ಕಾಂಗ್ರೆಸ್‌ ಬಿಟ್ಟವರು ಮರಳಿ ಗೂಡಿಗೆ : ಆಹ್ವಾನ ನೀಡಿದ ಡಿಕೆಶಿ

. ರಾಜ್ಯದಲ್ಲಿ ಬಲಿಷ್ಠ ಕಾಂಗ್ರೆಸ್‌ ಸರ್ಕಾರ ಬರಲಿದ್ದು, ಅದರ ಭಾಗವಾಗಿರಬೇಕು ಎಂದು ಬಯಸುವವರು ಪಕ್ಷ ಸೇರಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.

Open invitation to join Congress: DK shivakumar snr

 ಬೆಳಗಾವಿ :  ರಾಜ್ಯ ಹಾಗೂ ಸ್ಥಳೀಯ ಮಟ್ಟದಲ್ಲಿ ಅನೇಕರು ಕಾಂಗ್ರೆಸ… ಸೇರಲು ಉತ್ಸುಕರಾಗಿದ್ದಾರೆ. ಬೇರೆ ಪಕ್ಷದಿಂದ ಬರಲು ಇಚ್ಛಿಸುವವರಿಗೆ ಮುಕ್ತ ಆಹ್ವಾನ ನೀಡುತ್ತೇನೆ. ಯಾರೆಲ್ಲಾ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ… ಗಾಂಧಿ ಅವರ ಮುಖಂಡತ್ವದಲ್ಲಿ ನಂಬಿಕೆ ಇಟ್ಟು, ಪಕ್ಷದ ಸಿದ್ಧಾಂತ ಒಪ್ಪಿ ಬೇಷರತ್ತಾಗಿ ಸೇರಬಯಸುವರೋ ಅವರು ಅರ್ಜಿ ಹಾಕಬಹುದು. ಸ್ಥಳೀಯ ಮಟ್ಟದಲ್ಲಿ ಸೇರಲು ಅವಕಾಶ ಮಾಡಿಕೊಡಲಾಗುವುದು. ರಾಜ್ಯದಲ್ಲಿ ಬಲಿಷ್ಠ ಕಾಂಗ್ರೆಸ್‌ ಸರ್ಕಾರ ಬರಲಿದ್ದು, ಅದರ ಭಾಗವಾಗಿರಬೇಕು ಎಂದು ಬಯಸುವವರು ಪಕ್ಷ ಸೇರಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.

ಕಾಂಗ್ರೆಸ್‌ ಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನಾವು ಯಾರನ್ನೂ ಬೇಡ ಎಂದು ತಿರಸ್ಕರಿಸುವುದಿಲ್ಲ. ನಮ್ಮಿಂದ ದೂರ ಹೋಗಿರುವ ಅನೇಕರು ಮತ್ತೆ ಪಕ್ಷ ಸೇರುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಅರ್ಜಿ ಹಾಕುವಂತೆ ತಿಳಿಸಿದ್ದೇನೆ ಎಂದರು.

ಪಕ್ಷ ಸೇರುವವರಲ್ಲಿ ಈ ಹಿಂದೆ ಪಕ್ಷ  ಬಿಟ್ಟು ಹೋಗಿದ್ದ 15 ಶಾಸಕರು (MLA)  ಇದ್ದಾರಾ ಎಂಬ ಪ್ರಶ್ನೆಗೆ, ಈಗ ಆ ವಿಚಾರವನ್ನು ಬಹಿರಂಗಪಡಿಸುವುದಿಲ್ಲ. ಯಾರು ಬೇಕಾದರೂ ಅರ್ಜಿ ಹಾಕಬಹುದು. ಬಿಜೆಪಿ (BJP)  ಸರ್ಕಾರದ ಭ್ರಷ್ಟಾಚಾರ ನೋಡಿ ಇಲ್ಲಿಂದ ಹೋದವರು ಸೇರಿದಂತೆ ಎಲ್ಲರೂ ಬೇಸತ್ತಿದ್ದಾರೆ. ಕೆಲವರು ತಮ್ಮ ಬೇಸರ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ವ್ಯಕ್ತಪಡಿಸಿಲ್ಲ. ಈಗ ಈ ವಿಚಾರವಾಗಿ ಹೆಚ್ಚು ಚರ್ಚೆ ಮಾಡುವುದಿಲ್ಲ’ ಎಂದರು.

