ಬೆಳ್ತಂಗಡಿ: ಮೃತ್ಯುಂಜಯ ನದಿಯಲ್ಲಿ ಗೋಮಾಂಸ, ಹಿಂದೂ ಸಂಘಟನೆಗಳ ಅಕ್ರೋಶ

ಹೊಳೆಗೆ ಗೋಮಾಂಸ, ತ್ಯಾಜ್ಯಗಳನ್ನು ಹಾಕಿದರೆ ಧರ್ಮಸ್ಥಳದ ಸ್ನಾನಘಟ್ಟಕ್ಕೆ ಬರುವುದರಿಂದ ಅಲ್ಲಿ ಸಾವಿರಾರು ಶ್ರದ್ಧಾಳು ಹಿಂದುಗಳು ಪವಿತ್ರ ಸ್ಥಾನ ಮಾಡುವಾಗ ನೀರನ್ನು ಅಪವಿತ್ರಗೊಳಿಸುವ ಹುನ್ನಾರ ಇದು ಎಂದು ಕಾಣುತ್ತಿದೆ. ಆದರಿಂದ ಯಾವುದೇ ರೀತಿಯಲ್ಲಿ ಸ್ನಾನಘಟ್ಟ ಅಪವಿತ್ರವಾಗದಂತೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಬರದಂತೆ ಎಲ್ಲ ಕ್ರಮ ಕೈಗೊಳ್ಳಲು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. 

Outrage of Hindu Organizations For Beef in Mrityunjaya River at Belthangady in Dakshina Kannada grg

ಬೆಳ್ತಂಗಡಿ(ಜ.03): ದನದ ತಲೆ ಮೃತದೇಹ, ಚರ್ಮ, ಮೂಳೆ, ಕರುವಿನ ಮೃತದೇಹ ಮೊದಲಾದ ಅವಶೇಷಗಳನ್ನು ಚಾರ್ಮಾಡಿ ಗ್ರಾಮದ ಮೃತ್ಯುಂಜಯ ನದಿಗೆ ಎಸದೆ ಘಟನೆಯು ಇದೀಗ ಜಿಲ್ಲಾದ್ಯಂತ ಸದ್ದು ಮಾಡುತ್ತಿದೆ. ವಿ.ಹಿಂ.ಪ. ಮತ್ತು ಬಜರಂಗ ದಳದವರು ಇದರ ವಿರುದ್ದ ಜ.6ರಂದು ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. 

ಚಾರ್ಮಾಡಿ ಗ್ರಾಪಂ ವ್ಯಾಪ್ತಿಯ ಅನ್ನಾರು ಸೇತುವೆ ಬಳಿ ಮೃತ್ಯುಂಜಯ ನದಿಗೆ ಯಾರೋ ಕಿಡಿಗೇಡಿಗಳು ಸುಮಾರು 11ಗೋಣಿ ಚೀಲಗಳಲ್ಲಿ ಗೋಮಾಂಸದ ಅವಶೇಷಗಳನ್ನು ಹಾಕಿರುವುದು ಡಿ.17ರಂದು ಪತ್ತೆಯಾಗಿತ್ತು. ಈ ಬಗ್ಗೆ ಪತ್ರಿಕೆ ವರದಿ ಮಾಡಿತ್ತು. ಚಾರ್ಮಾಡಿ, ನೆರಿಯ, ಕಕ್ಕಿಂಜೆ, ಮುಂಡಾಜೆ ಭಾಗದಲ್ಲಿನ ನದಿ, ಹಳ್ಳಗಳಿಗೆ ತ್ಯಾಜ್ಯಗಳನ್ನು ಹಾಕಿದರೆ ಅದು ಕೊನೆಗೆ ಸೇರುವುದು ನೇತ್ರಾವತಿ ನದಿಗೇ ಹೀಗಾಗಿಕಿಡಿಗೇಡಿಗಳುಧರ್ಮಸ್ಥಳದಸ್ನಾನಘಟ್ಟವನ್ನು ಅಪವಿತ್ರ ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಎಂಬ ಕೂಗು ಇದೀಗ ಕೇಳಿಬರುತ್ತಿದೆ. 

