Asianet Suvarna News Asianet Suvarna News

ಹಿಂದೂ ಧರ್ಮವೇ ಅಲ್ಲ, ಇದೊಂದು ಆನೈತಿಕ, ಅನಾಚಾರ: ಪಂಡಿತರಾಧ್ಯ ಶ್ರೀ

ಪಂಡಿತರಾಧ್ಯ ಶ್ರೀ ಹಿಂದು ಎಂಬುದು ಆನೈತಿಕ, ಅನಾಚಾರ ಒಳಗೊಂಡಿದೆ ಎಂದರೆ, ಪ್ರತಿಯಾಗಿ ವಚನಾನಂದ ಶ್ರೀ ಹಿಂದೂ ಮಹಾಸಾಗರದಲ್ಲಿ ನಾವು ನದಿಗಳು ಎಂದು ಹೇಳುವುದರ ಮೂಲಕ ಪಂಡಿತಾರಾಧ್ಯ ಶ್ರೀಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.

Panditaradhya Shivacharya Swamiji talks over hindu religion grg
Author
First Published Aug 9, 2024, 11:21 AM IST | Last Updated Aug 9, 2024, 11:41 AM IST

ಹೊಳಲ್ಕೆರೆ(ಆ.09): ಲಿಂಗಾಯಿತ ಎಂದರೆ ಹಿಂದೂ ಧರ್ಮದ ಭಾಗವಲ್ಲ ಎಂದು ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿ ಹೇಳಿದರು. ಹೊಳಲ್ಕೆರೆ ಒಂಟಿಕಂಬದ ಮಠದಲ್ಲಿ ಆಯೋಜಿಸಲಾದ ಲಿಂ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿ ಸ್ಮರಣೋತ್ಸವ ಹಾಗೂ ಚಿನ್ಮೂಲಾದ್ರಿ ಚಿತ್ತಳೆ ಸ್ಮರಣೋತ್ಸವ ಸಂಪುಟ ಬಿಡುಗಡೆ ಮಾತನಾಡಿದ ಅವರು ಬಸವಣ್ಣನೆಂದರೆ ಜಗತ್ತು. ಇಡೀ ವಿಶ್ವಕ್ಕೆ ಗುರು ವಾದವರು. ಹೊಸ ಧರ್ಮದ ಹುಟ್ಟಿಗೆ ಕಾರಣರಾದವರು. ಅವರಿಗೂ ಮೊದಲು ದಯಾಹೀನವಾದ ಧರ್ಮವಿತ್ತು. ಮೊದಲು ಪುರಾಣ. ಶಾಸ್ತ್ರ ವೇದಗಳ ಬಗ್ಗೆ ಪ್ರಚಾರ ನಡೆದಿತ್ತು. ನಮ್ಮದು ಸ್ವತಂತ್ರ ಲಿಂಗಾಯತ ಧರ್ಮ ಎಂದರು. 

ಸಿರಿಗೆರೆ ಮಠಕ್ಕೂ ಮುರುಘಾಮಠಕ್ಕೂ ಹಾವು ಮುಂಗಸಿಯಂತಿತ್ತು. ಆದರೆ, ಮಲ್ಲಿಕಾರ್ಜುನ ಶ್ರೀಗಳು ಅದನ್ನು ತಿಳಿಗೊಳಿಸಿದರು. ಬೆಂಗಳೂರು ಬೇಲಿಮಠದ ಶ್ರೀಶಿವರುದ್ರ ಮಹಾಸ್ವಾಮಿ, ಜಯವಿಭವ ಶ್ರೀಗಳು ಅನಾ ರೋಗ್ಯದಿಂದ ಬಳಲುತ್ತಿರುವಾಗ ಮುಂದಿನ ಉತ್ತರಾಧಿಕಾರಿ ಆಯ್ಕೆಗೆ ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರಿಗೆ ಜವಾಬ್ದಾರಿ ಕೊಟ್ಟರು ಆದರೆ, ಶ್ರೀಗಳು ಮೃತ್ಯುಂಜಯಪ್ಪಗಳಿಗೆ ಅಧಿ ಕಾರ ಕೊಟ್ಟಾಗ ಹಾವೇರಿಯ ಮಲ್ಲಿಕಾರ್ಜುನ ಸ್ವಾಮಿಗಳನ್ನು ಉತ್ತರಾಧಿಕಾರಿಗಳನ್ನಾಗಿ ಆಯ್ಕೆ ಮಾಡಿದರು. ಮಲ್ಲಿಕಾರ್ಜುನ ಸ್ವಾಮಿಗಳು ಅಂದಿನಿಂದ ನಿರಂತರ ಶ್ರೀಮಠದ ಅಭಿವೃದ್ಧಿಗೆ ತೊಡಗಿಸಿಕೊಂಡರು ಎಂದು ಸ್ಮರಿಸಿದರು.

