ಚುನಾವಣೆ ಬಂದಾಗಷ್ಟೇ ದಳಪತಿಗಳಿಗೆ ಕಣ್ಣೀರು: ಜವರೇಗೌಡ

ಜೆಡಿಎಸ್‌ ನಾಯಕರಿಗೆ ಚುನಾವಣೆ ಬಂದಾಗ ಮಾತ್ರ ಒಕ್ಕಲಿಗರು ನೆನಪಾಗುತ್ತಾರೆ. ಚುನಾವಣೆ ಸಂದರ್ಭದಲ್ಲಷ್ಟೇ ಕಣ್ಣೀರು ಬರುತ್ತದೆ. ಉಳಿದಂತೆ ಯಾವ ಸಮಯದಲ್ಲೂ ಕಣ್ಣೀರೂ ಬರೋಲ್ಲ, ಒಕ್ಕಲಿಗರೂ ನೆನಪಾಗೋದಿಲ್ಲ ಎಂದು ಮನ್‌ಮುಲ್‌ ಮಾಜಿ ಅಧ್ಯಕ್ಷ ಜವರೇಗೌಡ ಕುಹಕವಾಡಿದರು.

Only when election comes, Dalpatis shed tears: Javare Gowda snr

  ನಾಗಮಂಗಲ :  ಜೆಡಿಎಸ್‌ ನಾಯಕರಿಗೆ ಚುನಾವಣೆ ಬಂದಾಗ ಮಾತ್ರ ಒಕ್ಕಲಿಗರು ನೆನಪಾಗುತ್ತಾರೆ. ಚುನಾವಣೆ ಸಂದರ್ಭದಲ್ಲಷ್ಟೇ ಕಣ್ಣೀರು ಬರುತ್ತದೆ. ಉಳಿದಂತೆ ಯಾವ ಸಮಯದಲ್ಲೂ ಕಣ್ಣೀರೂ ಬರೋಲ್ಲ, ಒಕ್ಕಲಿಗರೂ ನೆನಪಾಗೋದಿಲ್ಲ ಎಂದು ಮನ್‌ಮುಲ್‌ ಮಾಜಿ ಅಧ್ಯಕ್ಷ ಜವರೇಗೌಡ ಕುಹಕವಾಡಿದರು.

ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡು ಮಾತನಾಡಿ, ಜೆಡಿಎಸ್‌ಗೆ ನಾವು ನಮ್ಮನ್ನೇ ಅರ್ಪಿಸಿಕೊಂಡು ದುಡಿದೆವು. ಅವರು ಕುಟುಂಬದವರ ಬೆಳವಣಿಗೆಗೆ ಗಮನಕೊಟ್ಟರೇ ಹೊರತು ಕಾರ್ಯಕರ್ತರ ಬೆಳವಣಿಗೆಗಲ್ಲ ಎನ್ನುವುದು ನಮಗೆ ತಡವಾಗಿ ಅರ್ಥವಾಯಿತು. ಓಟು ಬೇಕಾದಾಗ ಈ ಭಾಗದ ಒಕ್ಕಲಿಗರನ್ನು ನೆನಪು ಮಾಡಿಕೊಳ್ಳುವುದು. ಅಭಿವೃದ್ಧಿ ವಿಷಯದಲ್ಲಿ ಐಐಟಿ, ವಿಮಾನ ನಿಲ್ದಾಣ, ಹಾಲಿನ ಪುಡಿ ಘಟಕ, ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ಎಲ್ಲವೂ ಹಾಸನಕ್ಕೆ ತೆಗೆದುಕೊಂಡು ಹೋಗುವುದು ಎಂದು ಟೀಕಿಸಿದರು.

ಶಾಸಕ ಸುರೇಶ್‌ಗೌಡ ಒಬ್ಬ ಕಳ್ಳ, ಸುಳ್ಳ. ಅಪ್ಪಾಜಿಗೌಡರ ಮಾತು ಕೇಳಿಕೊಂಡು ಸುರೇಶ್‌ ಗೌಡನನ್ನು ಕರೆತಂದೆವು. ಆತ ಜೆಡಿಎಸ್‌ ಕಾರ್ಯಕರ್ತರನ್ನೇ ಬೀದಿಪಾಲು ಮಾಡಿದ. ಎಚ್‌.ಟಿ.ಕೃಷ್ಣೇಗೌಡರಿಂದ 32 ಲಕ್ಷ ರು. ಹಣ ಪಡೆದು ವಾಪಸ್‌ ಕೊಡಲೇ ಇಲ್ಲ. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ಕೊಡಲು ಹಣ ಕೇಳಿದ ಶಾಸಕನನ್ನು ನೋಡಿದ್ದು ಇದೇ ಮೊದಲು. ಈ ವಿಷಯವಾಗಿ ಬಹಿರಂಗ ಚರ್ಚೆಗೂ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.

