ಡ್ರಗ್‌ ಮುಕ್ತ ರಾಜ್ಯ ಮಾಡಲು ಪರಂ ಪಣ

ರಾಜ್ಯವನ್ನು ಡ್ರಗ್‌ ಮುಕ್ತವನ್ನಾಗಿ ಮಾಡಲು ಪಣ ತೊಟ್ಟಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ತುಮಕೂರು ಜಿಲ್ಲೆಯನ್ನು ಪೈಲೆಟ್‌ ಪ್ರಾಜೆಕ್ಟ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ.

Parameshwar Work to make a drug free state snr

  ತುಮಕೂರು : ರಾಜ್ಯವನ್ನು ಡ್ರಗ್‌ ಮುಕ್ತವನ್ನಾಗಿ ಮಾಡಲು ಪಣ ತೊಟ್ಟಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ತುಮಕೂರು ಜಿಲ್ಲೆಯನ್ನು ಪೈಲೆಟ್‌ ಪ್ರಾಜೆಕ್ಟ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ.

ತುಮಕೂರಿನಲ್ಲಿ ಪೊಲೀಸ್‌ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಮುಂದಿನ ಮೂರು ತಿಂಗಳೊಳಗೆ ಡ್ರಗ್‌್ಸ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಖಾಕಿ ಪಡೆಗೆ ಟಾಸ್‌್ಕ ನೀಡಿದರು. ಇನ್ಸ್‌ಪೆಕ್ಟರ್‌ನಿಂದ ಮೇಲಿನ ಹಂತದ ಅಧಿಕಾರಿಗಳು ತಿಂಗಳಿಗೊಮ್ಮೆ ಶಾಲಾ ಕಾಲೇಜು ಗಳಿಗೆ ಭೇಟಿ ಕೊಡಲು ಸೂಚಿಸಿದ್ದಾಗಿ ತಿಳಿಸಿದರು. ಜಿಲ್ಲೆಯಲ್ಲಿ ಆಗಿರುವ ಕ್ರೈಂಗಳು ಬಗ್ಗೆ, ಅಪರಾಧ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕಿದರು. ಸಭೆಯಲ್ಲಿ ಐಜಿಪಿ ರವಿಕಾಂತೇಗೌಡ,ಎಸ್ಪಿ ರಾಹುಲ… ಕುಮಾರ್‌ ಸೇರಿ ಪೊಲೀಸ್‌ ಅಧಿಕಾರಿಗಳು ಭಾಗಿಯಾಗಿದ್ದರು.

ಸಭೆ ಬಳಿಕ ಮಾತನಾಡಿದ ಅವರು ಜಿಲ್ಲೆಯ ಎಲ್ಲಾ ಪೊಲೀಸ್‌ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಯಾವ ರೀತಿಯಾಗಿ ಕೆಲಸ ಮಾಡುತ್ತಿದ್ದಾರೆ, ಜಿಲ್ಲೆಯಲ್ಲಿ ಇರುವಂತಹ ಸಮಸ್ಯೆಗಳು ಏನು, ಯಾವ ರೀತಿ ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಪರಿಶೀಲನೆ ಮಾಡಿದ್ದೇನೆ ಎಂದರು.

ರಾಜ್ಯದಲ್ಲಿ ಅನೇಕ ಜಿಲ್ಲೆಗಳಿಗೆ ಹೋಲಿಸಿದರೆ ತುಮಕೂರು ಜಿಲ್ಲೆ ಶಾಂತಿಯಿಂದ ಕೂಡಿದೆ. ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದಾಗ ತುಮಕೂರು ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಬಹಳ ಕಡಿಮೆ. ಜನ ಸ್ನೇಹಿ ಪೊಲೀಸ್‌ ಆಗಬೇಕು, ಪೊಲೀಸ್‌ ಠಾಣೆಗೆ ಬಂದ ಜನರಿಗೆ ಸ್ಪಂದಿಸಲು ಸೂಚಿಸಿದ್ದಾಗಿ ತಿಳಿಸಿದರು.

ಅಪರಾಧಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಖಡಕ್‌ ಆಗಿ ಇರಲು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ತಿಳಿಸಿದ ಅವರು ಅಪರಾಧಿಗಳ ವಿರುದ್ಧ ತಡಮಾಡದೇ ಕಾನೂನು ಕ್ರಮಕೈಗೊಳ್ಳಬೇಕು ಎಂದರು.

ಮಹಿಳಾ ಸಬಲೀಕರಣದ ಮಹತ್ವಾಕಾಂಕ್ಷಿ ಯೋಜನೆ

ತುಮಕೂರು(ಜೂ.12):  ಮಹಿಳಾ ಸಬಲೀಕರಣದ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಗೆ ಭಾನುವಾರ ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಚಾಲನೆ ನೀಡುವ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದ್ದು, ಈ ಮೂಲಕ ಕರ್ನಾಟಕದಲ್ಲಿ ‘ಐತಿಹಾಸಿಕ ಹೆಜ್ಜೆ’ಯನ್ನು ಇಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ತಿಳಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ತುಮಕೂರು ವಿಭಾಗದ ವತಿಯಿಂದ ಭಾನುವಾರ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಏರ್ಪಡಿಸಲಾಗಿದ್ದ ‘ಶಕ್ತಿ ಯೋಜನೆ’ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ 5 ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಘೋಷಣೆ ಮಾಡಿದ್ದು, ‘ಶಕ್ತಿ’ ಈ 5 ಯೋಜನೆಗಳಲ್ಲಿ ಪ್ರಮುಖ ಮಹಿಳಾ ವಿಶೇಷ ಯೋಜನೆಯಾಗಿದೆ ಎಂದರು.

