏ.12): ಬೆಂಗಳೂರಿನ ಬಂದ ದಂಪತಿ, ಹಸುಗೂಸನ್ನು ಸ್ವಗ್ರಾಮದಲ್ಲೇ ಬಿಟ್ಟುಕೊಳ್ಳದ ಹಿನ್ನೆಲೆಯಲ್ಲಿ ಮೂವರನ್ನೂ ದಾವಣಗೆರೆ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‌ಗೆ ದಾಖಲಿಸಿದ್ದು, ಈ ಮೂವರ ಜೊತೆಗೆ ಬಂದಿದ್ದ ನಾಲ್ವರ ಸ್ಯಾಂಪಲ್‌ನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳಿಸಲಾಗಿದೆ.
ಜಿಲ್ಲೆಯ ಹೊನ್ನಾಳಿ ತಾ. ಕತ್ತಿಗೆ ಗ್ರಾಮದ ಮೂಲದ ದಂಪತಿಗಳು ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ವಾಸಿಸುತ್ತಿದ್ದರು. ದಂಪತಿಗೆ ಹಸುಗೂಸು ಇದ್ದು, ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ವಗ್ರಾಮ ಕತ್ತಿಗೆಗೆಂದು ಬಂದಿದ್ದರು. ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಗ್ರಾಮಸ್ಥರು ಊರಿನೊಳಗೆ ಬಿಟ್ಟುಕೊಳ್ಳಲು ನಿರಾಕರಿಸಿದರು.
ಕೊರೋನಾ ಚಿಕಿತ್ಸೆಗೆ ದೇಶದಲ್ಲಿ 586 ಆಸ್ಪತ್ರೆ!
ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಬಿಟ್ಟುಕೊಳ್ಳದ ಹಿನ್ನೆಲೆಯಲ್ಲಿ ದಂಪತಿಗಳು, ಹಸುಗೂಸು ಹಾಗೂ ಜೊತೆಗೆ ಬಂದಿದ್ದ ನಾಲ್ವರು ವ್ಯಕ್ತಿಗಳ ಸ್ಯಾಂಪಲ್ ಸಂಗ್ರಹಿಸಲಾಯಿತು. ನಂತರ ಕತ್ತಿಗೆ ಗ್ರಾಮದ ದಂಪತಿ, ಹಸುಗೂಸನ್ನು ದಾವಣಗೆರೆ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‌ನ್ಲಿ ದಾಖಲಿಸಲಾಗಿದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನ ಬೈಯಪ್ಪನಹಳ್ಳಿ ದಂಪತಿಗಳು, ಹಸುಗೂಸನ್ನು ಗ್ರಾಮದೊಳಗೆ ಬಿಟ್ಟುಕೊಳ್ಳುತ್ತಿಲ್ಲವೆಂಬ ಮಾಹಿತಿ ಸಿಗುತ್ತಿದ್ದಂತೆಯೇ ಜಿಲ್ಲಾಡಳಿತವು ನೆರವಿನ ಹಸ್ತ ಚಾಚಿದೆ. ಮುಂಜಾಗ್ರತೆಯಾಗಿ ಹಸುಗೂಸು, ತಂದೆ, ತಾಯಿ, ಜೊತೆಗೆ ಬಂದಿದ್ದ ನಾಲ್ವರ ಸ್ಯಾಂಪಲ್ ಸಂಗ್ರಹಿಸಿ, ಪರೀಕ್ಷೆಗೆ ಕಳಿಸಿದೆ.
ದೇಶದ 200 ವೈದ್ಯ ಸಿಬ್ಬಂದಿಗೆ ಕೊರೋನಾ ಸೋಂಕು ದೃಢ!
ಅಲ್ಲದೇ, ಬೈಯಪ್ಪನಹಳ್ಳಿಯಿಂದ ಕತ್ತಿಗೆ ಗ್ರಾಮಕ್ಕೆ ಬಂದ ಹಸುಗೂಸನ್ನು ತಂದೆ, ತಾಯಿ ಸಮೇತ ದಾವಣಗೆರೆ ಜಿಲ್ಲಾ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ಗೆ ದಾಖಲಿಸಿ, ತೀವ್ರ ನಿಗಾ ವಹಿಸಲಾಗಿದೆ. ಕತ್ತಿಗೆ ಗ್ರಾಮಸ್ಥರೂ ಸಹ ಕೊರೋನಾ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ ತಮ್ಮ ಊರಿನವರೇ ಆಗಿದ್ದರೂ ಪರ ಊರಿನಿಂದ ಬಂದವರಿಗೆ ಒಳಗೆ ಬಿಟ್ಟುಕೊಳ್ಳಬಾರದೆಂದ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.