ಗರ್ಡಾಡಿ ಪ್ರದೇಶದಲ್ಲಿ ನೀರು ನಾಯಿಗಳ ಗುಂಪು ಪ್ರತ್ಯಕ್ಷ ಗರ್ಡಾಡಿ ಸಮೀದ ಕುಬಳಬೆಟ್ಟುಗುತ್ತು ಎಂಬಲ್ಲಿನ ತೋಡಿನಲ್ಲಿ ಪತ್ತೆ 25ಕ್ಕೂ ಹೆಚ್ಚು ನೀರು ನಾಯಿಗಳು ಹರಿದಾಡಿಕೊಂಡು ಬಂದಿರುವ ವಿಡಿಯೋ ವೈರಲ್
ಬೆಳ್ತಂಗಡಿ (ಮೇ.17): ತಾಲೂಕಿನ ಗರ್ಡಾಡಿ ಪ್ರದೇಶದಲ್ಲಿ ನೀರು ನಾಯಿಗಳ ಗುಂಪು ಶನಿವಾರ ಸಂಜೆ ಕಂಡು ಬಂದಿದ್ದು ಸ್ಥಳಿಯರಲ್ಲಿ ಆತಂಕ ಮೂಡಿಸಿದೆ. ಗರ್ಡಾಡಿ ಸಮೀದ ಕುಬಳಬೆಟ್ಟುಗುತ್ತು ಎಂಬಲ್ಲಿನ ತೋಡಿನಲ್ಲಿ ಸುಮಾರು 25ಕ್ಕೂ ಹೆಚ್ಚು ನೀರು ನಾಯಿಗಳು ಹರಿದಾಡಿಕೊಂಡು ಬಂದಿರುವ ವಿಡಿಯೋ ವೈರಲ್ ಆಗಿದೆ.
"
ಒಟರ್ ಎಂದು ಕರೆಯಲಾಗುತ್ತಿರುವ ಈ ಪ್ರಾಣಿಗಳು ಮಾಂಸಾಹಾರಿಗಳಾಗಿದ್ದು ಮೀನು, ಏಡಿ ಇತ್ಯಾದಿಗಳನ್ನು ಹಿಡಿದು ತಿನ್ನುತ್ತವೆ. ಡಾರ್ಬಮನ್ ನಾಯಿಯಂತೆ ಕಾಣುವ ಇವುಗಳು ನಾಯಿಮರಿಗಳನ್ನು ಕ್ಷಣಾರ್ಧದಲ್ಲಿ ಹಿಡಿದು ತಿನ್ನಬಲ್ಲುದು. ಎಳೆಯ ಮಕ್ಕಳು ಈ ಪ್ರಾಣಿಗಳ ಸನಿಹ ಹೋದರೆ ಅಪಾಯಕಾರಿ ಎಂದು ಹೇಳಲಾಗುತ್ತಿದೆ.
ಅರಬ್ಬಿ ಸಮುದ್ರದಲ್ಲಿ 3 ಬೋಟು ದುರಂತ: ಐವರು ನಾಪತ್ತೆ ...
ಗುತ್ತು ಮನೆಯ ಸಂಪತ್ ಕುಮಾರ್ ಎಂಬವರ ಮನೆ ಸಮೀಪದ ತೋಡಿನಲ್ಲಿ ಶನಿವಾರ ಸಂಜೆ ಇವು ಕಂಡು ಬಂದಿದ್ದು, ಭಾನುವಾರ ವನ್ಯಜೀವಿ, ಅರಣ್ಯ ಇಲಾಖಾ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಳೆದ ವರ್ಷ ಬಂದ ಪ್ರವಾಹದಲ್ಲಿ ಇವುಗಳು ಕಾಡಿನಿಂದ ಬಂದಿರಬಹುದು ಎಂದು ಹೇಳಲಾಗುತ್ತಿದೆ.