ಬ<ಗಾರಪೇಟೆ ಬಿಜೆಪಿ ಆಯ್ಕೆ ಗೊಂದಲ

 ಬಂಗಾರಪೇಟೆ :  ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಈ ತಿಂಗಳಾಂತ್ಯದಲ್ಲಿ ಘೋಷಣೆ ಮಾಡುವ ಎಲ್ಲ ಲಕ್ಷಣಗಳು ಕಾಣಿಸುತ್ತಿದ್ದರೂ ಆಡಳಿತ ರೂಢ ಬಿಜೆಪಿ ಮಾತ್ರ ಪಕ್ಷದ ಚಟುವಟಿಕೆಗಳಿಂದ ದೂರ ಸರಿದಿರುವುದು ಪಕ್ಷದ ನಿಷ್ಠಾವಂತ ಕಾರ‍್ಯಕರ್ತರಿಗೆ ಆತಂಕ ಉಂಟು ಮಾಡಿದೆ. ಆದರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿಗಳು ಮತದಾರರ ಮನಗೆಲ್ಲಲು ನಾನಾ ತಂತ್ರದಲ್ಲಿ ತೊಡಗಿದ್ದಾರೆ.

ಏಪ್ರಿಲ್‌ ಅಂತ್ಯ ಅಥವಾ ಮೇ ಮೊದಲವಾರ ವಿಧಾನಸಭೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರೆ, ಇತ್ತ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌,ಜೆಡಿಎಸ್‌ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಎಲ್ಲಾ ಗ್ರಾಮಗಳಿಗೆ ತೆರಳಿ ಯುಗಾದಿ ಹಬ್ಬದ ಹೆಸರಲ್ಲಿ ಮತದಾರರಿಗೆ ಉಡುಗೊರೆಗಳನ್ನು ನೀಡಿ ಅವರ ಮನ ಗೆಲ್ಲಲು ಮುಂದಾಗಿದ್ದಾರೆ.

 ಅಭ್ಯರ್ಥಿ ಯಾರು?:

ಆದರೆ ಆಡಳಿತ ರೂಢ ಬಿಜೆಪಿಯಲ್ಲಿ ಬಿ.ವಿ.ಮಹೇಶ್‌,ಎಂ.ನಾರಾಯಣಸ್ವಾಮಿ ಮತ್ತು ವಿ.ಶೇಷು ಈ ಮೂವರು ಟಿಕೆಟ್‌ ಆಕಾಂಕ್ಷಿಗಳಿದ್ದು ಯಾರಿಗೆ ಟಿಕೆಟ್‌ ಎಂಬುದು ಹೈಕಮಾಂಡ್‌ ಘೋಷಣೆ ಮಾಡದೆ ಗೋಪ್ಯವಾಗಿಟ್ಟಿರುವುದರಿಂದ ಮೂವರಲ್ಲಿಯೂ ಚುನಾವಣಾ ಚಟುವಟಿಕೆಗಳಲ್ಲಿ ತೊಡಗಲು ಆಸಕ್ತಿ ಇಲ್ಲದೆ ನಿರ್ಲಪ್ತವಾಗಿರುವಂತೆ ಕಾಣುತ್ತಿದೆ. ಜಿಲ್ಲಾ ಮಟ್ಟಿಗೆ ಬಿಜೆಪಿಯ ಹೈಕಮಾಂಡ್‌ ಆಗಿರುವ ಸಂಸದ ಎಸ್‌.ಮುನಿಸ್ವಾಮಿ ಸಹ ಯಾರೊಬ್ಬರಿಗೂ ಸ್ಪಷ್ಟವಾಗಿ ಇಂತಹವರಿಗೇ ಟಿಕೆಟ್‌ ಎಂದು ಹೇಳದೆ ಗೊಂದಲ ಮೂಡಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಹೆಚ್‌.ಮುನಿಯಪ್ಪ ಅವರನ್ನು ಕಾಂಗ್ರೆಸ್‌ ಶಾಸಕರು ಮತ್ತು ಕಾರ್ಯಕರ್ತರ ಬೆಂಬಲದಿಂದಲೇ ಸೋಲಿಸಿದ್ದ ಬಿಜೆಪಿ ಸಂಸದ ಮುನಿಸ್ವಾಮಿ ಈ ಋುಣ ತೀರಿಸಲು ವಿಧಾನಸಭೆ ಚುನಾವಣೆಯಲ್ಲಿ ಪರೋಕ್ಷವಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡಲು ಮುಂದಾಗಿದ್ದಾರೆಂದು ಬಿಜೆಪಿ ಕಾರ್ಯಕರ್ತರೇ ಆರೋಪಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ತಮ್ಮ ಚುನಾವಣೆಯಲ್ಲಿ ಸಹಾಯ ಮಾಡಿದ್ದರು. ಹೀಗಾಗಿ ಬಿಜೆಪಿಯಿಂದ ಪ್ರಬಲರಿಗೆ ಟಿಕೆಟ್‌ ನೀಡದೆ ಇರಲು ಹಾಗೂ ಕೊನೆ ಘಳಿಗೆಯಲ್ಲಿ ಟಿಕೆಟ್‌ ಘೋಷಣೆ ಮಾಡಿ ಕಾರ‍್ಯಕರ್ತರಲ್ಲಿ ಗೊಂದಲು ಸೃಷ್ಟಿಸಲು ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

Latest Videos
Follow Us:
Download App:
  • android
  • ios