ದಾವಣಗೆರೆಯಲ್ಲಿ 1 ಕೊರೋನಾ ಪಾಸಿಟಿವ್‌, 10 ಬಿಡುಗಡೆ

ದಾವಣಗೆರೆ ಜಿಲ್ಲೆಯಲ್ಲಿ ಶುಕ್ರವಾರ(ಜೂ.26)ರಂದು ಒಂದು ಕೊರೋನಾ ಪ್ರಕರಣ ಪತ್ತೆಯಾಗಿದೆ. ಇನ್ನು 10 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

One Positive Case and 10 Corona Patient discharged in davanagere On June 26th

ದಾವಣಗೆರೆ(ಜೂ.27): ಬಳ್ಳಾರಿ ಜಿಲ್ಲೆಯ ಹೊಸಪೇಟೆಯ 14 ವರ್ಷದ ಓರ್ವ ಬಾಲಕನಲ್ಲಿ ಶುಕ್ರವಾರ ಸೋಂಕು ದೃಢಪಟ್ಟಿದೆ. ಸೋಂಕಿನಿಂದ ಸಂಪೂರ್ಣ ಗುಣಮುಖರಾದ 10 ಜನರು ಜಿಲ್ಲಾ ನಿಗದಿತ ಕೋವಿಡ್‌-19 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ ಈಗ ಸಕ್ರಿಯ ಕೇಸ್‌ಗಳ ಸಂಖ್ಯೆ 39ಕ್ಕೆ ಇಳಿಕೆಯಾಗಿದೆ.

ಹೊಸಪೇಟೆ ಮೂಲದ 48 ವರ್ಷದ ಪುರುಷ (ಪಿ-10388) ಸಂಪರ್ಕದಿಂದ 14 ವರ್ಷದ ಬಾಲಕ (ಪಿ-10986)ನಿಗೆ ಸೋಂಕು ತಗುಲಿದೆ. ಸೋಂಕಿನಿಂದ ಗುಣಮುಖರಾದ 28 ವರ್ಷದ ಮಹಿಳೆ (ಪಿ-8064), 18 ವರ್ಷದ ಮಹಿಳೆ (8065), 54 ವರ್ಷದ ಮಹಿಳೆ (8070), 12 ವರ್ಷದ ಬಾಲಕ (8072), 60 ವರ್ಷದ ವೃದ್ಧೆ (8072), 24 ವರ್ಷದ ಮಹಿಳೆ(8073), 48 ವರ್ಷದ ಮಹಿಳೆ (8074), 65 ವರ್ಷದ ಪುರುಷ (8075) ಸೋಂಕಿನಿಂದ ಗುಣಮುಖರಾಗಿ, ಬಿಡುಗಡೆಯಾಗಿದ್ದಾರೆ. 40 ವರ್ಷದ ಪುರುಷ (7575), 25 ವರ್ಷದ ಮಹಿಳೆ (7803) ಸೋಂಕಿನ ಲಕ್ಷಣದಿಂದ 10 ದಿನಗಳ ಅವಧಿಯನ್ನು ಪೂರ್ಣಗೊಳಿಸಿ, ಬಿಡುಗಡೆಯಾಗಿದ್ದಾರೆ.

ಐವರು ಚಾಲಕರಿಗೆ ಸೋಂಕು: ಕೊರೋನಾ ಸ್ಫೋಟದ ಸಾಧ್ಯತೆ

ಜಿಲ್ಲೆಯಲ್ಲಿ ಈವರೆಗೆ ಒಟ್ಟು 283 ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ 7 ಜನರು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಸೋಂಕಿನಿಂದ ಸಂಪೂರ್ಣ ಗುಣಮುಖರಾದ 237 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 39 ಸಕ್ರಿಯ ಕೇಸ್‌ಗಳಿದ್ದು, ಸೋಂಕಿತರಿಗೆ ಜಿಲ್ಲಾ ನಿಗದಿತ ಕೋವಿಡ್‌-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಂಟೈನ್‌ಮೆಂಟ್‌ಗಳಲ್ಲಿ ನಿಗದಿತವಾಗಿ ಆರೋಗ್ಯ ತಪಾಸಣೆ, ಸ್ವಾಬ್‌ ಸಂಗ್ರಹ, ತಪಾಸಣೆ ಕಾರ್ಯ ಕೈಗೊಳ್ಳಲಾಗುತ್ತಿದೆ.
 

Latest Videos
Follow Us:
Download App:
  • android
  • ios