ಶಿವಮೊಗ್ಗ ಮೆಗ್ಗಾನ್ ಕೊರೋನಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಅವಘಡ

* ಕೋವಿಡ್ ಅಸ್ಪತ್ರೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಕ್ಸಿಜನ್ ಅವಘಡ
* ಕೋವಿಡ್ ಆಸ್ಪತ್ರೆ ಯಲ್ಲಿ ಆಕ್ಸಿಜನ್ ಸಪ್ಲೈ ಪೈಪ್ ಲೈನ್ ಬಸ್ಟ್
* ಆಕ್ಸಿಜನ್ ಪೈಪ್ ಲೈನ್ ಬಸ್ಟ್ ಆಗಿ ಪ್ರಾಣವಾಯು ಲೀಕ್
* ಅಗ್ನಿಶಾಮಕದಳದ ಸಿಬ್ಬಂದಿಯಿಂದ ಪರಿಹಾರ  ಕಾರ್ಯ

Oxygen leak in Shivamogga McGann hospital mah

ಶಿವಮೊಗ್ಗ (ಜೂ.  07) ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಅವಘಡವಾಗಿದೆ. ಕೋವಿಡ್ ಅಸ್ಪತ್ರೆ ಯಲ್ಲಿ ಆಕ್ಸಿಜನ್ ಸಪ್ಲೈ ಪೈಪ್ ಲೈನ್ ಬಸ್ಟ್ ಆಗಿದೆ. ಆಕ್ಸಿಜನ್ ಪೈಪ್ ಲೈನ್ ಬಸ್ಟ್ ಆಗಿ ಪ್ರಾಣವಾಯು ಹೊಗೆಯ ರೂಪದಲ್ಲಿ ಹೊರಗೆ ಬಂದಿದೆ.

6 KLD ಆಕ್ಸಿಜನ್ ಸ್ಟೋರೇಜ್ ಟ್ಯಾಂಕ್ ನಿಂದ ಪೈಪ್ ಲೈನ್ ಮೂಲಕ ಅಸ್ಪತ್ರೆಯ ಕೋರೊನಾ ರೋಗಿಗಳಿಗೆ ಅಕ್ಸಿಜನ್ ಸಪ್ಲೈ ಆಗುತ್ತಿತ್ತು. ಆಕ್ಸಿಜನ್ ಪೈಪ್ ಲೀಕ್ ಆಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದೆ.

ಪ್ರತಿ ತಾಲೂಕಿನಲ್ಲಿ ಆಕ್ಸಿಜನ್ ಘಟಕ

ವಾಲ್ ಬಂದ್ ಮಾಡಿ ಆಕ್ಸಿಜನ್ ಸಪ್ಲೈ ನಿಲ್ಲಿಸಲಾಗಿದೆ. ಸುಮಾರು 200 ಹಾಸಿಗೆಯ ಕೊರೊನಾ ವಾರ್ಡ್ ಗೆ ಈ ಪೈಪ್ ಲೈನ್ ಮೂಲಕ ಆಕ್ಸಿಜನ್ ಸಪ್ಲೈ ಆಗುತ್ತಿತ್ತು. ತಕ್ಷಣವೇ ಬದಲಿ ಆಕ್ಸಿಜನ್ ಪೈಪ್ ಲೈನ್ ಮೂಲಕ ರೋಗಿಗಳಿಗೆ  ಪ್ರಾಣವಾಯು ಪೂರೈಕೆ ಮಾಡಲಾಗುತ್ತಿದೆ. 

ಕೊರೋನಾ ಸಂದರ್ಭದಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳು ಸಿದ್ಧತೆ ಮಾಡಿಕೊಂಡಿದ್ದವು.  ಎಷ್ಟು ಸಾಧ್ಯವೋ ಅಷ್ಟು ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಿಕೊಂಡಿದ್ದು  ಕೊರತೆಯಾಗದಂತೆ ನೋಡಿಕೊಂಡು ಬಂದಿವೆ. 

 

 

Latest Videos
Follow Us:
Download App:
  • android
  • ios