Asianet Suvarna News Asianet Suvarna News

ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ 5ನೇ ದಿನವೂ ಒಂದು ಲಕ್ಷ ಕ್ಯುಸೆಕ್‌ ನೀರು

ತುಂಗಭದ್ರಾ ಜಲಾಶಯಕ್ಕೆ ಕಳೆದ 5 ದಿನಗಳಲ್ಲಿ 5,49,877 ಕ್ಯುಸೆಕ್‌ ನೀರು ಹರಿದು ಬಂದಿದೆ| ಜಲಾಶಯದ ನೀರಿನ ಮಟ್ಟವು 1627.23 ಅಡಿಗಳಷ್ಟು ಇತ್ತು| ಡ್ಯಾಂನಲ್ಲಿ 80 ಟಿಎಂಸಿ ನೀರು ಶೇಖರಣೆ| 

One lakh cusecs of water Inflow to Tungabhadra Dam in Hosapete
Author
Bengaluru, First Published Aug 12, 2020, 2:47 PM IST

ಮುನಿರಾಬಾದ್‌(ಆ.12): ತುಂಗಭದ್ರಾ ಜಲಾಶಯಕ್ಕೆ ಮಂಗಳವಾರ 1,04,000 ಕ್ಯುಸೆಕ್‌ ನೀರು ಹರಿದು ಬಂದಿದ್ದು, ಜಲಾಶಯದ ನೀರಿನ ಮಟ್ಟವು 1627.23 ಅಡಿಗಳಷ್ಟು ಇತ್ತು. ಜಲಾಶಯದಲ್ಲಿ 80 ಟಿಎಂಸಿ ಗಳಷ್ಟು ನೀರು ಶೇಖರಣೆಯಾಗಿರುತ್ತದೆ.

5 ದಿನಗಳಲ್ಲಿ 5,49,877 ಕ್ಯುಸೆಕ್‌ ನೀರು

ತುಂಗಭದ್ರಾ ಜಲಾಶಯಕ್ಕೆ ಕಳೆದ 5 ದಿನಗಳಲ್ಲಿ (ಶುಕ್ರವಾರದಿಂದ ಮಂಗಳವಾರದ ವರೆಗೆ) 5,49,877 ಕ್ಯುಸೆಕ್‌ ನೀರು ಹರಿದು ಬಂದಿದೆ. ಶುಕ್ರವಾರ ಜಲಾಶಯಕ್ಕೆ 1,03,000 ಕ್ಯುಸೆಕ್‌, ಶನಿವಾರ 1,06,000 ​ಕ್ಯುಸೆಕ್‌, ​ಭಾ​ನುವಾರ 1,20,000 ​ಕ್ಯುಸೆಕ್‌, ಸೋಮವಾರ 1,16,877 ​ಕ್ಯುಸೆಕ್‌ ಹಾಗೂ ಮಂಗಳವಾರ 1,04,000 ಕ್ಯುಸೆಕ್‌ ನೀರು ಹರಿದು ಬಂದಿದೆ. 

ಹೊಸಪೇಟೆ: ತುಂಗಭದ್ರಾ ಡ್ಯಾಂಗೆ ಒಂದೇ ದಿನ 9 ಟಿಎಂಸಿ ನೀರು..!

ಇಂದಿನಿಂದ ಜಲಾಶಯಕ್ಕೆ ಹರಿದು ಬರುವ ನೀರಿನ ಒಳಹರಿವಿನ ಪ್ರಮಾಣ ಇಳಿಮುಖವಾಗಲಿದ್ದು, ಅದು 70ರಿಂದ 80 ಸಾವಿರ ಕ್ಯುಸೆ​ಕ್‌ ಅಸುಪಾಸಿನಲ್ಲಿ ಇರಲಿದೆ ಎಂಬ ಮಾಹಿತಿಯು ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.
 

Follow Us:
Download App:
  • android
  • ios