ಪ್ರಿಯಾಂಕ್‌ ಖರ್ಗೆ ರಾಜಿನಾಮೆ ನೀಡದಿದ್ದರೆ ಕಾನೂನು ಹೋರಾಟ: ವೇದವ್ಯಾಸ್‌ ಕಾಮತ್‌

ಹೊಳೆಗೆ ಗೋಮಾಂಸ, ತ್ಯಾಜ್ಯಗಳನ್ನು ಹಾಕಿದರೆ ಧರ್ಮಸ್ಥಳದ ಸ್ನಾನಘಟ್ಟಕ್ಕೆ ಬರುವುದರಿಂದ ಅಲ್ಲಿ ಸಾವಿರಾರು ಶ್ರದ್ಧಾಳು ಹಿಂದುಗಳು ಪವಿತ್ರ ಸ್ಥಾನ ಮಾಡುವಾಗ ನೀರನ್ನು ಅಪವಿತ್ರಗೊಳಿಸುವ ಹುನ್ನಾರ ಇದು ಎಂದು ಕಾಣುತ್ತಿದೆ. ಆದರಿಂದ ಯಾವುದೇ ರೀತಿಯಲ್ಲಿ ಸ್ನಾನಘಟ್ಟ ಅಪವಿತ್ರವಾಗದಂತೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಬರದಂತೆ ಎಲ್ಲ ಕ್ರಮ ಕೈಗೊಳ್ಳಲು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. 

ಅದು ನದಿ ಪರಿಸರದಲ್ಲಿ ಅನೇಕ ಕುಟುಂಬಗಳು ವಾಸವಾಗಿದ್ದು ಇಲ್ಲಿಂದ ನೀರನ್ನು ದೈನಂದಿನ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ. ಇಂತಹ ಪ್ರದೇಶದಲ್ಲಿ ಈ ಘಟನೆ ನಡೆದಿರುವುದು ಖಂಡನೀಯ. ಕೃತ್ಯ ಕೃತ್ಯ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಇಂತಹ ಘಟನೆಗಳು ಮರುಕಳಿಸಿದಂತೆ ಸಂಬಂಧಪಟ್ಟವರು ಗಮನಹರಿಸಬೇಕು. ಪವಿತ್ರವಾದ ನದಿಯನ್ನು ಅಪವಿತ್ರಗೊಳಿಸುವುದು, ಗೋವಧೆ ಪ್ರಕರಣಗಳ ಬಗ್ಗೆ ಸೂಕ್ತ ತನಿಖೆ ನಡೆಯಲಿ ಎಂದು ವಿಹಿಂಪ ಬಜರಂಗದಳ ಬೆಳ್ತಂಗಡಿ ತಾಲೂಕು ಅಧ್ಯಕ್ಷ ದಿನೇಶ್ ಚಾರ್ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. 

ಭಕ್ತರ ಭಾವನೆಗೆ ಧಕ್ಕೆ: 

ಪ್ರತಿನಿತ್ಯ ಲಕ್ಷಾಂತರ ಭಕ್ತರು ಧರ್ಮಸ್ಥಳಕ್ಕೆ ಭೇಟಿನೀಡುತ್ತಿದ್ದು, ಈ ಪೈಕಿ ಹೆಚ್ಚಿನವರು ನೇತ್ರಾವತಿ ನದಿಯಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಇಷ್ಟೇ ಅಲ್ಲದೆ, ಧರ್ಮಸ್ಥಳ ದೇಗುಲದ ಮಂಜುನಾಥ ಸ್ವಾಮಿಯ ನಿತ್ಯ ಅಭಿಷೇಕಕ್ಕೂ ನೇತ್ರಾವತಿಯ ನದಿಯ ನೀರನ್ನೇ ಬಳಸಲಾಗುತ್ತಿದೆ. ಹೀಗಾಗಿ, ಕೋಟ್ಯಂತರ ಭಕ್ತರ ನಂಬಿಕೆಗೆ ಗೋ ಹಂತಕರು ಕೊಳ್ಳಿ ಇಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ಚಾರ್ಮಾಡಿ ಗ್ರಾಮದ ಅನ್ನಾರ್‌ಬಳಿ ನದಿಯಲ್ಲಿ ಗೋವಿನ ರುಂಡ ಮುಂಡಗಳು ಪತ್ತೆಯಾಗಿರುವುದು ಈ ಪ್ರದೇಶದ ಹಲವು ಮನೆಗಳಲ್ಲಿ ಮತ್ತು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗೋಹತ್ಯೆ ನಡೆಯುತ್ತಿರುವ ಬಗ್ಗೆ ಅನುಮಾನಗಳನ್ನು ಸೃಷ್ಟಿಸಿದೆ. ಹೀಗೆ ಗೋಹತ್ಯೆ ಮಾಡಿದ ಬಳಿಕ ಅವುಗಳ ಅವಶೇಷವನ್ನು ಮೂಟೆ ಕಟ್ಟಿ ನದಿಗೆ ಎಸೆಯಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ಮತ್ತೊಂದೆಡೆ, ಉದ್ದೇಶಪೂರ್ವಕವಾಗಿ ಪವಿತ್ರ ನದಿ ನೇತ್ರಾವತಿಯನ್ನು ಅಪವಿತ್ರ ಗೊಳಿಸುವ ಹುನ್ನಾರ ಇದು ಎಂಬ ಆರೋಪ ಕೂಡ ಕೇಳಿಬಂದಿದೆ. ಬಜರಂಗದಳ ಎಂಟ್ರಿ: ಇದೀಗ ಬಜರಂಗದಳ ಮಧ್ಯಪ್ರವೇಶಿಸಿದ್ದು, ನೇತ್ರಾವತಿ ನದಿಯನ್ನು ಮಲಿನಗೊಳಿಸಿದವರನ್ನು ಒಂದು ವಾರದೊಳಗೆ ಬಂಧಿಸಬೇಕೆಂದು ಪೊಲೀಸರಿಗೆ ಗಡುವು ವಿಧಿಸಿದೆ. ಒಂದು ವೇಳೆ, ತಪ್ಪಿತಸ್ಥರ ಬಂಧನವಾಗದಿದ್ದಲ್ಲಿ ಜಿಲ್ಲೆಯ ಹಿಂದೂ ನಾಯಕರಲ್ಲ ಸೇರಿ ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಬಜರಂಗದಳ ಎಚ್ಚರಿಕೆ ನೀಡಿದೆ.