Shakti Scheme: ಉಚಿತ ಪ್ರಯಾಣಿಸುವ ಮಹಿಳೆಯರಿಗೆ ಕಿರಿಕಿರಿ ಮಾಡಿದರೆ ಕಟ್ಟುನಿಟ್ಟಿನ ಕ್ರಮ

ಇಡೀ ರಾಜ್ಯದಲ್ಲಿ ಲಕ್ಷಾಂತರ ಸ್ತ್ರೀ ಶಕ್ತಿ ಸಂಘಗಳಿದ್ದು, ಸಮಾಜದ ಅಭಿವೃದ್ಧಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರು ಭಾಗವಹಿಸದೆ ಇದ್ದರೆ ವೇಗದ ಅಭಿವೃದ್ಧಿ ಸಾಧ್ಯವಿಲ್ಲ. ಮಹಿಳೆಯರು ಸಬಲರಾಗಬೇಕು, ಅವರು ಎಲ್ಲೆಡೆ ಸುಲಲಿತವಾಗಿ ಪ್ರಯಾಣಿಸಬೇಕೆಂಬ ದಿಸೆಯಲ್ಲಿ ನಮ್ಮ ಪಕ್ಷ ಚುನಾವಣೆಗೂ ಮುನ್ನಾ ಪ್ರಣಾಳಿಕೆಯಲ್ಲಿ ’ಶಕ್ತಿ ಯೋಜನೆ’ಗೆ ತೀರ್ಮಾನ ಮಾಡಿತ್ತು. ಸಂಪುಟದ ಮೊದಲನೇ ಸಭೆಯಲ್ಲಿಯೇ ಗ್ಯಾರಂಟಿ ಯೋಜನೆಗಳ ಕುರಿತು ತೀರ್ಮಾನಿಸಿ ಸಂಜೆ ವೇಳೆಗೆ ಆದೇಶ ಹೊರಡಿಸಲಾಯಿತು. ಒಂದು ವರ್ಷಕ್ಕೆ ಸರಿ ಸುಮಾರು 5 ಸಾವಿರ ಕೋಟಿ ರು. ಗಳು ಶಕ್ತಿ ಯೋಜನೆಗೆ ಬೇಕಾಗಬಹುದು ಎಂದು ಅಂದಾಜಿಸಲಾಗಿದ್ದು, ಇದನ್ನು ಹೊಂದಿಸುವ ಯೋಜನೆ ಸಹ ರೂಪಿಸಲಾಗಿದೆ ಎಂದರು.

ಮಹಿಳೆ ಸಬಲೆ ಮತ್ತು ಸಶಕ್ತಳಾದಲ್ಲಿ ಸಮಾಜದ ಸ್ವಾಸ್ಥ್ಯ ಸುಧಾರಣೆಯಾಗುತ್ತದೆ. ಪೈಟರ್‌ ಜೆಟ್‌ ಮತ್ತು ವಿಮಾನಗಳನ್ನು ಓಡಿಸುವ ಸಾಮರ್ಥ್ಯವನ್ನು ಮಹಿಳೆ ಇಂದು ಪಡೆದುಕೊಂಡಿದ್ದಾಳೆ, ಐಟಿ-ಬಿಟಿ ಸೇರಿದಂತೆ ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಇದ್ದಾರೆ, ಇದು ಸಮಾಜದ ಅಭಿವೃದ್ಧಿಗೆ ಪೂರಕ ಬೆಳವಣಿಗೆ. ಅಂದಾಜು ರು.82 ಕೋಟಿ ಮೊತ್ತದಲ್ಲಿ ಇಡೀ ರಾಜ್ಯಕ್ಕೆ ಮೊದಲನೆಯದು ಎನ್ನಬಹುದಾದ ಅತ್ಯಾಧುನಿಕ ಸ್ಮಾರ್ಚ್‌ ಸಿಟಿ ಬಸ್‌ ನಿಲ್ದಾಣದ ಕಾಮಗಾರಿಗೆ ಈ ಹಿಂದೆ ತಾವೇ ಅಡಿಗಲ್ಲು ಹಾಕಿದ್ದು, ಇನ್ನು ಎರಡು-ಮೂರು ತಿಂಗಳಲ್ಲಿ ಹೊಸ ಬಸ್‌ ನಿಲ್ದಾಣ ಉದ್ಘಾಟಣೆಗೆ ಸಿದ್ದವಾಗಲಿದೆ. 16 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ‘ತುಮಕೂರಿನ ಸ್ಮಾರ್ಚ್‌ ಸಿಟಿ ಬಸ್‌ ನಿಲ್ದಾಣ’ದಿಂದ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ ಎಂದರು.

Latest Videos
Follow Us:
Download App:
  • android
  • ios