ಮಂಗಳೂರು(ನ.28): ‘ಕೋಳಿ ರೇಟ್‌ ಕೇಳಿ ಮಸಾಲೆ ಅರೆಯಿರಿ’ ಎನ್ನುವುದಕ್ಕಿಂತಲೂ ಈಗ ಈರುಳ್ಳಿ ರೇಟ್‌ ಕೇಳಿ ಮಸಾಲೆ ಅರೆಯಿರಿ ಎನ್ನುವ ಮಾತೇ ಮಂಗಳೂರು ಮಾರುಕಟ್ಟೆಯಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಕಾರಣ ಈರುಳ್ಳಿ ದರ ಶತಕ ದಾಟಿದೆ!

ಹೌದು. ಮಂಗಳೂರು ಕೇಂದ್ರ ಮಾರುಕಟ್ಟೆಯಲ್ಲಿ ಈಗ ಹಳೆ ಈರುಳ್ಳಿ ಕೆಜಿಗೆ 100 ರು., ಹೊರಗೆ ದಿನಸಿ ಮತ್ತಿತರ ಅಂಗಡಿಗಳಲ್ಲಿ ಇನ್ನೂ 5-10 ರು. ಜಾಸ್ತಿ. ಜನಸಾಮಾನ್ಯರು ಮುಟ್ಟಿಯೂ ನೋಡುವಂತಿಲ್ಲ. ರೇಟ್‌ ಕೇಳಿಯೇ ‘ತೃಪ್ತ’ರಾಗಿ ವಾಪಸ್‌ ಹೋಗುತ್ತಿದ್ದಾರೆ.

ಚಾರ್ಮಾಡಿ ರಸ್ತೆ ಸಂಚಾರಕ್ಕೆ ಮುಕ್ತ : ಆದ್ರೆ ಕಂಡೀಶನ್ ಇದೆ

ಕಳೆದ 2-3 ತಿಂಗಳಿನಿಂದ ಈರುಳ್ಳಿ ದರ ಏರಿಕೆ ಗತಿಯಲ್ಲೇ ಸಾಗುತ್ತಿದೆ. ಆರಂಭದಲ್ಲಿ 50 ರು. ಆಸುಪಾಸಿನಲ್ಲಿದ್ದ ದರ 20-25 ದಿನಗಳ ನಂತರ ಪೆಟ್ರೋಲ್‌ ದರವನ್ನೂ ಹಿಂದಿಕ್ಕಿತ್ತು. ಈಗ ಎರಡ್ಮೂರು ದಿನಗಳಿಂದ ಭರ್ತಿ ಶತಕದದಲ್ಲಿದೆ. ಹೀಗಾಗಿ ಅನಿವಾರ್ಯ ಎನ್ನುವವರು ಮಾತ್ರ ಕೊಳ್ಳುತ್ತಿದ್ದಾರೆ. ಅದೂ ಕಾಲು, ಅರ್ಧ ಕೆಜಿ ಲೆಕ್ಕದಲ್ಲಿ ಮಾತ್ರ. ಹೊಟೇಲ್‌ ಅಡುಗೆ ರುಚಿಗೆ ಈರುಳ್ಳಿ ಬೇಕೇ ಬೇಕು. ಆದರೆ ಈಗ ಬಹುತೇಕ ಹೊಟೇಲ್‌ನವರು ಕೂಡ ಈರುಳ್ಳಿ ಬಳಸುತ್ತಿಲ್ಲ.

ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಎಂಟಿಬಿ ಬೆಂಬಲಿಗನ ಮೇಲೆ ಗಂಭೀರ ಹಲ್ಲೆ

ಮಳೆಗಾಲದಲ್ಲಿ ಉತ್ತರ ಕರ್ನಾಟಕದಲ್ಲಿ ಸುರಿದ ಭಾರಿ ಮಳೆ- ಪ್ರವಾಹದಿಂದ ಈರುಳ್ಳಿ ಬೆಳೆ ನಿರ್ನಾಮವಾಗಿದ್ದರ ಪರಿಣಾಮ ಇದು. ಇನ್ನೂ ಹಲವು ದಿನ ಇದೇ ದರ ಮುಂದುವರಿಯುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.