6ರಂದು ಕಕ್ಕಿಂಜೆ ಚಲೋಗೆ ವಿಹಿಂಪ, ಬಜರಂಗದಳ ಕರೆ 

ಮಂಗಳೂರು: ಜೀವನದಿ ನೇತ್ರಾವತಿ ಅಪವಿತ್ರಗೊಳಿಸಲು ಗೋಹಂತಕರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ವಿಶ್ವಹಿಂದೂ ಪರಿಷತ್, ಭಜರಂಗದಳ ಜ.6ರಂದು ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಚಲೋಗೆ ಕರೆ ನೀಡಿವೆ. ವಿವಿಧೆಡೆಗಳಿಂದ ಜ.6ರಂದು ಸೋಮವಾರ ಕಕ್ಕಿಂಜೆ ಚಲೋ ನಡೆಸಿ ಬೃಹತ್ ಪ್ರತಿಭಟನೆ ಆಯೋಜಿಸಲು ಉದ್ದೇಶಿಸಲಾಗಿದೆ. ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರ ಸೇರಿಸಿ ಬೃಹತ್ ಪ್ರತಿಭಟನೆಗೆ ನಿರ್ಧಾರ ಮಾಡಿರುವುದಾಗಿ ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ್ ಪುನೀತ್ ಅತ್ತಾವರ ಕರೆ ನೀಡಿದ್ದಾರೆ. 

ಮೃತ್ಯುಂಜಯ ಹೊಳೆಗೆ ಗೋಮಾಂಸ ತ್ಯಾಜ್ಯಗಳನ್ನು ಹಾಕಿದರೆ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟಕ್ಕೆ ಬರುತ್ತದೆ. ಇದು ಧರ್ಮಸ್ಥಳ ಸ್ನಾನಘಟ್ಟವನ್ನು ಅಪವಿತ್ರ ಮಾಡುವ ಹುನ್ನಾರ. ಆದ್ದರಿಂದ ಸ್ನಾನಘಟ್ಟ ಅಪವಿತ್ರವಾಗದಂತೆ ದಕ್ಷಿಣ ಕನ್ನಡ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಸದನದಲ್ಲಿ ಆನೆ ಉಪಟಳದ ಬಗ್ಗೆ ಶಾಸಕ ಹರೀಶ ಪೂಂಜ ಮಾತನಾಡಿದರು. ಆದರೆ ಮಾನವೀಯತೆಯ ಪಾಠ ಮಾಡಿರುವ ಕಾಂಗ್ರೆಸ್ ನಾಯಕರು ಈ ಘಟನೆ ಬಗ್ಗೆ ಮೌನ ವಹಿಸಿದ್ದಾರೆ. ಆದ್ದರಿಂದ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಸೋಮವಾರ ಕಕ್ಕಿಂಜೆ ಚಲೋಗೆ ಕರೆ ನೀಡಲಾಗಿದೆ ಎಂದು ವಿಶ್ವ ಹಿಂದೂ ಸಹಕಾರ್ಯದರ್ಶಿ ಹೇಳಿದ್ದಾರೆ. ಶರಣ್ ಪ್ರಾಂತ ಪಂಪ್‌ ವೆಲ್