ಮುತ್ತೈದೆಯರು ಕುಂಕುಮ ಇಡುವಂತಿಲ್ಲ, ಕಾಲ್ಗೆಜ್ಜೆಯೂ ತೊಡುವಂತಿಲ್ಲ; ಅಲಂಕಾರಕ್ಕೆ ಹೆದರ್ತಾರೆ ಇಲ್ಲಿಯ ಮಹಿಳೆಯರು

ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮಿ ಮಾತನಾಡಿ, ಆರ್ಥಿಕವಾಗಿ ಸಂಕಷ್ಟದಲ್ಲಿದ್ದಶ್ರೀಮಠ ವನ್ನು ಸದೃಢಮಾಡಿದರು. ಅನಾವಶ್ಯಕವಾಗಿಹಣ ವ್ಯರ್ಥ ಮಾಡುತ್ತಿರಲಿಲ್ಲ ಎಂದರು.

ಇಳಕಲ್‌ನ ಶ್ರೀಗುರುಮಹಾಂತಸ್ವಾಮಿ ಮಾತನಾಡಿ, ದಾರ್ಶನಿಕರದು ನಿಸ್ವಾರ್ಥ ಸೇವೆ. ಸಕಲ ಜೀವರಾತಿಗಳ ಮೇಲೆ ಅಂತಃಕರಣ ಇರಬೇಕು. ಹಾಗಾಗಿ, ಮಲ್ಲಿಕಾರ್ಜುನಗಳಲ್ಲಿ ದಾರ್ಶನಿಕತೆ ಇತ್ತು. ಅವರು ದೊಡ್ಡ ಪಂಡಿತರು, ಅವರ ದಾರ್ಶನಿಕತೆಯ ಅನಾವರಣ ಈ ಪುಸ್ತಕದಲ್ಲಿದೆ ಎಂದರು.

ವಚನಾನಂದ ಸ್ವಾಮಿ ಮಾತನಾಡಿ, ಹಿಂದೂ ಎನ್ನುವುದು ಮಹಾಸಾಗರ. ಅಲ್ಲಿ ಲಿಂಗಾಯತ, ವೈದಿಕ, ಬೌದ್ಧ, ಜೈನರು ಇದ್ದರು. ವೀರಶೈವತತ್ವ ಲಿಂಗಾಯತ ತತ್ವ ಬೇರೆ ಬೇರೆ ಇರಬಹುದು. ಇವರು ಒಂದಾದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮಿಗಳು, ಮುರುಘರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ, ಧಾರವಾಡ ಮುರು ಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು, ಹೆಬ್ಬಾಳುಶ್ರೀ ರುದ್ರೇಶ್ವರಸ್ವಾಮಿಗಳು, ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಸಂಶೋಧಕಲಕ್ಷ್ಮಣತೆಲಗಾವಿ, ಜಗದ್ಗುರು ಮುರುಘರಾಜೇಂದ್ರ ಬೃಹನ್ಮಡ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮಿಗಳು, ಮೋಕ್ಷಪತಿ ಸ್ವಾಮಿಗಳು, ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು, ಎಸ್.ಎನ್.ಚಂದ್ರಶೇಖರ್, ಡಾ. ಬಸವಜಯಚಂದ್ರ ಸ್ವಾಮಿಗಳು, ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ಬಸವ ಶಾಂತಲಿಂಗ ಸ್ವಾಮಿಗಳು, ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಬಸವ ರಮಾನಂದ ಸ್ವಾಮಿಗಳು, ಶಿವಬಸವಸ್ವಾಮಿಗಳುಬೇಲೂರು, ಡಾ.ಕೆ.ಎಲ್. ರಾಜಶೇಖರ್ ಮಾಜಿಶಾಸಕರಾದಎ.ವಿ.ಉಮಾ ಪತಿ,ಪಿ.ರಮೇಶ್ ಮುಖಂಡಎಚ್.ಆನಂದಪ್ಪ, ಡಿ.ಎಸ್. ಸುರೇಶ್‌ ಬಾಬು, ಬಿ.ಎಸ್. ರುದ್ರಪ್ಪ, ಆರ್.ಎ. ಅಶೋಕ, ಕೆ.ಸಿ. ರಮೇಶ್, ವಿಜಯ ಸಿಂಹ, ಎಂ.ಕೆ.ತಾಜಪೀರ್, ಲಕ್ಷ್ಮಿ ಮುದ್ರಣಾ ಲಯದ ಅಶೋಕ್ ಕುಮಾರ್ ಇದ್ದರು.

ಲಿಂಗಾಯಿತ ಧರ್ಮ ಉಭಯ ಶ್ರೀಗಳ ನಡುವೆ ಭಿನ್ನಾಭಿಪ್ರಾಯ

ಚಿತ್ರದುರ್ಗ:  ಲಿಂಗಾಯಿತ ಧರ್ಮದ ವಿಷಯಕ್ಕೆ ಸಂಬಂಧಿಸಿದಂತೆ ಸಾಣೆಹಳ್ಳಿ ಪೀಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಹರಿಹರ ಪಂಚಮಸಾಲಿ ಮಠದ ವಚನಾನಂದ ಶ್ರೀಗಳ ನಡುವೆ ಭಿನ್ನಾಭಿಪ್ರಾಯದ ಹೇಳಿಕೆಗಳು ವ್ಯಕ್ತವಾಗಿವೆ.

