ಸಿದ್ದರಾಮಯ್ಯ ಚುನಾವಣೆಯಲ್ಲಿ ಸ್ಪರ್ಧಿಸಲು ಪಾಕಿಸ್ತಾನ ಸೇಫ್ ಜಾಗ: ಸಿ.ಟಿ ರವಿ ವ್ಯಂಗ್ಯ
ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿದ್ದರಾಮುಲ್ಲಾ ಖಾನ್ ಎಂದು ಕರೆಯುವ ಮೂಲಕ ಸಿ.ಟಿ ರವಿ ಕಾಂಗ್ರೆಸ್ಸಿಗರ ಕೋಪಕ್ಕೆ ಗುರಿಯಾಗಿದ್ರು. ಇದೀಗ ಸಿದ್ದರಾಮಯ್ಯ ವಿರುದ್ದ ಮತ್ತೊಂದು ಹೇಳಿಕೆ ನೀಡುವ ಮೂಲಕ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.
ವರದಿ: ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್
ಹಾವೇರಿ (ಜ.23): ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿದ್ದರಾಮುಲ್ಲಾ ಖಾನ್ ಎಂದು ಕರೆಯುವ ಮೂಲಕ ಸಿ.ಟಿ ರವಿ ಕಾಂಗ್ರೆಸ್ಸಿಗರ ಕೋಪಕ್ಕೆ ಗುರಿಯಾಗಿದ್ರು. ಇದೀಗ ಸಿದ್ದರಾಮಯ್ಯ ವಿರುದ್ದ ಮತ್ತೊಂದು ಹೇಳಿಕೆ ನೀಡುವ ಮೂಲಕ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ. ಇಂದು ರಾಣೆಬೆನ್ನೂರು ಬಿಜೆಪಿ ಟಿಕೇಟ್ ಆಕಾಂಕ್ಷಿ , ವಂದೇ ಮಾತರಂ ಸೇವಾ ಸಂಸ್ಥೆ ಮುಖ್ಯಸ್ಥ ಪ್ರಕಾಶ್ ಬುರುಡಿಕಟ್ಟಿ ಆಹ್ವಾನದ ಮೇರೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ರಾಣೆಬೆನ್ನೂರಿಗೆ ಆಗಮಿಸಿದ್ರು. ಈ ವೇಳೆ ಸಿ.ಟಿ ರವಿ ಕಾಂಗ್ರೆಸ್ ವಿರುದ್ದ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ದಿಸುತ್ತಿರುವ ಬಗ್ಗೆ ಮಾತನಾಡಿದ ಸಿ.ಟಿ ರವಿ, ಸಿದ್ದರಾಮಯ್ಯ ಅವರಿಗೆ ಚುನಾವಣೆಗೆ ಸ್ಪರ್ದಿಸಲು ಕೋಲಾರಕ್ಕಿಂತ ಪಾಕಿಸ್ತಾನ ಸೇಫ್ ಜಾಗ. ಯಾಕಂದ್ರೆ ಪಾಕಿಸ್ತಾನದಲ್ಲಿ ಅವರಿಗೆ ಯಾರ ಕಾಟವೂ ಇರಲ್ಲ. ಪಾಕಿಸ್ತಾನದಲ್ಲಿ ಪ್ರಧಾನಿ ಮೋದಿಯವರು ಇಲ್ಲ. ಯಡಿಯೂರಪ್ಪನವರೂ ಇಲ್ಲ. ಬೊಮ್ಮಾಯಿಯವರೂ ಕೂಡಾ ಇಲ್ಲ. ಪಾಕಿಸ್ತಾನದಲ್ಲಿ ಕಾಟ ಕೊಡಲು ಡಿಕೆ ಶಿವಕುಮಾರ್ ಕೂಡಾ ಇರಲ್ಲ. ಖರ್ಗೆ ಕೂಡಾ ಇರಲ್ಲ. ಅವರ ಮನಸ್ಥಿತಿಗೆ ಸೇಫ್ ಆಗಿರೋದು ಪಾಕಿಸ್ತಾನ ಮಾತ್ರ ಎಂದು ವ್ಯಂಗ್ಯ ವಾಡಿದರು.
ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ವಿರುದ್ದವೂ ಕಿಡಿ ಕಾರಿದ ಸಿ.ಟಿ ರವಿ,ಪ್ರಜಾಧ್ವನಿ ಎಂದರೆ ಜನ ಮಾತನಾಡೋದು.ನಾವೂ ಚಿಕ್ಕಮಗಳೂರು ಉತ್ಸವ ಮಾಡಿದೆವು, ಯಾರಿಗೂ ಗಾಡಿ ವ್ಯವಸ್ಥೆ ಮಾಡಲಿಲ್ಲ. ಸ್ವಯಂ ಪ್ರೇರಿತರಾಗಿ ಜನ ಉತ್ಸವಕ್ಕೆ ಬಂದಿದ್ದರು.ಇದು ಜನರ ತಾಕತ್ತು, ರಾತ್ರಿವರೆಗೂ ಜನ ಕಾರ್ಯಕ್ರಮ ನೋಡಿದರು.
