Chikkaballapura : ಲಾರಿ ಅಪಹರಣ : ಮಾಲೀಕ, ಚಾಲಕನಿಂದಲೇ ಕೃತ್ಯ

  • ಲಾರಿಯಲ್ಲಿದ್ದ ಬರೋಬ್ಬರಿ 12 ಲಕ್ಷ ರು.ಗಳ ಮೌಲ್ಯದ 1,216 ಅಕ್ಕಿ ಮೂಟೆಗಳನ್ನು ಕದಿಯಲು ಲಾರಿ ಚಾಲಕ ಹಾಗೂ ಮಾಲೀಕನೇ ಯೋಜನೆ 
  • ಲಾರಿ ಕಳುವು ಮಾಡಿದ್ದಾರೆಂದು ಪೊಲೀಸರಿಗೆ ಸುಳ್ಳು ದೂರು ನೀಡಿ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ಠಾಣೆ ವ್ಯಾಪ್ತಿಯಲ್ಲಿ
Owner Theft his own lorry in Bagepalli after arrested snr

ಬಾಗೇಪಲ್ಲಿ (ಅ.09):  ಲಾರಿಯಲ್ಲಿದ್ದ (Lorry) ಬರೋಬ್ಬರಿ 12 ಲಕ್ಷ ರು.ಗಳ ಮೌಲ್ಯದ 1,216 ಅಕ್ಕಿ ಮೂಟೆಗಳನ್ನು ಕದಿಯಲು ಲಾರಿ ಚಾಲಕ ಹಾಗೂ ಮಾಲೀಕನೇ ಯೋಜನೆ ರೂಪಿಸಿ ಅಕ್ಕಿ ಮೂಟೆ ತುಂಬಿದ್ದ ಲಾರಿಯನ್ನು ನಿಲ್ಲಿಸಿದ್ದ ವೇಳೆ ರಾತ್ರಿ ಚಾಲಕನನ್ನು ಥಳಿಸಿ ಯಾರೋ ಕಳ್ಳರು ಅಕ್ಕಿ ಮೂಟೆಗಳ ಸಮೇತ ಲಾರಿ ಕಳುವು ಮಾಡಿದ್ದಾರೆಂದು ಪೊಲೀಸರಿಗೆ (Police) ಸುಳ್ಳು ದೂರು ನೀಡಿ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಂಧಿತ ಆರೋಪಿಗಳನ್ನು ಲಾರಿ ಮಾಲೀಕ ಆಂಧ್ರದ (Andhra pradesh) ಕರ್ನೂಲು ಜಿಲ್ಲೆಯ ಉಬ್ಬ ಗಿಡ್ಡಯ್ಯ ಹಾಗೂ ಲಾರಿ ಚಾಲಕ ಗುಡಿಬಂಡೆ ತಾಲೂಕಿನ ಜಂಬಿಗೆಮರದಹಳ್ಳಿಯ ಪ್ರದೀಪ್‌ ಎಂದು ಗುರುತಿಸಲಾಗಿದೆ.

ಬಾಡಿಗೆ ಮನೆ ನೋಡುವ ನೆಪ ಹೇಳಿ ಕದಿಯುತ್ತಿದ್ದ ಪ್ರೇಮಿಗಳು..!

ಏನಿದು ಪ್ರಕರಣ:  ಲಾರಿ ಮಾಲೀಕ ಉಬ್ಬ ಗಿಡ್ಡಯ್ಯಗೆ ಸೇರಿದ ಲಾರಿಯಲ್ಲಿ ಚಾಲಕನಾಗಿದ್ದ ಪ್ರದೀಪ್‌ ರಾಯಚೂರಿನಿಂದ ಸೆಪ್ಟೆಂಬರ್‌ 26ರಂದು 1,216 ಮೂಟೆ ಅಕ್ಕಿಯನ್ನು ತುಂಬಿಸಿಕೊಂಡು ಬೆಂಗಳೂರಿನ (Bengaluru) ಯಶವಂತಪುರದ ಎಪಿಎಂಸಿ (APMC) ಯಾರ್ಡ್‌ಗೆ ತಲುಪಿಸಲು ಬಾಗೇಪಲ್ಲಿಯ ಪರಗೋಡೆ ಮೂಲಕ ಬರುವಾಗ ರಾತ್ರಿ 11.30 ಸಮಯವಾಗಿತ್ತು. ಗ್ರಾಮದ ಬಳಿ ಲಾರಿಯನ್ನು ನಿಲ್ಲಿಸಿ ವಿಶ್ರಾಂತಿ ಪಡೆಯುವಾಗ ದುಷ್ಕರ್ಮಿಗಳು ಆತನನ್ನು ಥಳಿಸಿ ಅಕ್ಕಿ ಮೂಟೆಗಳ ಸಮೇತ ಲಾರಿಯನ್ನು ಅಪಹರಿಸಿದ್ದಾರೆ ಎಂದು ಲಾರಿ ಮಾಲೀಕ ಉಬ್ಬಗಿಡ್ಡಯ್ಯದೂರು ನೀಡಿದ್ದರು.