ರಾಮನಗರದಲ್ಲಿ ರಾಮಮಂದಿರ ಕಟ್ಟುವ ಬಗ್ಗೆ ಸಚಿವ ಅಶ್ವತ್ಥ ನಾರಾಯಣ ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಕಟ್ಟಲಿ, ಅದನ್ನು ಬೇಡ ಎಂದು ತಡೆದಿರುವವರು ಯಾರು? ಅವರು ಜಿಲ್ಲಾ ಮಂತ್ರಿಗಳಾಗಿದ್ದು, ರಾಮಮಂದಿರ ಕಟ್ಟುತ್ತೇವೆ ಎಂದರೆ ಅದನ್ನು ತಡೆಯುತ್ತಿರುವವರು ಯಾರು? ಅವರು ರಾಮಮಂದಿರ, ಸೀತಾ ಮಂದಿರ, ಹನುಮಂತನ ಮಂದಿರ ಕಟ್ಟಲಿ, ಶಿವ ಮಂದಿರ ಕಟ್ಟಲಿ. ಬೇಕಾದರೆ ಅಶ್ವತ್ಥ ನಾರಾಯಣ ಅವರ ಮಂದಿರವನ್ನೂ ಕಟ್ಟಿಕೊಳ್ಳಲಿ. ನಾನು 35 ವರ್ಷಗಳಿಂದ ಅಲ್ಲಿ ಬಹಳ ಗಂಡುಗಳನ್ನು ನೋಡಿದ್ದೇನೆ ಎಂದರು.

ಸರ್ಕಾರ ಹವಾನಿಯಂತ್ರಿತ ಕೊಠಡಿಯಲ್ಲಿ ಮಾಸ್‌್ಕ ಧರಿಸಿ ಎಂದು ಹೇಳಿದೆ. ಆರೋಗ್ಯ ಸಚಿವರು, ಮುಖ್ಯಮಂತ್ರಿಗಳು ಹಾಗೂ ಇತರೆ ಸಚಿವರು ಹಾಗೂ ನಾಯಕರು ಎಸಿ ಕೊಠಡಿಯಲ್ಲಿ ಸಭೆ ಮಾಡುತ್ತಿದ್ದಾರೆ. ಅಧಿವೇಶನದ ಸಮಯದಲ್ಲಿ ಅವರು ಯಾಕೆ ಮಾಸ್‌್ಕ ಧರಿಸಿಲ್ಲ? ನಿನ್ನೆ ಮುಖ್ಯಮಂತ್ರಿಗಳು, ಗೃಹಸಚಿವರು ಸೇರಿದಂತೆ ಹಲವು ಮಂದಿ ಸದನದಲ್ಲಿ ಉತ್ತರ ನೀಡುವಾಗ ಮಾಸ್‌್ಕ ಯಾಕೆ ಧರಿಸಿರಲಿಲ್ಲ? ಅವರು ಹಾಕದೇ ಬೇರೆಯವರಿಗೆ ಹಾಕಿ ಎಂದು ಹೇಳುತ್ತಿದ್ದಾರೆ. ಮೊದಲು ನೀವುಗಳು ನಿಮ್ಮ ಸಭೆಗಳಲ್ಲಿ ಮಾಸ್‌್ಕ ಧರಿಸಬೇಕು. ಮಾಸ್‌್ಕ ಕಡ್ಡಾಯ ಎಂದು ಘೋಷಿಸಿದ ಮೇಲೆ ಸದನದಲ್ಲೇ ಅವರು ಧರಿಸಬೇಕಿತ್ತು. ಅದನ್ನು ಬಿಟ್ಟು ಬಾರಿನಲ್ಲಿ ಮಾಸ್‌್ಕ ಹಾಕಬೇಕು ಎಂದು ಹೇಳುತ್ತಾರೆ ಎಂದು ತಿಳಿಸಿದರು.

