Asianet Suvarna News Asianet Suvarna News

ನೆನೆಗುದ್ದಿಗೆ ಬಿದ್ದ ಸ್ಲಂ ಮನೆ ನಿರ್ಮಾಣಕ್ಕೆ ಆದೇಶ: ಶಾಸಕ

ಶೌಚಾಲಯವಿಲ್ಲದೇ ಬಯಲು ಬಹಿರ್ದೆಸೆ ಆಶ್ರಯ, ವಸತಿ ನಿರ್ಮಾಣ ವಿಳಂಬ ಇತರೆ ಸಮಸ್ಯೆ ಬಗ್ಗೆ ಶಾಸಕರ ಬಳಿ ವಾರ್ಡ್‌ನ ಮಹಿಳೆಯರು ಅಳಲು ತೋಡಿಕೊಂಡ ಹಿನ್ನೆಲೆ ಸಮಸ್ಯೆ ಗಂಭೀರವಾಗಿ ಪರಿಗಣಿಸಿದ ಶಾಸಕ ವೆಂಕಟರಮಣಪ್ಪ ಪಟ್ಟಣದ ಎಲ್ಲಾ ವಾರ್ಡ್‌ಗಳ ಸ್ಲಂ ಮನೆಗಳನ್ನು ಇನ್ನೂ ಒಂದು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟಗುತ್ತಿಗೆದಾರರಿಗೆ ಆದೇಶಿಸಿರುವುದಾಗಿ ತಿಳಿಸಿದರು.

Order for construction of collapsed slum houses: MLA snr
Author
First Published Jan 21, 2023, 6:00 AM IST

  ಪಾವಗಡ :  ಶೌಚಾಲಯವಿಲ್ಲದೇ ಬಯಲು ಬಹಿರ್ದೆಸೆ ಆಶ್ರಯ, ವಸತಿ ನಿರ್ಮಾಣ ವಿಳಂಬ ಇತರೆ ಸಮಸ್ಯೆ ಬಗ್ಗೆ ಶಾಸಕರ ಬಳಿ ವಾರ್ಡ್‌ನ ಮಹಿಳೆಯರು ಅಳಲು ತೋಡಿಕೊಂಡ ಹಿನ್ನೆಲೆ ಸಮಸ್ಯೆ ಗಂಭೀರವಾಗಿ ಪರಿಗಣಿಸಿದ ಶಾಸಕ ವೆಂಕಟರಮಣಪ್ಪ ಪಟ್ಟಣದ ಎಲ್ಲಾ ವಾರ್ಡ್‌ಗಳ ಸ್ಲಂ ಮನೆಗಳನ್ನು ಇನ್ನೂ ಒಂದು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟಗುತ್ತಿಗೆದಾರರಿಗೆ ಆದೇಶಿಸಿರುವುದಾಗಿ ತಿಳಿಸಿದರು.

ಪಟ್ಟಣದ 22ನೇ ವಾರ್ಡ್‌ ಕನ್‌ಮಾನ್‌ ಚೆರ್ಲು ವಾರ್ಡಿನಲ್ಲಿ ಮಹಿಳೆಯರ ಸಮಸ್ಯೆ ಆಲಿಸಿದರು.

