ಪೊಲೀಸರ ಸಹಾಯದಿಂದ ಮಹಿಳೆಗೆ ಹೆರಿಗೆ/ ಗರ್ಭಿಣಿಗೂ ತಟ್ಟಿತ್ತು ಕರೋನಾ/ ಒಡಿಶಾ ಮೂಲದ ಮಹಿಳೆ/ ಮಹಿಳೆ ಪತಿ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದರು/ ಇತ್ತ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು.
ಬೆಂಗಳೂರು(ಏ. 16) ಕೊರೋನಾ ಲಾಕ್ ಡೌನ್ ನಡುವೆಯೂ ನಮ್ಮನ್ನೆಲ್ಲ ಕಾಪಾಡುತ್ತಿರುವ ಪೊಲೀಸ್ ಸಿಬ್ಬಂದಿ ಮತ್ತೊಂದು ಮೆಚ್ಚುವ ಕೆಲಸ ಮಾಡಿದ್ದಾರೆ. ಈ ಸುದ್ದಿ ಬಂದಿರುವುದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಿಂದ
ಕೊರೋನಾ ಸೋಂಕಿತ ಗರ್ಭಿಣಿಗೆ ಪೊಲೀಸರೇ ಮುಂದೆ ನಿಂತು ಹೆರಿಗೆ ಮಾಡಿಸಿದ್ದಾರೆ. ಒಡಿಶಾ ಮೂಲದ ಗರ್ಭಿಣಿ ಭವಾನಿಗೆ ಕೊರೋನಾ ಸೋಂಕು ತಾಗಿತ್ತು. ಭವಾನಿ ಮತ್ತು ಪತಿ ಪವಿತ್ರ ದುರ್ಗಾ ಒಡಿಶಾ ಮೂಲದವರು.. ಎರಡು ವರ್ಷಗಳ ಹಿಂದೆ ಕೆಲಸಕ್ಕಾಗಿ ಬೆಂಗಳೂರಿಗೆ ದಂಪತಿ ಬಂದಿದ್ದರು. ನಂತರ ಕೊಲೆ ಕೇಸ್ ಒಂದರಲ್ಲಿ ಪತಿ ಪವಿತ್ರ ದುರ್ಗಾ ಜೈಲು ಪಾಲಾಗಿದ್ದರು.
ಆಸ್ಪತ್ರೆ ಕ್ರೂರತನಕ್ಕೆ ಏನನ್ನೋಣ, ಬಾಕ್ಸ್ ನಲ್ಲಿ ಮಗುವಿನ ಶವ ಹೊತ್ತು ನಡೆದ ತಂದೆ
ಆದರೆ ಈ ಕಡೆ ಇದೇ ತಿಂಗಳ 13ನೇ ತಾರೀಖಿನಂದು ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ನಂತರ ಪರಪ್ಪನ ಅಗ್ರಹಾರ ಠಾಣೆಗೆ ಹೋದ ಮಹಿಳೆ 'ನನ್ನ ಗಂಡನನ್ನು ನೀವೆ ಜೈಲಿಗೆ ಕಳುಹಿಸಿದ್ದಿರಿ ಈಗ ನೀವೆ ನನ್ನ ಆಸ್ಪತ್ರೆಗೆ ಸೇರಿಸಿ' ಎಂದು ದುಂಬಾಲು ಬಿದ್ದಿದ್ದಾರೆ.
ನಂತರ ಪರಪ್ಪನ ಅಗ್ರಹಾರ ಇನ್ಸ್ಪೆಕ್ಟರ್ ನಂದೀಶ್ ರವರ ಮಾರ್ಗದರ್ಶನದಲ್ಲಿ ನಿಮಾನ್ಸ್ ಹತ್ತಿರದ ಮಹಿಳಾ ಸ್ವೀಕಾರಕ್ಕೆ ಗರ್ಭಿಣಿಯನ್ನು ಕಳುಹಿಸಿಕೊಡಲಾಗಿದೆ. ನಂತರ ಕೋವಿಡ್ 19 ಇರೋದ್ರಿಂದ ಟ್ರೀಟ್ಮೆಂಟ್ ಕೊಡಲು ಆಗಲ್ಲ ಎಂದು ಸ್ವೀಕಾರ ಕೇಂದ್ರದವರು ಹೇಳಿದ್ದಾರೆ. ಇದಾದ ಮೇಲೆ ಸಿಂಗಸಂದ್ರ ಬಳಿಯ ಸರ್ಕಾರಿ ಆಸ್ಪತ್ರೆಗೆ ಗರ್ಭಿಣಿಯನ್ನು ಕಳುಹಿಸಿಕೊಡಲಾಗಿದೆ.
ಗುರುವಾರ ಬೆಳಗಿನ ಜಾವ 3:30ರ ಸುಮಾರಿಗೆ ನಾರ್ಮಲ್ ಡಿಲೆವರಿಯಾಗಿದೆ. ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಮಹಿಳೆಯ ಖರ್ಚು ವೆಚ್ಚವನ್ನು ಪೊಲೀಸರೆ ನೋಡಿಕೊಳ್ಳುತಿದ್ದಾರೆ.
ಡಿಸ್ಚಾರ್ಜ್ ಬಳಿಕ ಮಹಿಳೆ ಮತ್ತು ಮಗುವನ್ನು ಪಿ.ಜಿಯಲ್ಲಿ ಇರಿಸಲು ನಿರ್ಧರಿಸಲಾಗಿದೆ. ಪಿಜಿ ಬಾಡಿಗೆಯನ್ನು ಸಹ ಪೊಲೀಸರೇ ಭರಿಸಲು ನಿರ್ಧರಿಸಿದ್ದು ಸದ್ಯ ಮಗು ಮತ್ತು ಮಹಿಳೆಗೆ ಬೇಕಾದ ಅಗತ್ಯ ವಸ್ತುಗಳು ಮತ್ತು ರೇಷನ್ ನೀಡಿದ್ದು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
