ದಾವಣಗೆರೆಯಲ್ಲಿ ಕೊರೋನಾ ಸೋಂಕಿಗೆ ಮತ್ತೊಬ್ಬ ಬಲಿ..!

ದಾವಣಗೆರೆಯಲ್ಲಿ ಸೋಮವಾರ(ಜು.06) ಮತ್ತೊಂದು ಸಾವು ಸಂಭವಿಸಿದೆ. ಇನ್ನು ಹೊಸದಾಗಿ 3 ಪಾಸಿಟಿವ್‌ ಪ್ರಕರಣ ವರದಿಯಾಗಿದ್ದು, ಸೋಂಕಿನಿಂದ ಸಂಪೂರ್ಣ ಗುಣಮುಖರಾದ 10 ಜನರು ಬಿಡುಗಡೆಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

one more COVID 19 Death confirmed in Davanagere on July 6th

ದಾವಣಗೆರೆ(ಜು.07): ಸೋಂಕಿಗೆ ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿ ಬಲಿಯಾಗುವುದರೊಂದಿಗೆ ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಹೊಸದಾಗಿ 3 ಪಾಸಿಟಿವ್‌ ಪ್ರಕರಣ ವರದಿಯಾಗಿದ್ದು, ಸೋಂಕಿನಿಂದ ಸಂಪೂರ್ಣ ಗುಣಮುಖರಾದ 10 ಜನರು ಬಿಡುಗಡೆಯಾಗಿದ್ದಾರೆ. ಪ್ರಸ್ತುತ ಸಕ್ರಿಯ ಕೇಸ್‌ಗಳ ಸಂಖ್ಯೆ 36ಕ್ಕೆ ಇಳಿಕೆಯಾಗಿದೆ.

ಬಳ್ಳಾರಿ ಜಿಲ್ಲೆ ಹರಪನಹಳ್ಳಿ ಭಾರತಿ ನಗರ ನಿವಾಸಿ 49 ವರ್ಷದ ವ್ಯಕ್ತಿ(ಪಿ-18103)ಯು ಸೋಂಕಿಗೆ ಬಲಿಯಾಗಿದ್ದಾರೆ. ಶೀತ, ಕೆಮ್ಮು, ಜ್ವರ ಸಮಸ್ಯೆಯಿಂದ ಬಳಲುತ್ತಿದ್ದ ಚನ್ನಗಿರಿ ತಾ. ಹರೋಸಾಗರದ 59 ವರ್ಷದ ಪುರುಷ(23564)ನು ತೀವ್ರ ಉಸಿರಾಟದ ಸಮಸ್ಯೆಯಿಂದ, ಹರಿಹರದ ಇಂದಿರಾ ನಗರದ 28 ವರ್ಷದ ಮಹಿಳೆ(23565)ಯು ಪಿ-11156ರ ಸಂಪರ್ಕದಿಂದ ಸೋಂಕಿಗೊಳಗಾಗಿದ್ದಾರೆ. ಆಂಧ್ರಪ್ರದೇಶದ ರಾಯದುರ್ಗದ 63 ವರ್ಷದ ವೃದ್ಧ(23566) ತೀವ್ರ ಉಸಿರಾಟ ತೊಂದರೆ(ಎಸ್‌ಎಆರ್‌ಐ)ನಿಂದಾಗಿ ಸೋಂಕಿಗೆ ತುತ್ತಾಗಿದ್ದಾರೆ.

ಕೋಟೆ ನಾಡಲ್ಲಿ 6 ಮಂದಿಗೆ ಕೊರೋನಾ ಪಾಸಿಟಿವ್

ಆವರಗೆರೆ ಗ್ರಾಮದ 34 ವರ್ಷದ ಪುರುಷ(ಪಿ-9420), ತರಳಬಾಳು ಬಡಾವಣೆಯ 64 ವರ್ಷದ ವೃದ್ಧ(11951), 55 ವರ್ಷದ ಪುರುಷ(11953), ಹೊನ್ನಾಳಿ ತಾ. ದೊಡ್ಡೇರಿ ಗ್ರಾಮದ 38 ವರ್ಷದ ಪುರುಷ(13222), ಚಿನ್ನಿಕಟ್ಟೆಯ 63 ವರ್ಷದ ವೃದ್ಧ(13223), ದಾವಣಗೆರೆ ತಾಲೂಕಿನ ನೇರ್ಲಿಗೆ ಗ್ರಾಮದ 45 ವರ್ಷದ ಪುರುಷ(15373), ನಿಟುವಳ್ಳಿಯ ದೇವರಾಜ ಸೊಸೈಟಿ ಸಮೀಪದ 60 ಅಡಿ ರಸ್ತೆಯ 17 ವರ್ಷದ ಯುವಕ(16668) ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಚನ್ನಗಿರಿ ತಾ. ರಾಜಗೊಂಡನಹಳ್ಳಿಯ 40 ವರ್ಷದ ಪುರುಷ(16671), ಹೊನ್ನಾಳಿ ತಾ. ಕ್ಯಾಸಿನಕೆರೆ ಗ್ರಾಮದ ಮುಖ್ಯರಸ್ತೆ ಸಮೀಪದ 19 ವರ್ಷದ ಯುವಕ(16672), ದಾವಣಗೆರೆ ಪಿ.ಬಿ.ರಸ್ತೆಯ ಬಿಲಾಲ್‌ ಕಾಂಪೌಂಡ್‌ನ 24 ವರ್ಷದ ಯುವಕ(16673) ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈ ಹತ್ತು ಜನರಿಗೆ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ.

Latest Videos
Follow Us:
Download App:
  • android
  • ios