Asianet Suvarna News Asianet Suvarna News

ಚಿಲ್ಲರೆ ಮಾರುಕಟ್ಟೆಯಲ್ಲಿ ಏರಿದ ಈರುಳ್ಳಿ ದರ ಇನ್ನು 1-2 ದಿನದಲ್ಲಿ ಇಳಿಕೆ ಸಾಧ್ಯತೆ

ಮಳೆ ಹಿನ್ನೆಲೆಯಲ್ಲಿ ಏರುಮುಖವಾಗಿದ್ದ ಈರುಳ್ಳಿ ಬೆಲೆ ಬುಧವಾರ ಸಗಟು ಮಾರುಕಟ್ಟೆಯಲ್ಲಿ ನಿಯಂತ್ರಣಕ್ಕೆ ಬಂದಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೇಜಿಗೆ ಗರಿಷ್ಠ ₹45 ನಂತೆ ಮಾರಾಟವಾಗಿದೆ. 

Onion price which has increased in the retail market is likely to decrease in 1 or 2 days gvd
Author
First Published Jun 13, 2024, 12:20 PM IST | Last Updated Jun 13, 2024, 12:20 PM IST

ಬೆಂಗಳೂರು (ಜೂ.13): ಮಳೆ ಹಿನ್ನೆಲೆಯಲ್ಲಿ ಏರುಮುಖವಾಗಿದ್ದ ಈರುಳ್ಳಿ ಬೆಲೆ ಬುಧವಾರ ಸಗಟು ಮಾರುಕಟ್ಟೆಯಲ್ಲಿ ನಿಯಂತ್ರಣಕ್ಕೆ ಬಂದಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೇಜಿಗೆ ಗರಿಷ್ಠ ₹45 ನಂತೆ ಮಾರಾಟವಾಗಿದೆ. ಟೊಮೆಟೋ ಜೊತೆಗೆ ಬೆಲೆ ಏರಿಕೆಯತ್ತ ಮುಖ ಮಾಡಿದ್ದ ಈರುಳ್ಳಿ ಕಳೆದೆರಡು ದಿನಗಳಿಂದ ಇಳಿಕೆ ಕಂಡಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ದರ ಇಳಿಕೆಗೆ ಒಂದೆರಡು ದಿನ ಬೇಕು ಎಂದು ವ್ಯಾಪಾರಸ್ಥರು ಹೇಳಿದ್ದಾರೆ.

ಕಳೆದ ವಾರದಿಂದ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಕ್ವಿಂಟಲ್‌ಗೆ ₹3600 - ₹3800 ವರೆಗೆ ತಲುಪಿತ್ತು. ಸೋಮವಾರ ಒಂದೆರಡು ಲಾಟ್‌ಗಳು ₹3200 - ₹3400 ದರಕ್ಕೆ ವ್ಯಾಪಾರವಾಗಿದ್ದು, ಉಳಿದಂತೆ ಕ್ವಿಂಟಲ್‌ಗೆ ಕನಿಷ್ಠ ₹1500 ರಿಂದ ಗರಿಷ್ಠ ₹3200 ವರೆಗೆ ಮಾರಾಟವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದಾಸ್ತಾನು ಇರುವುದರಿಂದ ಶೇಷಾದ್ರಿಪುರ, ಜಯನಗರ, ಗಾಂಧಿ ಬಜಾರ್‌ ಸೇರಿ ಇತರೆ ಮಾರುಕಟ್ಟೆಗಳಲ್ಲಿ ಕೇಜಿಗೆ ₹40- ₹45 ವರೆಗೆ ಮಾರಾಟವಾಗಿದೆ.

ದರ್ಶನ್ ಹೀರೋ ಅಲ್ಲ ವಿಲನ್: ಪರಿಹಾರ ಕೇಳಲು ಹೋದವರಿಗೆ ನಾಯಿ ಛೂ ಬಿಟ್ಟು ಡಿ ಬಾಸ್ ಗ್ಯಾಂಗ್ ವಿಕೃತಿ! ಏನಿದು ಕರಾಳ ಕಥೆ?

ಬುಧವಾರ ಯಶವಂತಪುರ ಎಪಿಎಂಸಿಗೆ 46,450 ಚೀಲ ಹಾಗೂ ದಾಸನಪುರ ಮಾರುಕಟ್ಟೆಗೆ 3,426 ಚೀಲ ಈರುಳ್ಳಿ ಬಂದಿದೆ. ಮಹಾರಾಷ್ಟ್ರದಿಂದ ಹೆಚ್ಚು ಪ್ರಮಾಣದಲ್ಲಿ ಬಂದಿದೆ. ವಿಜಯಪುರದಿಂದ ಒಂದಿಷ್ಟು ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದೆ. ಮಳೆಯಾದ ಕಾರಣ ಈರುಳ್ಳಿ ಸಾಗಾಟದ ಸಮಸ್ಯೆಯಿಂದ ದರ ಹೆಚ್ಚಿತ್ತು. ಈಗ ಮಾರುಕಟ್ಟೆಗೆ ಹೆಚ್ಚಾಗಿ ಬೆಳೆ ಬರುತ್ತಿರುವ ಕಾರಣ ದರ ನಿಯಂತ್ರಣಕ್ಕೆ ಬಂದಿದೆ. ಚಿಲ್ಲರೆ ಮಾರುಕಟ್ಟೆಯಲ್ಲೂ ದರ ಕಡಿಮೆಯಾಗಲಿದೆ ಎಂದು ವ್ಯಾಪಾರಸ್ಥ ಬಿ. ರವಿಶಂಕರ್‌ ತಿಳಿಸಿದರು.

Latest Videos
Follow Us:
Download App:
  • android
  • ios