ಆರೇಳು ಸಾವಿರ ಜನ ಸೇರಿಸಿದರೆ ಪ್ರಜಾಧ್ವನಿ ಹೇಗಾಗುತ್ತೆ? ಎಂದು ಪ್ರಶ್ನಿಸಿದರು. ಇದು ಪ್ರಜಾಧ್ವನಿ ಅಲ್ಲ, ಕಾಂಗ್ರೆಸ್ ಧ್ವನಿ ಮಾತ್ರ. ಕಾಂಗ್ರೆಸ್ ನವರು ನಮ್ಮನ್ನು ಬೈಯೋಕೆ ಇರೋದು. ನಿಂದಕರಿರಬೇಕು ಡ್ಯಾಶ್ ಡ್ಯಾಶ್ ಎಂದು ಸಂತರ ಮಾತು ಉದಾಗರಣೆಯಾಗಿ ನೀಡಿ ಪರೋಕ್ಷವಾಗಿ ಕಾಂಗ್ರೆಸ್ ನವರನ್ನು ಹಂದಿಗಳಿಗೆ ಹೋಲಿಸಿದರು. ಪ್ರಜೆಗಳು ನಮ್ಮ ಜೊತೆ ಇರೋದಕ್ಕೆ ಕಾಂಗ್ರೆಸ್ ನವರಿಗೆ ಭಯ ಇದೆ. ಪ್ರಜೆಗಳನ್ನು ಲೂಟಿ ಮಾಡಿದ ಕಾಂಗ್ರೆಸ್ ನವರು ನಮ್ಮ ಜೊತೆ ಮಾತಾಡ್ತಾರೆ. ಹೀಗಾಗಿ ಅವರದು ಸೌಂಡು, ನಮ್ಮದು ಗ್ರೌಂಡು.ಕಾಂಗ್ರೆಸ್ ನವರು ಯಾವಾಗಲೂ ಸೌಂಡ್ ಮಾಡ್ತಾರೆ. ಮೋದಿಯವರು ಅವಪ್ಪನಾಣೆ ಪ್ರಧಾನಿ ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ರುಮೋದಿ ಎರಡು ಬಾರಿ ಗೆಲ್ಲಲಿಲ್ಲವಾ? ಈಗ ಅಪ್ಪನ ಬಗ್ಗೆ ನಾನು ಏನು ಹೇಳಲಿ ಎಂದು ಸಿದ್ದರಾಮಯ್ಯನವರ ಅಪ್ಪನ ಮೇಲಾಣೆ ಎಂಬ ಹೇಳಿಕೆಗೆ ತಿರುಗೇಟು ಕೊಟ್ಟರು.
ಕಾಂಗ್ರೆಸ್ ನವರೇ ಬಿಜೆಪಿ ಸೇರಲು ರೆಡಿ ಇದಾರೆ, ನಾವು ಸೆಲೆಕ್ಟ್ ಮಾಡಿ ಕರ್ಕೋತೀವಿ:
ಬಿಜೆಪಿ ಹಾಲಿ ಶಾಸಕರೇ ಕಾಂಗ್ರೆಸ್ ಸೇರಲು ರೆಡಿ ಇದಾರೆ ಎಂಬ ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಕಾಂಗ್ರೆಸ್ ನವರೂ ತುದಿಗಾಲ ಮೇಲೆ ನಿಂತಿದ್ದಾರೆ. ನಾವು ಸೆಲೆಕ್ಟ್ ಮಾಡಿ ತಗೋತಿವಿ. ಕಾಂಗ್ರೆಸ್ ಮುಳುಗ್ತಿರೋ ಹಡಗು. ಗುಜರಾತ್ ನಲ್ಲಿ 77 ಸ್ಥಾನಗಳಲ್ಲಿ ಕಾಂಗ್ರೆಸ್ ಏನು ಸಾಧನೆ ಮಾಡಿದೆ. ಉತ್ತರ ಪ್ರದೇಶದಲ್ಲಿ 2 ಸ್ಥಾನ ಗೆದ್ದಿದೆ. ಕಾಂಗ್ರೆಸ್ ನಲ್ಲಿ ಮುಂದಿನ ದಿನಗಳಲ್ಲಿ ಮಹಾಭಾರತ ಶುರುವಾಗುತ್ತೆ ನೋಡ್ತಾ ಇರಿ ಎಂದು ವಾಗ್ದಾಳಿ ನಡೆಸಿದರು. ಹಿಂದೆ ಜೆಡಿಎಸ್ - ಕಾಂಗ್ರೆಸ್ ಸರ್ಕಾರ ಇತ್ತುಯಾರು ಅಧಿಕಾರಕ್ಕಾಗಿ ಬಿಜೆಪಿಗೆ ಬಂದು ಸೇರಿಕೊಂಡರುಮೋದಿಯವರ ಆಡಳಿತ ನೋಡಿ ಕರ್ನಾಟಕದಲ್ಲಿಯೂ ಬಿಜೆಪಿ ಗೆಲ್ಲುತ್ತೆ ಅನ್ನೋದು ಗೊತ್ತಿದೆ. ಮುಳುಗೋ ಹಡಗಲ್ಲಿ ಯಾರು ಇರ್ತಾರೆ? ಎಂದರು.
