Asianet Suvarna News Asianet Suvarna News

ವೈಚಾರಿಕ ಪ್ರಜ್ಞೆ ಮೂಡಿಸುವುದೆ ನಮ್ಮ ಉದ್ದೇಶ: ಸಚಿವ ಸತೀಶ್‌ ಜಾರಕಿಹೊಳಿ

ಕಂದಾಚಾರ, ಮೌಢ್ಯಗಳ ಆಚರಣೆ ಮೂಲೋತ್ಪಾಟನೆ ಮಾಡಿ ಮೌಢ್ಯ ಮುಕ್ತ ಸಮಾಜದ ನಿರ್ಮಾಣಕ್ಕೆ ವೈಜ್ಞಾನಿಕ, ವೈಚಾರಿಕ ಚಿಂತನೆಗಳ ಜಾಗೃತಿ ಅಗತ್ಯವಾಗಿದೆ ಎಂದು ರಾಜ್ಯಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಸಮ್ಮೇಳನ ಸರ್ವಾಧ್ಯಕ್ಷ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದರು.

Our aim is to create moral awareness Says Minister Satish Jarkiholi gvd
Author
First Published Dec 30, 2023, 11:03 PM IST

ಲಿಂಗಸುಗೂರು (ಡಿ.30): ಇತಿಹಾಸವಿಲ್ಲದ ಮೂಢನಂಭಿಕೆಗಳು ಬಡವರ ಬದುಕು ಮೂರಾಬಟ್ಟೆ ಮಾಡಿವೆ. ಕಂದಾಚಾರ, ಮೌಢ್ಯಗಳ ಆಚರಣೆ ಮೂಲೋತ್ಪಾಟನೆ ಮಾಡಿ ಮೌಢ್ಯ ಮುಕ್ತ ಸಮಾಜದ ನಿರ್ಮಾಣಕ್ಕೆ ವೈಜ್ಞಾನಿಕ, ವೈಚಾರಿಕ ಚಿಂತನೆಗಳ ಜಾಗೃತಿ ಅಗತ್ಯವಾಗಿದೆ ಎಂದು ರಾಜ್ಯಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಸಮ್ಮೇಳನ ಸರ್ವಾಧ್ಯಕ್ಷ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಹಾಗೂ ವೈಜಾರಿಕ ದಿನಾಚರಣೆ ನಿಮಿತ್ತ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹೋಗದಲ್ಲಿ 2 ದಿನಗಳ ಕಾಲ ಹಮ್ಮಿಕೊಂಡಿರುವ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ಮೂಢನಂಭಿಕೆಗಳನ್ನು ನಂಬಿಕೆಗಳಾಗಿ ಆಚರಿಸಲಾಗುತ್ತಿದೆ. ಇವುಗಳ ವಿರುದ್ಧ ರಾಜ್ಯದಲ್ಲಿ ಹೋರಾಟ ಅಗತ್ಯವಾಗಿದೆ. ಇದರಿಂದ ನಾಡಿನಲ್ಲಿ ವೈಚಾರಿಕ, ವೈಜ್ಞಾನಿಕ ಚಿಂತನೆಗಳು ವ್ಯಾಪಕಗೊಳಿಸಿ ಜನರನ್ನು ಮೌಢ್ಯಾಚರಣೆಗಳಿಂದ ಜನರ ಮನ ಪರಿವರ್ತನೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ವಿಜ್ಞಾನ ತಂತ್ರಜ್ಞಾನದಲ್ಲಿ ದೇಶ ವೇಗದಲ್ಲಿ ಪರಿವರ್ತನೆಗೊಳ್ಳುತ್ತಿದೆ. ದೇಶದಲ್ಲಿ ವೈಜ್ಞಾನಿಕ ಚಿಂತೆನಗಳಿಗೆ ನೆರವಾಗಲು ಸರ್ಕಾರ ಬದ್ಧತೆಯಿಂದ ಕಾರ್ಯ ಮಾಡುತ್ತಿದೆ. ಅದಕ್ಕೆ ತಕ್ಕಂತೆ ವೈಜ್ಞಾನಿಕ ಸಮ್ಮೇಳನಕ್ಕೆ ರು.50 ಲಕ್ಷ ನೀಡಲಾಗಿದೆ. ಮತ್ತು ಬೆಂಗಳೂರಿನಲ್ಲಿ ವಿಜ್ಞಾನ ಗ್ರಾಮ ನಿರ್ಮಿಸಲು ಲೋಕೋಪಯೋಗಿ ಇಲಾಖೆಯಿಂದ ರು.5 ಕೋಟಿ ಒದಗಿಸಲಾಗಿದೆ. ಇದರ ಜೊತೆಗೆ ವೈಜ್ಞಾನಿಕ ಸಮ್ಮೇಳನಕ್ಕೆ ಪ್ರತಿ ವರ್ಷ 25 ಲಕ್ಷ ವೈಯಕ್ತಿವಾಗಿ ನೀಡಲಾಗುವುದು ಮತ್ತು ಲಿಂಗಸುಗೂರಲ್ಲಿ ನಡೆಯುತ್ತಿರುವ ಸಮ್ಮೇಳನದ ಊಟದ ವ್ಯವಸ್ಥೆಗೆ ರು.15 ಲಕ್ಷ ನೀಡುವುದಾಗಿ ಭರವಸೆ ನೀಡಿದರು.

ಡಿಸಿಎಂ ಹುದ್ದೆ ಬಿಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ: ಸಚಿವ ಪರಮೇಶ್ವರ್‌

ಸಮಾರಂಭದಲ್ಲಿ ಕಲ್ಯಾಣ ಸಿರಿ ಸ್ಮರಣ ಸಂಚಿಕೆ, ವಿಜ್ಞಾನ ಸಿರಿ ಮಾಸ ಪತ್ರಿಕೆ, ವಿಜ್ಞಾನ ಗ್ರಾಮ, 2024ರ ದಿನಚಿ, ಕೃಷಿಸುದ್ದಿ ಪತ್ರಿಕೆ, ವಿಜ್ಞಾನ ವಸ್ತು ಪ್ರದರ್ಶನ, ಎಚ್.ಎನ್ ಚಾನಲೆ ಉದ್ಘಾಟನೆ ಮಾಡಲಾಯಿತು. ಈ ವೇಳೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್ ಕಿರಣ ಕುಮಾರ, ಕರ್ನಾಟಕ ವೈಜ್ಞಾನಿಕ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಕಲ್ ನಟರಾಜ, ಶಾಸಕ ಮಾನಪ್ಪ ವಜ್ಜಲ್, ಮಾಜಿ ಶಾಸಕ ಡಿ.ಎಸ್ ಹೂಲಗೇರಿ, ಸಚಿವರಾದ ಬಿ.ಟಿ ಲಲಿತಾ ನಾಯ್ಕ, ಅಮರೇಗೌಡ ಬಯ್ಯಾಪುರ, ವಿ.ಟಿ ಸ್ವಾಮಿ, ಹನುಮಂತೇಗೌಡ, ಜಿಲ್ಲಾಧ್ಯಕ್ಷ ಚಿರಂಜೀವಿ ತಾಲೂಕು ಅಧ್ಯಕ್ಷ ನಭಿಸಾಬ ಸೇರಿದಂತೆ ಇದ್ದರು.

Follow Us:
Download App:
  • android
  • ios