ಪ್ರಕರಣದ ತನಿಖೆ ಆರಂಭಿಸಿದ ಚಿಕ್ಕಬಳ್ಳಾಪುರ ಉಪ ವಿಭಾಗದ ಆರಕ್ಷಕ ಉಪಾಧೀಕ್ಷಕ ವಿ.ಕೆ.ವಾಸುದೇವ್‌, ಬಾಗೇಪಲ್ಲಿ ಠಾಣೆ ಸಿಪಿಐ ಡಿ.ಆರ್‌.ನಾಗರಾಜ್‌, ಪಿಎಸ್‌ಐ ಗೋಪಾಲರೆಡ್ಡಿ, ಸಿಬ್ಬಂದಿ ಲಾರಿ ಚಾಲಕನಾದ ಉಬ್ಬಗಿಡ್ಡಯ್ಯ ಹಾಗೂ ಚಾಲಕ ಪ್ರದೀಪ್‌ರನ್ನು ವಿಚಾರಣೆಗೆ ಗುರಿಪಡಿಸಿದಾಗ, ಅಕ್ಕಿ ಚೀಲಗಳು ಇದ್ದ 18 ಲಕ್ಷ ರು, ಮೌಲ್ಯದ ಲಾರಿಯನ್ನು ತಾವುಗಳೇ ಅ±ಹರಿಸಿದ್ದಾಗಿ ಬಾಯಿ ಬಿಟ್ಟಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ನಗದು ಬಹುಮಾನ ಘೋಷಣೆ

12 ಲಕ್ಷ ರು ಮೌಲ್ಯದ 1,216 ಅಕ್ಕಿ ಮೂಟೆ, 18 ಲಕ್ಷ ಮೌಲ್ಯದ ಲಾರಿ ಕಳವು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಬಾಗೇಪಲ್ಲಿ ತನಿಖಾ ಪೊಲೀಸ್‌ ತಂಡದ ಕಾರ್ಯಾವನ್ನು ಎಸ್ಪಿ ಜಿ.ಕೆ.ಮಿಥುನ್‌ ಕುಮಾರ್‌ (GK Mithun Kumar) ಶ್ಲಾಘಿಸಿ ನಗದು ಬಹುಮಾನ ಘೋಷಿಸಿದ್ದಾರೆ.

ಕದ್ದ ಲಾರಿ ಮಾಡಿ ಕೊಟ್ಯಂತರ ರು ಆಸ್ತಿ ಸಂಪಾದನೆ

ಆರೋಪಿ ಲಾರಿ ಮಾಲೀಕ ಆಂದ್ರಪ್ರದೇಶದ ಕರ್ನೂಲ್‌ಗೆ (karnool) ಸೇರಿದ ಉಬ್ಬಗಿಡ್ಡಯ್ಯ ಸುಮಾರು 15 ಲಕ್ಷ ರು.ಗಳ ಕೈ ಸಾಲ ಸೇರಿದಂತೆ ವಿವಿಧ ರೀತಿಯ ಕೈ ಸಾಲ ಮಾಡಿದ್ದು ಲಾರಿ ಖರೀದಿಗೆ ಮಾಡಿದ್ದ ಸಾಲವನ್ನು ತೀರಿಸಲು ಸಾಧ್ಯವಾಗದೆ ತನ್ನ ಲಾರಿಯನ್ನೇ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ. ಲಾರಿ ಕಳ್ಳತನದಿಂದ ಸುಮಾರು 18 ಲಕ್ಷ ರು.ಗಳ ಲಾರಿ ವಿಮೆ ಹಾಗೂ ಅಕ್ಕಿ (Rice) ಮೂಟೆ ಮಾರಾಟ ಮಾಡಿದರೆ ಸುಮಾರು 12 ಲಕ್ಷ ರು, ಸೇರಿ ಒಟ್ಟು 30 ಲಕ್ಷ ರು.ಗಳ ಹಣ ಬರುತ್ತೆ ಆಗ ಸಾಲ ತೀರಿಸಬಹುದೆಂದು ಯೋಜನೆ ರೂಪಿಸಿದ್ದಾನೆ. ರಾಯಚೂರುನಿಂದ ಅಕ್ಕಿಯನ್ನು ಲೋಡ್‌ ಮಾಡಿಕೊಂಡು ಕರ್ನೂಲ್‌ನಲ್ಲಿ ಒಂದು ಮನೆ ಬಾಡಿಗೆ (Rented House) ಪಡೆದು ಲಾರಿಯಲ್ಲಿದ್ದ ಅಕ್ಕಿಯನ್ನು ಅನ್‌ಲೋಡ್‌ ಮಾಡಿ ಖಾಲಿ ಲಾರಿ ಬೆಂಗಳೂರು ಕಡೆಗೆ ಕಳುಹಿಸಿಕೊಟ್ಟಿರುವುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

Latest Videos
Follow Us:
Download App:
  • android
  • ios