ಕನ್‌ಮಾನ್‌ಚೆರ್ಲು ವಾರ್ಡ್‌ ನಗರದ ಕೊನೆ ಭಾಗದಲ್ಲಿದೆ. ಶೌಚಾಲಯ ಇಲ್ಲದೇ ನಿತ್ಯ ಬಯಲು ಬಹಿರ್ದೆಸೆಗೆ ಹೋಗಬೇಕು. ಬೆಳಿಗ್ಗೆ, ಸಂಜೆ ಹೆಚ್ಚಿನ ಸಂಖ್ಯೆಯಲ್ಲಿ ಜನರ ಓಡಾಟವಿದ್ದು ಮಹಿಳೆಯರ ಶೌಚಾಲಯಕ್ಕೆ ನಿತ್ಯ ತೀವ್ರ ಹಿಂಸೆ ಅನುಭವಿಸುತ್ತಿದ್ದೇವೆ. ವಾರ್ಡಿನಲ್ಲಿ ಬಂಡೆ ಇರುವ ನೆಪವೊಡ್ಡಿ ಪುರಸಭೆ ಅಧಿಕಾರಿಗಳು ಶೌಚಾಲಯ ಕಲ್ಪಿಸಿಲ್ಲ. ಸ್ಲಂ ಬೋರ್ಡ್‌ನಿಂದ ಅರ್ಹರಿಗೆ 70 ಮನೆ ಮಂಜೂರಾತಿ ಕಲ್ಪಿಸಿದೆ. ಸಾಲಸೋಲ ಮಾಡಿ 50ರಿಂದ 70 ಸಾವಿರ ಗುತ್ತಿಗೆದಾರರಿಗೆ ಹಣ ನೀಡಿದ್ದೇವೆ. ಪಾಯ ಹಂತದವರೆವಿಗೆ ಮನೆ ಕಟ್ಟಿಕೈಬಿಟ್ಟಿದ್ದು ಮನೆಗಳ ಆಶ್ರಯವಿಲ್ಲದೇ ಕಳೆದ ಒಂದು ವರ್ಷದಿಂದ ಬಾಡಿಗೆ ಮನೆಗಳಲ್ಲಿ ವಾಸವಿದ್ದೇವೆ. ಸಮಸ್ಯೆ ನಿವಾರಿಸುವಂತೆ ಅನೇಕ ಮಂದಿ ಬಡ ಫಲಾನುಭವಿಗಳು ಶಾಸಕರಲ್ಲಿ ಮನವಿ ಮಾಡಿದರು.

ಸಮಸ್ಯೆ ಗಂಭೀರವಾಗಿ ಪರಿಗಣಿಸಿದ ಶಾಸಕ ವೆಂಕಟರಮಣಪ್ಪ, ಒಂದು ತಿಂಗಳಲ್ಲಿ ನಗರದ ಎಲ್ಲಾ ವಾರ್ಡ್‌ಗಳ ಸ್ಲಂ ಮನೆಗಳ ನಿರ್ಮಾಣಕ್ಕೆ ಆದೇಶಿಸಿದ್ದು ಓವರ್‌ ಹೆಡ್‌ ಟ್ಯಾಂಕ್‌ನಿಂದ ಪೈಪ್‌ಲೈನ್‌ ಅಳವಡಿಸಿ, ಶೀಘ್ರ ಕನ್‌ಮಾನ್‌ ಚೆರ್ಲು ವಾರ್ಡ್‌ನ ಜನತೆಗೆ ಕುಡಿವ ನೀರು ಕಲ್ಪಿಸಬೇಕು. ಅಲ್ಲಿಯವರೆಗೆ ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡುವಂತೆ ಪುರಸಭೆ ಎಂಜಿನಿಯರ್‌ ಕುಮಾರ್‌ಗೆ ಆದೇಶಿಸಿದರು.

ಶೌಚಾಲಯ ನಿರ್ಮಾಣದ ಅಡ್ಡಿ ಕುರಿತು ವಾರ್ಡಿನ ಸದಸ್ಯರಿಂದ ಮಾಹಿತಿ ಪಡೆದ ಬಳಿಕ ಸರ್ಕಾರಿ ಜಾಗ ಗುರ್ತಿಸಿ ಕೂಡಲೇ ಸಾಮೂಹಿಕ ಶೌಚಾಲಯ ನಿರ್ಮಾಣ, ಸಿಸಿರಸ್ತೆ ಹಾಗೂ ಚರಂಡಿಗಳ ನಿರ್ಮಾಣ ಜರೂರಾಗಿ ನಿರ್ವಹಿಸಿ, ವಾರ್ಡಿನ ಸಮಸ್ಯೆ ನಿವಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಸಮಸ್ಯೆ ನಿವಾರಣೆ ವಿಳಂಬವಾದರೆ ತಮಗೆ ಕೂಡಲೇ ಪೋನ್‌ ಕರೆ ಮಾಡಿ ತಿಳಿಸುವಂತೆ ವಾರ್ಡಿನ ನಾಗರಿಕರಿಗೆ ಶಾಸಕರು ಸಲಹೆ ನೀಡಿದರು.