ಹೊಳಲ್ಕೆರೆ ಒಂಟಿ ಕಂಬದ ಮಠದಲ್ಲಿ ನಡೆದ ಲಿಂ.ಮಲ್ಲಿಕಾರ್ಜುನ ಶ್ರೀಗಳ ಸ್ಮರಣೋತ್ಸವದಲ್ಲಿ ಪಾಲ್ಗೊಂಡು ಮಾತ ನಾಡಿದ ಪಂಡಿತರಾಧ್ಯ ಶ್ರೀ ಹಿಂದು ಎಂಬುದು ಆನೈತಿಕ, ಅನಾಚಾರ ಒಳಗೊಂಡಿದೆ ಎಂದರೆ, ಪ್ರತಿಯಾಗಿ ವಚನಾ ನಂದ ಶ್ರೀ ಹಿಂದೂ ಮಹಾಸಾಗರದಲ್ಲಿ ನಾವು ನದಿಗಳು ಎಂದು ಹೇಳುವುದರ ಮೂಲಕ ಪಂಡಿತಾರಾಧ್ಯ ಶ್ರೀಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದ ಪಂಡಿತಾರಾಧ್ಯ ಶ್ರೀ ಬಸವಣ್ಣನವರು ದಯವೇ ಧರ್ಮದ ಮೂಲ ಎಂದರು.

ಶರಣರು ವೇದ ಪುರಾಣಗಳನ್ನು ತಿರಸ್ಕಾರ ಮಾಡಿದ್ದರು. ಅಹಿಂಸಾ ಜೀವನ ನಡೆಸಬೇಕೆಂದು ಬಸವಣ್ಣ ಹೇಳಿದರು. ಹಿಂದೂ ಒಂದರ್ಥದಲ್ಲಿ ಧರ್ಮವೇ ಅಲ್ಲ. ಸಿಂಧೂ ನದಿಯ ಬಯಲಲ್ಲಿರುವವರು ಹಿಂದೂ, ನಮ್ಮದು ಸ್ವತಂತ್ರ ಲಿಂಗಾಯತ ಧರ್ಮ ಎಂದರು.

ಹಿಂದು ಧರ್ಮ ಪ್ರಚಾರ, ರಕ್ಷಣೆಗೆ ಶ್ರಮಿಸಿದ ಶಂಕರರು: ನಿತ್ಯಸ್ಥಾನಂದ ಸ್ವಾಮೀಜಿ

ಮಲ್ಲಿಕಾರ್ಜುನ ಶ್ರೀ ಬಸವತತ್ವ ನಿಷ್ಟರಾಗಿದ್ದರು. ಸ್ವಾಮಿಗಳೇ ನಿಷ್ಠೆ ಬಿಟ್ಟಿದ್ದಾರೆ. ಭಕ್ತರಲ್ಲ ಸ್ವಾಮಿಗಳು ಮೊದಲು ಬದಲಾಗಬೇಕಿದೆ. ಗುರುವಿಗಂಜಿ ಭಕ್ತ, ಭಕ್ತರಿಗಂಜಿ ಗುರು ಇರಬೇಕು. ಮಠಾಧೀಶರ ಮೇಲೆ ಹೊಣೆಗಾರಿಕೆ ಇದೆ. ಆಪಾದನೆಗಳೂ ಇವೆ. ಶ್ರೀಗಳು ಹಾಗೂ ಭಕ್ತರು ತಪ್ಪು ಮಾಡಿದಾಗ ತಪ್ಪೆಂದು ಹೇಳಬೇಕು ಎಂದರು. ಈಗಿನ ದಿನಗಳಲ್ಲಿ

ನಂತರ ಮಾತನಾಡಿದ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀ, ಹಿಂದೂ ಎಂಬುದು ಸತ್ಯ ಸನಾತನವಾಗಿದೆ. ಹಿಂದೂ ಎಂಬ ಮಹಾಸಾಗರದಲ್ಲಿನದಿಗಳು ನಾವು ಜೈನ, ಬೌದ್ಧ,ಲಿಂಗಾಯತ ಎಲ್ಲವೂಹಿಂದೂ ಧರ್ಮದ ಭಾಗ. ಹಿಂದೂ ಅಲ್ಲ ಎಂಬುವರು ಹಿಂದೂ ಲಿಂಗಾಯತ ಎಂಬ ಮೀಸಲಾತಿ ಪಡೆಯು ವುದು ಏಕೆ ? ಎಂದು ಪ್ರಶ್ನಿಸಿದರು.

Latest Videos
Follow Us:
Download App:
  • android
  • ios