ಗೃಹ ಇಲಾಖೆ ಕಡ್ಲೆ ಮಿಠಾಯಿ ತಿನ್ನುತ್ತಿತ್ತಾ: ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್ ಆಕ್ರೋಶ
ನೆಂಟರಿಗೆ ಕೋಳಿ ಸಾರು, ಚೆನ್ನರಾಯ ಪಟ್ಟಣ ಮಟನ್ ಸಾರು ಬೇಕಾದರೆ ಹಾಕಿಸ್ತೀವಿ:
ಚಿಕ್ಕಮಗಳೂರಿನ ಸಂಬಂಧಿಕ ಸಿ.ಟಿ ರವಿ ಎಂಬ ಡಿಕೆಶಿ ಹೇಳಿಕೆಗೆ ಸಿ.ಟಿ ರವಿ ವ್ಯಂಗ್ಯವಾಡಿದ ಸಿ.ಟಿ ರವಿ, ನಮ್ಮದು ತತ್ವದ ರಾಜಕಾರಣ, ಹಿಂದುತ್ವದ ರಾಜಕಾರಣ.ನಾವು ಜಾತಿ ರಾಜಕಾರಣ ಮಾಡಿಲ್ಲ. ಚುನಾವಣೆ ಹಿಂದೂಗಳು ನಾವಲ್ಲ.ಇದಕ್ಕಾಗಿ ತರಹೇವಾರಿ ವೇಷ ನಾವು ಹಾಕಲ್ಲ.ಅಭಿವೃದ್ಧಿ ಕೆಲಸಕ್ಕೆ ಬಂದಾಗ, ಕಷ್ಟ ಅಂತ ಬಂದಾಗ ಯಾವ ಜಾತಿನೂ ನಾವು ನೋಡಿಲ್ಲ.ಅದಕ್ಕಾಗಿ 4 ಬಾರಿ ಜನ ನನ್ನನ್ನು ಗೆಲ್ಲಿಸಿದ್ದಾರೆ.ನೆಂಟರು ಅಂದರೆ ಊಟ ಹಾಕ್ತೀವಿ, ಕೋಳಿ ಸಾರು, ಚೆನ್ನರಾಯ ಪಟ್ಟಣ ಮಟನ್ ಸಾರು, ಇದನ್ನು ತಿನ್ನಲ್ಲ ಅಂದರೆ ಪುಲ್ಚಾರು ಹಾಕ್ತೀವಿ. ಹೀಗಾಗಿ ನಾವು ನೆಂಟರನ್ನು ಚೆನ್ನಾಗಿ ನೋಡಿಕೊಳ್ತೀವಿ. ಆದರೆ ಓಟ್ ಗಳನ್ನು ಮಾತ್ರ ಬಿಲ್ಕುಲ್ ಗೆಲ್ಲೋಕೆ ಆಗಲ್ಲ. ಚಿಕ್ಕಮಗಳೂರು ಜನ ಕಾಂಗ್ರೆಸ್ ಗೆ ಓಟ್ ಹಾಕಲ್ಲ ಎಂದು ಹೇಳಿದರು.
BENGALURU: ಸಿಲಿಕಾನ್ ಸಿಟಿಯ 300 ಕಡೆ ಕಾಂಗ್ರೆಸ್ ಪ್ರತಿಭಟನೆ: ಭ್ರಷ್ಟಾಚಾರದ ವಿರುದ್ಧ ಮೌನ ಧರಣಿ
ಮಾಜಿ ಸಚಿವ ಆರ್ ಶಂಕರ್ ಕಾಂಗ್ರೆಸ್ ಸೇರಿದರೆ ಡೆಪಾಸಿಟ್ ಕೂಡಾ ಹೋಗುತ್ತೆ:
ಇನ್ನು ಮಾಜಿ ಸಚಿವ ಆರ್ ಶಂಕರ್ ಕಾಂಗ್ರೆಸ್ ಸೇರುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಟಿ ರವಿ, ಶಂಕರ್ ಅನರ್ಹ ಆದಾಗ ಎಂಎಲ್ ಸಿ ಮಾಡಿದ್ದೇವೆ.ಅವರಿಗೆ ಮಂತ್ರಿ ಆಗಬೇಕು ಅಂತ ಆಸೆ ಇತ್ತು. ತಾಳ್ಮೆಯಿಂದ ಇದ್ದು ಬಿಜೆಪಿಯಲ್ಲಿ ಉಳಿದುಕೊಂಡು ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದರೆ ಬಡ್ಡಿ ಸಮೇತ ಬರುತ್ತೆ, ಬಿಟ್ಟು ಹೋದರೆ ಡೆಪಾಸಿಟ್ ಕೂಡಾ ಹೋಗುತ್ತೆ ಎಂದರು.