ಪಟ್ಟಣದ ಶ್ರೀ ಶನೇಶ್ವರಸ್ವಾಮಿ ವೃತ್ತದಲ್ಲಿ ಐ ಮಾಸ್ಟ್‌ ವಿದ್ಯುತ್‌ ದ್ವೀಪ ಅಳವಡಿಕೆಗೆ ಚಾಲನೆ ನೀಡಿದ ನಂತರ, ಎಂಎಆರ್‌ ಲೇ ಔಟ್‌, ಬನಶಂಕರಿ ಗಂಗಮ್ಮನ ಗುಡಿ, ಶಾಂತಿ ನಗರ, ಜೈನ್‌ಲೇ ಔಟ್‌, ಕುಮಾರಸ್ವಾಮಿ ಬಡಾವಣೆ, ಬ್ರಾಹ್ಮಣರ ಬೀದಿ, ಭೋವಿ ಕಾಲೋನಿ, ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ರಸ್ತೆ ಮಾರ್ಗ ಸೇರಿದಂತೆ ನಗರದ ಎಂಟು ವಾರ್ಡ್‌ಗಳಿಗೆ ತಲಾ 10ರಿಂದ 35ಲಕ್ಷದವರೆಗೆ ಸುಮಾರು 5 ಕೋಟಿ ವೆಚ್ಚದ ಸಿಸಿರಸ್ತೆ, ಚರಂಡಿ, ಸಿಮೆಂಟ್‌ ಹಾಗೂ ಟಾರು ರಸ್ತೆಗಳ ಪ್ರಗತಿಗೆ ಭೂಮಿ ಪೂಜೆ ನೆರವೇರಿಸಿದರು.

ಹಿರಿಯ ಮುಖಂಡ ಮಹಮ್ಮದ್‌ ಫಜುಲುಲ್ಲಾ ಸಾಬ್‌, ಜಿಪಂ ಮಾಜಿ ಸದಸ್ಯ ಡಾ.ಚಕ್ಕರರೆಡ್ಡಿ, ಸುದೇಶ್‌ಬಾಬು, ಶಂಕರರೆಡ್ಡಿ, ಪ್ರಮೋದ್‌ಕುಮಾರ್‌, ಪುರಸಭೆ ಅಧ್ಯಕ್ಷರಾದ ಧನಲಕ್ಷ್ಮೀ, ಉಪಾಧ್ಯಕ್ಷೆ ಶಶಿಕಲಾಬಾಲಾಜಿ, ಮಾಜಿ ಅಧ್ಯಕ್ಷ ಭೋವಿ ಕಾಲೋನಿ ರಾಮಾಂಜಿನಪ್ಪ, ವೆಂಕಟಮ್ಮನಹಳ್ಳಿ ನಾಗೇಂದ್ರರಾವ್‌, ಪಿ.ಎಚ್‌.ರಾಜೇಶ್‌, ತೆಂಗಿನಕಾಯಿ ರವಿ, ಕೋಳಿಬಾಲಾಜಿ, ಭೋವಿ ಸಂಘದ ಅಧ್ಯಕ್ಷ ಬಂಗಾರಪ್ಪ,ನಾಗೇಶ್‌, ಗುತ್ತಿಗೆದಾರ ಸಾಗರ್‌, ಪುರಸಭೆ ಸದಸ್ಯರಾದ ವೇಲುರಾಜ್‌, ಬಾಲಸುಬ್ರಮಣ್ಯಂ, ಮಹಮ್ಮದ್‌ ಇಮ್ರಾನ್‌, ಜಾಹ್ನವಿ ಎಂ.ಎಸ್‌.ವಿಶ್ವನಾಥ್‌, ವೆಂಕಟರಮಣಪ್ಪ, ವಿಜಯಕುಮಾರ್‌, ಅಲ್ಪ ಸಂಖ್ಯಾತರ ಘಟಕದ ಷಾಬಾಬು, ರಿಜ್ವಾನ್‌ ಉಲ್ಲಾ, ಕಿರಣ್‌ಕುಮಾರ್‌, ಅವಿನಾಶ್‌ ಇತರÜರಿದ್ದರು. 

Follow Us:
Download App:
  • android
  • ios