ಕಕ್ಕಿಂಜೆ ಚಲೋಗೆ ಬೆಂಬಲ: ಹರೀಶ್ ಪೂಂಜ 

ಮಂಗಳೂರು: ಮೃತ್ಯುಂಜಯ ನದಿಗೆ ಗೋಮಾಂಸ ಎಸೆದ ಆರೋಪಿಗಳನ್ನು ವಾರದೊಳಗೆ ಬಂಧಿಸುವ ಭರವಸೆಯನ್ನು ಪೊಲೀಸ್ ಇಲಾಖೆ ನೀಡಿತ್ತು. ಆದರೆ ಈವರೆಗೆ ಆರೋಪಿಗಳ ಸುಳಿವು ದೊರಕದ ಕಾರಣ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಕ್ಕಿಂಜಿ ಚಲೋ ಹೋರಾಟ ಕೈಗೆತ್ತಿಕೊಂಡಿದೆ. ಅದಕ್ಕೆ ಇಡೀ ಸಮಾಜ ಹಾಗೂ ನಾವೆಲ್ಲರೂ ಬೆಂಬಲ ಸೂಚಿಸುತ್ತೇವೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದ್ದಾರೆ. 

ಮೊಬೈಲ್‌ನಲ್ಲೇ ಓದಿ ಪಿಎಸ್‌ಐ ಆದ ಜೀಪ್‌ ಚಾಲಕ, ಪೇದೆ!

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಗೋರಕ್ಷಕರ ಮೇಲೆಯೇ ಪ್ರಕರಣ ದಾಖಲಿಸಲಾಗುತ್ತಿದೆ. ಹಾಗಾಗಿ ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ದ.ಕ. ಜಿಲ್ಲೆಯಲ್ಲಿ ಅವ್ಯಾಹತವಾಗಿ ಗೋಕಳ್ಳ ಸಾಗಾಟ, ಗೋಹತ್ಯೆ ನಡೆಯುತ್ತಿದೆ. ಸರ್ಕಾರಈ ವಿಚಾರದಲ್ಲಿ ದ್ವಂದ್ವ ನಿಲುವು ತಳೆದಿದೆ ಎಂದು ಆರೋಪಿಸಿದರು. 

ಆನೆಗಳ ಹಾವಳಿಯಿಂದ ರೈತರಿಗೆ ಆಗುತ್ತಿರುವ ತೊಂದರೆ ಬಗ್ಗೆ ಆನೆಗಳಿಗೆ ಕೊಲ್ಲಲು ಅವಕಾಶ ಕೊಡಬೇಕೆಂದು ಸದನದಲ್ಲಿ ಮಾತನಾಡಿದ್ದೆ. ಈ ವೇಳೆ ಸೀಕರ್‌ ಯು.ಟಿ.ಖಾದ‌ರ್ ಅವರು ಮನುಷ್ಯರಿಗೆ ಮಾತ್ರವಲ್ಲ, ಆನೆಗಳಿಗೆ ಬದುಕುವ ಹಕ್ಕಿದೆ ಎಂದಿದ್ದರು. ಹಾಗಾದರೆ ಗೋವುಗಳಿಗೆ ಬದುಕುವ ಹಕ್ಕು ಇದೆಯಲ್ವಾ..? ದಯವಿಟ್ಟು, ಅವರು ಗೋಹತ್ಯೆ ನಿಲ್ಲಿಸಬೇಕೆಂದು ಹೇಳಿಕೆ ಕೊಡಲಿ, ಬಿಜೆಪಿ ಇದ್ದಾಗ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದ್ದೆವು. ಕಾಂಗ್ರೆಸ್ ಸರ್ಕಾರ ಅದನ್ನು ವಾಪಸ್ ಪಡೆದಿದೆ. ಪ್ರಾಣಿಗಳ ಬಗ್ಗೆ ಅಷ್ಟೊಂದು ಕಾಳಜಿಯಿದ್ದಲ್ಲಿ ಖಾದರ್‌ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲಿ ಎಂದು ಶಾಸಕ ಹರೀಶ್ ಪೂಂಜ ಆಗ್ರಹಿಸಿದರು.

Latest Videos
Follow Us:
Download App:
  • android
  • ios