ಬಾರ್‌ ಹಾಗೂ ರೆಸ್ಟೋರೆಂಚ್‌ ಗಳಿಗೆ ಸ್ಪೆಷಲ… ಮಾಸ್‌್ಕ ಬಂದಿದೆ ಎಂಬ ಸಚಿವ ಅಶೋಕ ಅವರ ಹೇಳಿಕೆ ನೀಡಿದ್ದಾರೆ. ಅವರು ಹಾಗೂ ಅವರ ಸ್ನೇಹಿತರು ಮಾಸ್‌್ಕಗೆ ಪೈಪ್‌ ಅಳವಡಿಸಿಕೊಳ್ಳಲಿ. ಕೇಂದ್ರ ಮಂತ್ರಿಯಾಗಿದ್ದ ಸುರೇಶ ಅಂಗಡಿ ಅವರು ಕೋವಿಡ್‌ನಿಂದ ಸತ್ತಾಗ ಅವರ ಪಾರ್ಥೀವ ಶರೀರವನ್ನು ಅವರ ಊರಿಗೆ ತಂದು ಕುಟುಂಬಕ್ಕೆ ನೀಡಲಿಲ್ಲ. ವಿಶೇಷ ವಿಮಾನದಲ್ಲಿ ಶವವನ್ನು ರವಾನಿಸಿ ಇಲ್ಲೇ ಅಂತ್ಯ ಸಂಸ್ಕಾರ ಮಾಡಬಹುದಾಗಿತ್ತು. ಆದರೆ ಮಾಡಲಿಲ್ಲ. ಅವರು ದೇಶದ ಸಂಸ್ಕೃತಿ, ಪರಪರೆ ಬಗ್ಗೆ ಮಾತನಾಡುತ್ತಾರೆ. ಈ ಘಟನೆ ನಾಚಿಕೆಗೇಡಿನ ವಿಚಾರ. ಬಿಜೆಪಿ ನಾಯಕರು ಈ ಬಗ್ಗೆ ಮಾತನಾಡುವ ಶಕ್ತಿ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.

ಬೆಳಗಾವಿ ಗಡಿ ವಿಚಾರವಾಗಿ ಉದ್ದೇಶಪೂರ್ವಕವಾಗಿಯೇ ಬಿಜೆಪಿಯವರು ಚರ್ಚೆ ಮಾಡುತ್ತಿದ್ದಾರೆ. ಮಹಾರಾಷ್ಟ್ರ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದೆ. ಕೇಂದ್ರದಲ್ಲೂ ಅವರೇ ಇದ್ದಾರೆ. ನಾವು ಯಾವ ಹಳ್ಳಿಯನ್ನೂ ಬಿಡುವುದಿಲ್ಲ, ಅವರ ಹಳ್ಳಿಗಳು ಬೇಡ. ಜನ ಅವರ ಪಾಡಿಗೆ ಅವರು ಬದುಕುತ್ತಿದ್ದಾರೆ. ನಾವು ಇಲ್ಲಿ ಸುರ್ವಣಸೌಧ ನಿರ್ಮಾಣ ಮಾಡಿರುವುದೇ ಇದು ನಮ್ಮ ಭಾಗ ಎಂಬ ಕಾರಣಕ್ಕೆ. ಕಾಂಗ್ರೆಸ್‌ ಪಕ್ಷ ಹಾಗೂ ರಾಜ್ಯ ಮಹಾರಾಷ್ಟ್ರದ ನಿರ್ಣಯವನ್ನು ಖಂಡಿಸುತ್ತದೆ. ಇದರ ಬಗ್ಗೆ ಚರ್ಚೆ ಬೇಡ. ಗೃಹ ಸಚಿವರು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಸಿ ಮಾತನಾಡಿದರು. ಆ ಸಭೆಯಲ್ಲಿ ಏನಾಯ್ತು? ನಿನ್ನೆ ಸಚಿವರೊಬ್ಬರು ಮುಂಬೈ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಹೇಳಿದ್ದಾರೆ. ಅದನ್ನು ಮಾಡಲು ಇವರಿಂದ ಸಾಧ್ಯವೇ? ಪರಿಜ್ಞಾನ ಇಲ್ಲದೆ ಸುಮ್ಮನೆ ಮಾತನಾಡಬಾರದು. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವಂತೆ ಕಾಣುತ್ತದೆ ಎಂದರು.

Latest Videos
Follow Us:
Download App:
  • android
  • ios